ಆ್ಯಪ್ನಗರ

ಪತ್ರಕರ್ತ ಖಷೋಗಿ ಹತ್ಯೆಗೆ ಸೌದಿ ರಾಜಕುಮಾರನಿಂದಲೇ ಆದೇಶ

ಖ್ಯಾತ ಪತ್ರಕರ್ತ ಜಮಾಲ್‌ ಖಷೋಗಿಯನ್ನು ಸೆರೆ ಹಿಡಿಯಬೇಕು ಅಥವಾ ಹತ್ಯೆಗೈಯ್ಯಬೇಕು ಎಂಬುದಾಗಿ ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆದೇಶ ನೀಡಿದ್ದರು ಎಂದು ಅಮೆರಿಕದ ಗುಪ್ತಚರ ವರದಿ ತಿಳಿಸಿದೆ.

Vijaya Karnataka Web 1 Mar 2021, 7:18 am
ವಾಷಿಂಗ್ಟನ್‌: ಖ್ಯಾತ ಅಂಕಣಕಾರ, ಪತ್ರಕರ್ತ ಜಮಾಲ್‌ ಖಷೋಗಿಯನ್ನು ಸೆರೆ ಹಿಡಿಯಬೇಕು ಅಥವಾ ಹತ್ಯೆಗೈಯ್ಯಬೇಕು ಎಂಬುದಾಗಿ ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆದೇಶ ನೀಡಿದ್ದರು ಎಂದು ಅಮೆರಿಕದ ಗುಪ್ತಚರ ವರದಿ ತಿಳಿಸಿದೆ.
Vijaya Karnataka Web Mohammed bin Salman


ನ್ಯಾಷನಲ್‌ ಇಂಟೆಲಿಜೆನ್ಸ್‌ ನಿರ್ದೇಶಕರ ಕಚೇರಿ (ಒಡಿಎನ್‌ಐ) ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಂಸತ್ತಿಗೆ ಸಲ್ಲಿಸಿದೆ. ''ಸೌದಿ ರಾಜಕುಮಾರನ ಆಡಳಿತ ನೀತಿಗಳನ್ನು ಖಶೋಗ್ಗಿ ತಮ್ಮ ಅಂಕಣದಲ್ಲಿ ಕಟುವಾಗಿ ಟೀಕಿಸುತ್ತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ರಾಜಕುಮಾರ, ಖಷೋಗಿ ಅವರನ್ನು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿಗೆ ಕರೆಸಿ 2018ರ ಅ.2ರಂದು ಹತ್ಯೆ ಮಾಡಿಸಿದ್ದರು.

ಒಂದು ವೇಳೆ ಖಷೋಗಿಯನ್ನು ಹತ್ಯೆ ಮಾಡುವಲ್ಲಿ ವಿಫಲರಾದರೆ ರಾಜಕುಮಾರ ತಮ್ಮನ್ನು ಸೆರೆವಾಸಕ್ಕೆ ದೂಡಬಹುದು ಅಥವಾ ಗುಂಡಿಕ್ಕಬಹುದು ಎಂಬ ಅಳಕು ಕೂಡ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದ 15 ಮಂದಿ ಸುಪಾರಿ ಹಂತಕರಲ್ಲಿಮನೆ ಮಾಡಿತ್ತು. ಇಂಥ ಭೀತಿಯ ವಾತಾವರಣವನ್ನು ರಾಜಕುಮಾರ ಸೃಷ್ಟಿಸಿದ್ದ' ಎಂದು ವರದಿ ಹೇಳಿದೆ. 2017ರಿಂದ ಸೌದಿ ಅರೇಬಿಯಾದ ರಕ್ಷಣೆ ಮತ್ತು ಗುಪ್ತಚರ ಇಲಾಖೆಗೆ ಸಂಬಂಧಿತ ಎಲ್ಲ ನಿರ್ಧಾರಗಳಲ್ಲಿ ಮೊಹಮದ್‌ ಅವರ ಮಾತೇ ಅಂತಿಮವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ