ಆ್ಯಪ್ನಗರ

ಥಾಯ್ಲೆಂಡ್‌ ಗುಹೆಯಲ್ಲಿ ಸಿಲುಕಿದ್ದ ಎಂಟು ಬಾಲಕರ ರಕ್ಷಣೆ

ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಸಿಲುಕಿದ್ದ 12 ಬಾಲಕರು ಮತ್ತು ಓರ್ವ ಫುಟ್ಬಾಲ್ ತರಬೇತುದಾರರ ಪೈಕಿ ಎಂಟು ಮಂದಿಯನ್ನು ರಾಯಲ್ ಥಾಯ್ ನೇವಿ ರಕ್ಷಿಸಿದೆ.

Vijaya Karnataka Web 9 Jul 2018, 6:12 pm
ಬ್ಯಾಂಕಾಕ್: ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಸಿಲುಕಿದ್ದ 12 ಬಾಲಕರು ಮತ್ತು ಓರ್ವ ಫುಟ್ಬಾಲ್ ತರಬೇತುದಾರರ ಪೈಕಿ ಎಂಟು ಮಂದಿಯನ್ನು ರಾಯಲ್ ಥಾಯ್ ನೇವಿ ರಕ್ಷಿಸಿದೆ.
Vijaya Karnataka Web Thai CAVE 2


ಗುಹೆಯಲ್ಲಿ ಸಿಲುಕಿಕೊಂಡಿದ್ದ ಬಾಲಕರ ರಕ್ಷಣೆಗೆ ಭಾನುವಾರ ಸಂಜೆ ಥಾಯ್ಲೆಂಡ್ ಸೇನೆ ತಜ್ಞರ ನೆರವಿನಿಂದ ಕಾರ್ಯಾಚರಣೆ ಆರಂಭಿಸಿತ್ತು. ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ನಾಲ್ಕು ಬಾಲಕರನ್ನು ರಕ್ಷಿಸಲಾಗಿತ್ತು. ನಂತರ ಗುಹೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿ ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ರಕ್ಷಿಸಲ್ಪಟ್ಟ ಬಾಲಕರನ್ನು ಗುಹೆಯಿಂದ ಹೊರಗೆ ತಂದು ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರವೇ ಕಾರ್ಯಾಚರಣೆ ಆರಂಭಿಸಿ, ವೈದ್ಯರು ಗುಹೆಗೆ ತೆರಳಿ ಅಲ್ಲಿ ಸಿಲುಕಿಕೊಂಡಿದ್ದ ಬಾಲಕರು ಮತ್ತು ಕೋಚ್‌ನ ಆರೋಗ್ಯ ಪರಿಶೀಲಿಸಿದ್ದರು. ನಂತರವಷ್ಟೇ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಗುಹೆಗೆ ತೆರಳಿ ವಾಪಸ್ ಬರುವ ಹಾದಿ ಕೆಸರುಮಯವಾಗಿದ್ದು, ಅಡಚಣೆ ಸೃಷ್ಟಿಯಾಗಿತ್ತು. ಹೀಗಾಗಿ ಒಂದು ಬಾರಿಗೆ ಇಬ್ಬರು ಬಾಲಕರನ್ನು ಮಾತ್ರ ರಕ್ಷಿಸಲು ಸಾಧ್ಯವಾಗುತ್ತಿತ್ತು.

ಬಾಲಕರ ರಕ್ಷಣೆಗೆ ಸೋಮವಾರ ಎರಡನೇ ಹಂತದ ಕಾರ್ಯಾಚರಣೆಯಲ್ಲಿ ವಿದೇಶದ 50 ಅನುಭವಿ ಮುಳುಗುಗಾರರ ಸಹಿತ ಒಟ್ಟು 90 ಮುಳುಗುಗಾರರು ಸಾಥ್ ನೀಡಿದ್ದರು. ಗುಹೆಗೆ ತೆರಳುವ ಹಾದಿ ಅತ್ಯಂತ ದುರ್ಗಮವಾಗಿದ್ದು, ಒಂದು ಬಾರಿ ಹೋಗಿ ವಾಪಸ್ ಬರಲು ಸುಮಾರು 11 ತಾಸು ತಗುಲುತ್ತದೆ.

ವೈಲ್ಡ್‌ಬೋರ್ ಫುಟ್ಬಾಲ್ ತಂಡದ 12 ಬಾಲಕರು ಕೋಚ್‌ ಜತೆ ಜೂನ್‌ 23ರಂದು ತಾಮ್ ಯೆವಾನ್ ಗುಹೆಗೆ ತೆರಳಿದ್ದ ಸಂದರ್ಭ ಅಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿ ಸಿಲುಕಿಕೊಂಡಿದ್ದರು. ಗುಹೆಯಲ್ಲಿ ನೀರು ತುಂಬಿದ್ದರಿಂದ ಅವರು ಹೊರಗೆ ಬರಲು ಸಾಧ್ಯವಾಗಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ