ಆ್ಯಪ್ನಗರ

ಇಮ್ರಾನ್ ಖಾನ್ ಪಕ್ಷಕ್ಕೆ 33 ಮೀಸಲು ಸ್ಥಾನ: ಪಿಟಿಐ ತೆಕ್ಕೆಗೆ 158 ಸ್ಥಾನ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್‌(ಪಿಟಿಐ) ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಸರಕಾರ ರಚನೆಗೆ ಕಸರತ್ತು ನಡೆಯುತ್ತಿರುವಾಗಲೇ ಪಾಕಿಸ್ತಾನ ಚುನಾವಣಾ ಆಯೋಗ ಶನಿವಾರ ಅಲ್ಲಿನ ಪಕ್ಷಗಳಿಗೆ ಮೀಸಲು ಸ್ಥಾನವನ್ನು ನಿಗದಿಪಡಿಸಿದೆ.

Vijaya Karnataka Web 12 Aug 2018, 5:18 pm
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್‌ (ಪಿಟಿಐ) ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಸರಕಾರ ರಚನೆಗೆ ಕಸರತ್ತು ನಡೆಯುತ್ತಿರುವಾಗಲೇ ಪಾಕಿಸ್ತಾನ ಚುನಾವಣಾ ಆಯೋಗ ಶನಿವಾರ ಅಲ್ಲಿನ ಪಕ್ಷಗಳಿಗೆ ಮೀಸಲು ಸ್ಥಾನವನ್ನು ನಿಗದಿಪಡಿಸಿದೆ.
Vijaya Karnataka Web imran_khan


ಪ್ರಧಾನಿ ಆಕಾಂಕ್ಷಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐಗೆ 28 ಮಹಿಳಾ ಮೀಸಲು ಸ್ಥಾನ ದೊರೆತಿದ್ದು, ಮತ್ತು 5 ಮುಸ್ಲಿಮೇತರರಿಗೆ ನೀಡುವ ಸ್ಥಾನ ಲಭಿಸಿದೆ. ಇದರಿಂದ ಪಿಟಿಐ ಬಲ ಒಟ್ಟು 158ಕ್ಕೆ ತಲುಪಿದೆ. ಆದರೆ ಸರಳ ಬಹುಮತ ಪಡೆಯಬೇಕಾದರೆ ಇನ್ನೂ 14 ಸ್ಥಾನಗಳ ಕೊರತೆಯಿದೆ.

ಒಟ್ಟು 60 ಮಹಿಳಾ ಮೀಸಲು ಸ್ಥಾನ ಮತ್ತು 10 ಅಲ್ಪಸಂಖ್ಯಾತರಿಗೆ ನಿಗದಿಪಡಿಸಿದ ಸ್ಥಾನಗಳಿವೆ. ಅದರ ಪೈಕಿ ಪಿಟಿಐಗೆ 28 ಸ್ಥಾನ ಲಭ್ಯವಾಗಿದೆ.

342 ಸ್ಥಾನಗಳ ಪಾಕ್ ಸಂಸತ್‌ನಲ್ಲಿ ಪಿಟಿಐ ಒಟ್ಟಾರೆ ಸರಕಾರ ರಚನೆಗೆ ಅಗತ್ಯವಾದ 172 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿದೆ ಎಂದು ಪಕ್ಷ ಹೇಳಿಕೊಂಡಿದೆ. ಆದರೆ ಸಣ್ಣ ಪಕ್ಷ ಮತ್ತು ಇತರ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದು ಇಮ್ರಾನ್ ಖಾನ್ ಸರಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ