ಆ್ಯಪ್ನಗರ

ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್‌ಗೆ ತಗುಲಿದ ಮಾರಕ ಕೊರೊನಾ ವೈರಸ್!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಮಾರಕ ಕೊರೊನಾ ವೈರಸ್ ತಗುಲಿದ್ದು, ಈ ಕುರಿತು ಖುದ್ದು ಮಿಖಾಯಿಲ್ ಮಿಶುಸ್ಟಿನ್‌ ಮಾಹಿತಿ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸ್ವಯಂ ದಿಗ್ಬಂಧನಕ್ಕೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

Vijaya Karnataka Web 30 Apr 2020, 11:36 pm
ಮಾಸ್ಕೋ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಮಾರಕ ಕೊರೊನಾ ವೈರಸ್ ತಗುಲಿದ್ದು, ಈ ಕುರಿತು ಖುದ್ದು ಮಿಖಾಯಿಲ್ ಮಿಶುಸ್ಟಿನ್‌ ಮಾಹಿತಿ ನೀಡಿದ್ದಾರೆ.
Vijaya Karnataka Web Mikhail Mishustin
ಸಂಗ್ರಹ ಚಿತ್ರ


ತಮಗೆ ಕೊರೊನಾ ವೈರಸ್ ಸೊಂಕು ತಗುಲಿದ್ದು, ತಮ್ಮ ಕ್ಯಾಬಿನೆಟ್ ಸಚಿವರ ಆರೋಗ್ಯದ ಹಿತ ದೃಷ್ಟಿಯಿಂದ ಸ್ವಯಂ ದಿಗ್ಬಂಧನಕ್ಕೆ ಗುರಿಯಾಗಿರುವುದಾಗಿ
ಮಿಖಾಯಿಲ್ ಮಿಶುಸ್ಟಿನ್‌ ಮಾಹಿತಿ ನೀಡಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ತಗುಲಿದ ಮಾರಕ ಕೊರೊನಾ ವೈರಸ್!

ಈ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟನ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಮಿಖಾಯಿಲ್ ಮಿಶುಸ್ಟಿನ್‌, ವೈದ್ಯರ ಸಲಹೆ ಮೇರೆಗೆ ಸ್ವಯಂ ದಿಗ್ಬಂಧನಕ್ಕೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.


ಮಿಖಾಯಿಲ್ ಮಿಶುಸ್ಟಿನ್ ಅವರ ಶೀಘ್ರ ಚೇತರಿಕೆಗೆ ಹಾರೈಸಿರುವ ಅಧ್ಯಕ್ಷ ಪುಟಿನ್, ಮಿಖಾಯಿಲ್ ಬೇಗ ಸರ್ಕಾರದ ಜವಾಬ್ದಾರಿಗಳನ್ನು ನೋಡಿಕೊಳ್ಳುವಂತಾಗಲಿ ಎಂದು ಶುಭ ಕೋರಿದ್ದಾರೆ.

ಕೊರೊನಾದಿಂದ ಚೇತರಿಸಿಕೊಂಡ ಬ್ರಿಟನ್‌ ಪ್ರಧಾನಿ, ಕಚೇರಿಗೆ ಹಾಜರಾದ ಬೋರಿಸ್‌ ಜಾನ್ಸನ್

ಇನ್ನು ತಮ್ಮ ಅನುಪಸ್ಥಿತಿಯಲ್ಲಿ ಉಪ ಪ್ರಧಾನಿ ಆ್ಯಂಡ್ರೆ ಬೆಲೊಸೌವ್ ತಾತ್ಕಾಲಿಕವಾಗಿ ಸರ್ಕಾರದ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂದು ಮಿಖಾಯಿಲ್ ಮಿಶುಸ್ಟಿನ್ ಸ್ಪಷ್ಟಪಡಿಸಿದ್ದಾರೆ.

ಬ್ರಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೂ ಮಾರಕ ಕೊರೊನಾ ವೈರಸ್ ತಗುಲಿದ್ದು, ಸೂಕ್ತ ಚಿಕಿತ್ಸೆಯ ಬಳಿಕ ಅವರು ಸಂಪೂರ್ಣವಾಗಿ ಗುಣಮುಖರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ