ಆ್ಯಪ್ನಗರ

'ನೀನು ತಾಲಿಬಾನಿ' ಎಂದು ಕರೆದು ಇಂಗ್ಲೆಂಡ್‌ನಲ್ಲಿ ಸಿಖ್‌ ಚಾಲಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು!

ಕ್ಯಾಸಿನೊವೊಂದರಿಂದ ಪ್ರಯಾಣಿಕರನ್ನು ಕರೆ ತರುವ ಹಾದಿಯಲ್ಲಿ ಚಾಲಕ ವನೀತ್‌ ಸಿಂಗ್‌ (41) ಮೇಲೆ ಏಕಾಏಕಿ ಹಲ್ಲೆ ನಡೆದಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ನೀನು ತಾಲಿಬಾನಿ' ಎಂದು ನಾಲ್ವರು ಪ್ರಯಾಣಿರು ನನ್ನನ್ನು ನಿಂದಿಸಿ, ದೈಹಿಕ ಹಲ್ಲೆ ನಡೆಸಿದರು. ಟರ್ಬನ್‌ ಕಿತ್ತು ಹಾಕಿ ಎಳೆದಾಡಿದರು ವನೀತ್‌ ಸಿಂಗ್ ಆರೋಪಿಸಿದ್ದಾನೆ.

Agencies 23 Sep 2020, 7:11 am
ಲಂಡನ್‌: ಇಂಗ್ಲೆಂಡ್‌ನಲ್ಲಿ ಭಾರತೀಯ ಮೂಲದ ಸಿಖ್‌ ಟ್ಯಾಕ್ಸಿ ಚಾಲಕನ ಮೇಲೆ ಪ್ರಯಾಣಿಕರಿಂದ ಹಲ್ಲೆ ನಡೆದಿದೆ. ಕ್ಯಾಸಿನೊವೊಂದರಿಂದ ಪ್ರಯಾಣಿಕರನ್ನು ಕರೆ ತರುವ ಹಾದಿಯಲ್ಲಿ ಚಾಲಕ ವನೀತ್‌ ಸಿಂಗ್‌ (41) ಮೇಲೆ ಏಕಾಏಕಿ ಹಲ್ಲೆನಡೆದಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Vijaya Karnataka Web Capture


''ಬರ್ಕ್ಶೈರ್‌ನ ರೀಡಿಂಗ್‌ ನಗರದ ಕ್ಯಾಸಿನೊದಿಂದ ರಾತ್ರಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟಿದ್ದಾಗ ಹಠಾತ್‌ ದಾಳಿ ನಡೆಯಿತು. 'ನೀನು ತಾಲಿಬಾನಿ' ಎಂದು ನಾಲ್ವರು ಪ್ರಯಾಣಿರು ನನ್ನನ್ನು ನಿಂದಿಸಿ, ದೈಹಿಕ ಹಲ್ಲೆ ನಡೆಸಿದರು. ಟರ್ಬನ್‌ ಕಿತ್ತು ಹಾಕಿ ಎಳೆದಾಡಿದರು. ಇನ್ನು ಮುಂದೆ ಎಂದೂ ಕೂಡ ರಾತ್ರಿ ವೇಳೆ ಟ್ಯಾಕ್ಸಿ ಓಡಿಸಲಾರೆ. ತೀವ್ರ ಆತಂಕ ನನ್ನನ್ನು ಆವರಿಸಿದೆ,'' ಎಂದು ವನೀತ್‌ ಸಿಂಗ್‌ ಹೇಳಿದ್ದಾರೆ.

ಪಂಜಾಬ್‌ ಮೂಲದ ವನೀತ್‌ ಸಿಂಗ್ ಇಂಗ್ಲೆಂಡ್‌ನಲ್ಲಿ ನೆಲೆಯಾಗಿದ್ದು ಟ್ಯಾಕ್ಸಿ ಓಡಿಸುವ ವೃತ್ತಿ ಮಾಡುತ್ತಿದ್ದಾರೆ. ಇದರ ಜೊತೆಗೆ ತಬಲ ಕ್ಲಾಸ್‌ ಕೂಡ ಮಕ್ಕಳಿಗೆ ನೀಡುತ್ತಿದ್ದಾರೆ. ರಾತ್ರಿ ಕ್ಯಾಸಿನೊ ಬಳಿ ಇದ್ದ ನಾಲ್ವರನ್ನು ಪಿಕ್‌ ಮಾಡಿದ ದಾರಿ ಮಧ್ಯೆ ಈ ಘಟನೆ ನಡೆದಿದೆ. ವನೀತ್‌ ಸಿಂಗ್‌ ಪ್ರಕಾರ ಈ ದುಷ್ಕರ್ಮಿಗಳು ಡ್ರಗ್ಸ್ ಸೇವಿಸಿದ್ದರಂತೆ. ಅಲ್ಲದೆ ನಾಲ್ವರ ಪೈಕಿ ಒಬ್ಬ ಬಾಕ್ಸ್‌ವೊಂದನ್ನು ಹಿಡಿದುಕೊಂಡಿದ್ದು ಇದರಲ್ಲಿ ಡ್ರಗ್ಸ್‌ ಇತ್ತು ಪೊಲೀಸರಿಗೆ ತಿಳಿಸಿದ್ದಾನೆ.

ದೇಶದಲ್ಲಿ ಈಗ ಕೊರೊನಾ ಗುಣಮುಖರ ದಾಖಲೆ, ಒಂದೇ ದಿನ 1 ಲಕ್ಷ ಸೋಂಕಿತರು ಗುಣಮುಖ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ