ಆ್ಯಪ್ನಗರ

ಮಾರ್ಗಮಧ್ಯೆ ರಾಕೆಟ್‌ ವಿಫಲ, ಗಗನಯಾತ್ರಿಗಳು ಸೇಫ್‌

​ಅಮೆರಿಕದ ನಿಕ್‌ ಹೇಗ್‌ ಮತ್ತು ರಷ್ಯಾದ ಅಲೆಕ್ಸಿ ಒವಚಿನಿ ಅವರು ರಾಕೆಟ್‌ನಲ್ಲಿದ್ದ 'ಸೊಯೂಜ್‌' ವ್ಯೂಮನೌಕೆ ಮೂಲಕ ಐಎಸ್‌ಎಸ್‌ಗೆ ತೆರಳುತ್ತಿದ್ದರು.

Vijaya Karnataka Web 11 Oct 2018, 4:42 pm
ಮಾಸ್ಕೋ: ರಷ್ಯಾದ 'ಬೈಕೊನುರ್‌ ಕಾಸ್ಮೋಡ್ರೋಮ್‌' ಅಂತರಿಕ್ಷ ನೌಕಾ ನೆಲೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್‌) ಗುರುವಾರ ಉಡಾವಣೆಗೊಂಡ ರಾಕೆಟ್‌ವೊಂದು ಮಾರ್ಗ ಮಧ್ಯೆ ವಿಫಲಗೊಂಡು ತುರ್ತು ಭೂ ಸ್ಪರ್ಶ ಮಾಡಿದೆ.
Vijaya Karnataka Web Rocket


ರಾಕೆಟ್‌ನಲ್ಲಿದ್ದ ರಷ್ಯಾ ಮತ್ತು ಅಮೆರಿಕ ಮೂಲದ ಇಬ್ಬರ ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ.

ಅಮೆರಿಕದ ನಿಕ್‌ ಹೇಗ್‌ ಮತ್ತು ರಷ್ಯಾದ ಅಲೆಕ್ಸಿ ಒವಚಿನಿ ಅವರು ರಾಕೆಟ್‌ನಲ್ಲಿದ್ದ 'ಸೊಯೂಜ್‌' ವ್ಯೂಮನೌಕೆ ಮೂಲಕ ಐಎಸ್‌ಎಸ್‌ಗೆ ತೆರಳುತ್ತಿದ್ದರು.

ಯಶಸ್ವಿಯಾಗಿ ಉಡಾವಣೆಗೊಂಡ ರಾಕೆಟ್‌ ಆರಂಭದಲ್ಲಿ ನಿರೀಕ್ಷೆಯಂತೆ ಪಥದಲ್ಲಿ ಚಲಿಸಿತಾದರೂ, ಮಾರ್ಗ ಮಧ್ಯೆ 'ಬೂಸ್ಟರ್‌ ರಾಕೆಟ್‌' ಚಾಲನೆ ವಿಫಲವಾಯಿತು.

ಇದರಿಂದ ಕೆಲಕಾಲ ವಿಚಲಿತರಾದ ಗಗನಯಾತ್ರಿಗಳು, ಎಮರ್ಜೆನ್ಸಿ ಲ್ಯಾಂಡಿಂಗ್‌ ಆಯ್ಕೆ ಬಳಸಿ ಸುರಕ್ಷಿತವಾಗ ಭೂಮಿಗೆ ವಾಪಸಾಗಿದ್ದಾರೆ. ರಾಕೆಟ್‌ ವಿಫಲವಾದಾಗ ವ್ಯೂಮನೌಕೆಯ ಒಳಗೆ ಗಗನಯಾತ್ರಿಗಳು ಪರದಾಡಿದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ