ಆ್ಯಪ್ನಗರ

ಸೆಲ್ಫಿ ಹುಚ್ಚಿಗೆ ಬಲಿಯಾದ ಭಾರತೀಯ ವಿದ್ಯಾರ್ಥಿ

ಪಶ್ಚಿಮ ಆಸ್ಪ್ರೇಲಿಯಾದ ಐತಿಹಾಸಿಕ ಬಂದರು ಪಟ್ಟಣ ಅಲ್ಬಾನಿ ಬಳಿಯ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭಾರತೀಯ ವಿದ್ಯಾರ್ಥಿಯೊಬ್ಬ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾನೆ.

Vijaya Karnataka 22 May 2018, 10:04 am
ಮೆಲ್ಬೋರ್ನ್‌: ಪಶ್ಚಿಮ ಆಸ್ಪ್ರೇಲಿಯಾದ ಐತಿಹಾಸಿಕ ಬಂದರು ಪಟ್ಟಣ ಅಲ್ಬಾನಿ ಬಳಿಯ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭಾರತೀಯ ವಿದ್ಯಾರ್ಥಿಯೊಬ್ಬ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾನೆ.
Vijaya Karnataka Web Selfi


20 ವರ್ಷದ ಅಂಕಿತ್‌ ಎಂಬ ವಿದ್ಯಾರ್ಥಿ ಆಸ್ಪ್ರೇಲಿಯಾದ ಪರ್ತ್‌ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರವಾಸಕ್ಕಾಗಿ ಗೆಳೆಯೊಡನೆ ಅಲ್ಬಾನಿಗೆ ತೆರಳಿದ್ದ. ಗೆಳೆಯರೊಂದಿಗೆ ಸಮುದ್ರದ ಬಂಡೆಗಳ ಮೇಲೆ ಕುಣಿದು, ಕುಪ್ಪಳಿಸಿದ. ನಂತರ ವಿನೋದಕ್ಕಾಗಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಯಾತಪ್ಪಿ 40 ಮೀಟರ್‌ ಎತ್ತರದ ಗುಡ್ಡದಿಂದ ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ತುರ್ತು ರಕ್ಷಣಾ ಪಡೆಯ ಹೆಲಿಕಾಪ್ಟರ್‌ ಮೂಲಕ ಘಟನೆ ಸಂಭವಿಸಿದ ಒಂದು ಗಂಟೆಯಲ್ಲಿ ಅಂಕಿತ್‌ ಮೃತದೇಹವನ್ನು ಸಮುದ್ರದಿಂದ ಹೊರಕ್ಕೆ ತೆಗೆಯಲಾಗಿದೆ. ಮೃತದೇಹವನ್ನು ಪೋಷಕರಿಗೆ ಒಪ್ಪಿಸಲು ಅವರ ಸಂಪರ್ಕಕ್ಕಾಗಿ ಪೊಲೀಸರು ಪ್ರಯತ್ನ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ