ಆ್ಯಪ್ನಗರ

ಕಿರ್ಪಾನ್ ಧರಿಸಿದ್ದ ಸಿಖ್ ವ್ಯಕ್ತಿಯನ್ನು ಬಂಧಿಸಿದ ಅಮೆರಿಕ ಪೊಲೀಸರು!

ಸಿಖ್ ಧರ್ಮದ ಧಾರ್ಮಿಕ ಭಾಗವಾಗಿರುವ ಸಣ್ಣ ಕತ್ತಿ ಕಿರ್ಪಾನ್ ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 18 Jun 2017, 8:45 pm
ವಾಷಿಂಗ್ಟನ್: ಸಿಖ್ ಧರ್ಮದ ಧಾರ್ಮಿಕ ಭಾಗವಾಗಿರುವ ಸಣ್ಣ ಕತ್ತಿ ಕಿರ್ಪಾನ್ ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
Vijaya Karnataka Web sikh man arrested handcuffed in us for carrying kirpan
ಕಿರ್ಪಾನ್ ಧರಿಸಿದ್ದ ಸಿಖ್ ವ್ಯಕ್ತಿಯನ್ನು ಬಂಧಿಸಿದ ಅಮೆರಿಕ ಪೊಲೀಸರು!


ಒಂಬತ್ತು ವರ್ಷಗಳ ಹಿಂದೆ ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದ ಜಸ್ಟಿನ್ ಸ್ಮಿತ್ ಅಲಿಯಾಸ್ ಹರ್ಪ್ರೀತ್ ಸಿಂಗ್ ಖಾಲ್ಸಾ ಅವರು ಕೇಟರಿಂಗ್ ಉದ್ಯಮ ಹೊಂದಿದ್ದರು. ಪ್ರತಿನಿತ್ಯದಂತೆ ವ್ಯಾಪಾರಕ್ಕೆ ತೆರಳಿದ ಸಂದರ್ಭದಲ್ಲಿ ಕಿರ್ಪಾನ್ ಗಮನಿಸಿದ ಗ್ರಾಹಕನೊಬ್ಬ ಪೊಲೀಸರಿಗೆ ದೂರು ನೀಡಿದ್ದ ಕಾರಣ ಸಿಂಗ್ ಅವರನ್ನು ಬಂಧಿಸಲಾಗಿದೆ.

ಹರ್ಪ್ರೀತ್ ಸಿಂಗ್ ಖಾಲ್ಸಾ ಈ ಹಿಂದೆಯೂ ಬಂಧನಕ್ಕೊಳಗಾಗಿದ್ದರು. ಕಳೆದ ವಾರವೂ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಕಿರ್ಪಾನ್ ಧರಿಸುವುದು ಸಿಖ್ ಧರ್ಮದ ಪದ್ಧತಿ ಎಂದು ಮನವರಿಕೆ ಮಾಡಿ ಕೊಟ್ಟ ನಂತರ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಇದೀಗ ಸಿಂಗ್ ಅವರನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಶಾಪಿಂಗ್ ಮಾಡುತ್ತಿದ್ದ ಹರ್ಪ್ರೀತ್ ಸಿಂಗ್ ಖಾಲ್ಸಾ ಅವರನ್ನು ಸ್ಟೋರ್‌ನಿಂದ ಹೊರ ಕರೆದ ಪೊಲೀಸರು, ಕಿರ್ಪಾನ್ ತೆಗೆದು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ