ಆ್ಯಪ್ನಗರ

ನಮ್ಮ ಪ್ರಧಾನಿ ಅವರನ್ನು ನಿಂದಿಸಬೇಡಿ, ಪ್ರತಿಭಟನಾಕಾರರಿಗೆ ಬಿಜೆಪಿ ನಾಯಕಿ ತರಾಟೆ

ದಕ್ಷಿಣ ಕೊರಿಯಾ ರಾಜಧಾನಿಯ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನಾಕಾರರು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

PTI 19 Aug 2019, 5:00 am
ಸಿಯೋಲ್‌: ಪಾಕಿಸ್ತಾನದ ಬಾವುಟ ಹಿಡಿದು 370ನೇ ವಿಧಿ ರದ್ದತಿ ಕ್ರಮ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web ShaziaIlmi


ದಕ್ಷಿಣ ಕೊರಿಯಾ ರಾಜಧಾನಿಯ ಭಾರತೀಯ ರಾಯಭಾರ ಕಚೇರಿ ಎದುರು ಪ್ರತಿಭಟನಾಕಾರರು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಅದೇ ವೇಳೆ ಯುನೈಟೆಡ್‌ ಪೀಸ್‌ ಫೆಡರೇಷನ್‌ ಸಮ್ಮೇಳನದಲ್ಲಿ ಭಾಗಿಯಾದ ಬಳಿಕ ಶಾಜಿಯಾ ಹಾಗೂ ಇತರ ನಾಯಕರು ರಾಯಭಾರ ಕಚೇರಿಗೆ ತಲುಪಿದರು.
ಈ ಸಂದರ್ಭದಲ್ಲಿ ಎದುರಾದ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡ ನಾಯಕಿ ಶಾಜಿಯಾ, '' ನಿಮಗೆ 370ನೇ ವಿಧಿ ರದ್ದತಿಯಿಂದ ಸಮಸ್ಯೆಯಿದ್ದಲ್ಲಿ, ಅದು ಭಾರತದ ಆಂತರಿಕ ವಿಚಾರ ಎಂದು ಮೊದಲು ಮನವರಿಕೆ ಮಾಡಿಕೊಳ್ಳಿ. ಇದರಿಂದ ನಿಮಗೆ ಏನೂ ಆಗುವಂಥದ್ದು ಇಲ್ಲ. ಸುಮ್ಮನೆ ನಮ್ಮ ಪ್ರಧಾನಿ ಮೋದಿ ಅವರ ವಿರುದ್ಧ ಘೋಷಣೆ ಕೂಗಬೇಡಿ '', ಎಂದು ಗುಡುಗಿದರು. ಬಳಿಕ ಇಂಡಿಯಾ ಜಿಂದಾಬಾದ್‌ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರಿಗೆ ತಿರುಗೇಟು ಕೊಟ್ಟರು. ಈ ವಿಡಿಯೋ ಟ್ವಿಟರ್‌ನಲ್ಲಿ ಭಾರಿ ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ