ಆ್ಯಪ್ನಗರ

ವೇಗವಾಗಿ ಕ್ಷೀಣಿಸುತ್ತಿವೆ ಶನಿಯ ಮಂಜಿನ ಉಂಗುರಗಳು!

ಶನಿ ಗ್ರಹದ ಸುತ್ತಲಿರುವ ಮಂಜಿನ ಉಂಗುರಗಳು ವೇಗವಾಗಿ ಕ್ಷೀಣಿಸುತ್ತಿವೆ. ಒಂದು ಸೆಕೆಂಡಿಗೆ ಬರೋಬ್ಬರಿ 1,814 ಕೆಜಿ ಮಂಜು ಶನಿ ಗ್ರಹದ ಮೇಲ್ಮೈನಿಂದ ಬಿದ್ದು ಹೋಗುತ್ತಿದೆಯಂತೆ. ಹೀಗೆ ನಿರಂತರವಾಗಿ ಸುರಿದರೆ ಕೇವಲ 30 ನಿಮಿಷದಲ್ಲಿ ಒಲಿಂಪಿಕ್‌ ಸ್ವಿಮ್ಮಿಂಗ್‌ ಪೂಲ್‌ ತುಂಬುತ್ತದಂತೆ.

Indiatimes 21 Dec 2018, 4:11 pm

ಹೈಲೈಟ್ಸ್‌:

  • ಶನಿ ಗ್ರಹದ ಮೇಲ್ಮೈನಿಂದ ಬಿದ್ದು ಹೋಗುತ್ತಿರುವ ಮಂಜು, ಪ್ರತಿ ಸೆಕೆಂಡಿಗೆ 1,814 ಕೆಜಿ ಸೋರಿ ಹೋಗುತ್ತಿದೆ.
  • ಮುಂದಿನ 10 ಕೋಟಿ ವರ್ಷಗಳಲ್ಲಿ ಶನಿ ಗ್ರಹದ ಸುತ್ತ ಇರುವ ಮಂಜಿನ ಉಂಗುರಗಳು ಕಂಪ್ಲೀಟ್‌ ಕಣ್ಮರೆ.
  • ದಟ್ಟವಾದ ಉಂಗುರಗಳು ಕೇವಲ ಶನಿ ಗ್ರಹದ ಸುತ್ತಲಷ್ಟೇ ಗೋಚರಿಸುತ್ತವೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಶನಿ ಗ್ರಹ ಎಂದಾಕ್ಷಣ ಕಣ್ಮುಂದೆ ಬರುವುದು ಅದರ ಸುತ್ತಲಿನ ಅದ್ಭುತ ಮಂಜಿನ ಉಂಗುರಗಳು. ಸೌರಮಂಡಲದಲ್ಲಿ ಬರುವ ಅಷ್ಟೂ ಗ್ರಹಗಳಿಗೆ ಒಂದೊಂದು ವಿಶೇಷತೆಯಿದೆ. ಅದರಲ್ಲೂ ಶನಿ ಗ್ರಹವು ಗುರು ಗ್ರಹದ ನಂತರ ಅತಿ ದೊಡ್ಡದು. ಶನಿಯ ಎದ್ದು ಕಾಣುವಂಥ ಉಂಗುರ ವ್ಯವಸ್ಥೆಯು ಮುಖ್ಯವಾಗಿ ಮಂಜಿನ ಪುಡಿಯಿಂದ ರಚಿತಗೊಂಡಿವೆ. ಉಂಗುರಗಳಲ್ಲಿ ಸ್ವಲ್ಪ ಕಲ್ಲಿನ ಚೂರುಗಳು ಮತ್ತು ಧೂಳು ಮಿಶ್ರಗೊಂಡಿವೆ.
ಅನಿಲ ರೂಪಿ ಶನಿಯ ಅದ್ಭುತ ಉಂಗುರಗಳನ್ನು ಅತ್ಯಂತ ವೇಗವಾಗಿ ಕ್ಷೀಣಿಸುತ್ತಿವೆ. ಮುಂದಿನ 10 ಕೋಟಿ ವರ್ಷಗಳಲ್ಲಿ ಈ ಉಂಗುರಗಳು ಕಣ್ಮರೆಯಾಗುತ್ತವೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಉಂಗುರದಂತಿರುವ ಪದರದಲ್ಲಿರುವ ಕಲ್ಲುಗಳು ಮತ್ತು ಧೂಳಿನ ಸ್ಥಿರತೆಗೆ ತೊಂದರೆಯುಂಟಾಗುತ್ತಿದೆ. ಮಂಜಿನ ಅಂಶವೂ ಶನಿ ಗ್ರಹದ ಗುರುತ್ವದಿಂದ ದೂರವಾಗುತ್ತಿದೆ. ಈ ಕಾರಣಗಳಿಂದ ಸುತ್ತಲಿನ ಉಂಗುರಗಳು ಕ್ಷೀಣಿಸುತ್ತಿವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಇದನ್ನು 'ರಿಂಗ್‌ ರೈನ್‌(Ring Rain)' ಎಂದು ಗುರುತಿಸಲಾಗಿದೆ.

1980ರಲ್ಲಿ ಫ್ಲೈಬಿ ಉಪಗ್ರಹ ಮೊದಲ ಬಾರಿಗೆ ಶನಿಯ ಚಿತ್ರಗಳನ್ನು ತೆಗೆದಿತ್ತು. ಇತ್ತೀಚೆಗೆ ಶನಿ ಗ್ರಹದ ಮಂಜಿನ ಉಂಗುರಗಳು ವೇಗವಾಗಿ ಕ್ಷೀಣಿಸುತ್ತಿರುವ ಬಗ್ಗೆ ಕೆಸಿನಿ ಮಿಷನ್‌ ದೃಢ ಪಡಿಸಿದೆ.

ಹವಾಯಿಯಲ್ಲಿರುವ ಕೆಕ್‌ ಟೆಲಿಸ್ಕೋಪ್‌ನಿಂದ ವಿಜ್ಞಾನಿಗಳು ಗಮನಿಸಿದ್ದಾರೆ. ಶನಿಯ ಮೈಲ್ಮೈನಿಂದ ಪ್ರತಿ ಸೆಕೆಂಡ್‌ಗೆ 1,814 ಕೆಜಿ ಮಂಜು ಬಿದ್ದು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಒಲಿಂಪಿಕ್‌ ಸ್ವಿಮ್ಮಿಂಗ್‌ ಪೂಲ್‌ಅನ್ನು ಕೇವಲ 30 ನಿಮಿಷದಲ್ಲಿ ತುಂಬಿಸಬಹುದು ಎನ್ನುತ್ತದೆ ನಾಸಾ. ಇದೇ ರೀತಿ ಮಂಜಿನ ಪತನ ಮುಂದುವರಿದರೆ 10 ಕೋಟಿ ವರ್ಷಗಳಲ್ಲಿ ಉಂಗುರಗಳು ಸಂಪೂರ್ಣ ಕಣ್ಮರೆಯಾಗಲಿವೆ ಎಂದು ನಾಸಾ ತಿಳಿಸಿದೆ.

ಗ್ರಹಗಳ ಸುತ್ತಲಿನ ಉಂಗುರಗಳು ತಾತ್ಕಾಲಿಕ. ಗುರು, ಯುರೇನಸ್‌ ಮತ್ತು ನೆಪ್ಚೂನ್‌ ಗ್ರಹಗಳ ಸುತ್ತಲಿದ್ದ ಉಂಗುರಗಳನ್ನು ವೀಕ್ಷಿಸಲು ನಮಗೆ ಸಾಧ್ಯವಾಗಿಲ್ಲ. ಪ್ರಸ್ತುತ ಈ ಗ್ರಹಗಳ ಸುತ್ತ ಸೂಕ್ಷ ಪದರವಷ್ಟೇ ಇದೆ. ನಮ್ಮ ಅದೃಷ್ಟ, ಶನಿ ಗ್ರಹದ ಮಂಜಿನ ಉಂಗುರಗಳನ್ನು ವೀಕ್ಷಿಸುತ್ತಿದ್ದೇವೆ ಎಂದು ನಾಸಾದ ವಿಜ್ಞಾನಿ ಜೇಮ್ಸ್‌ ಒಡೊನೊಗು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ