ಆ್ಯಪ್ನಗರ

‘ಮಿಷನ್‌ ಶಕ್ತಿ’ ಯೋಜನೆ ಮೇಲೆ ಅಮೆರಿಕ ಗೂಢಚಾರಿಕೆ?

ಭಾರತದ ಎಸ್ಯಾಟ್‌ ಯೋಜನೆ ಕುರಿತು ಅಮೆರಿಕಕ್ಕೆ ಮೊದಲೇ ತಿಳಿದಿತ್ತು,'' ಎಂದು ಅಮೆರಿಕದ ಹಾರ್ವರ್ಡ್‌-ಸ್ಮಿತ್‌ಸೊನಿಯನ್‌ ಸೆಂಟರ್‌ ಫಾರ್‌ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನಿ ಜೋನಾಥನ್‌ ಮೆಕ್‌ಡವೆಲ್‌ ಹೇಳಿದ್ದಾರೆ.

Vijaya Karnataka Web 30 Mar 2019, 9:54 pm
ವಾಷಿಂಗ್ಟನ್‌: ಬಾಹ್ಯಾಕಾಶದಲ್ಲೇ ಉಪಗ್ರಹಗಳನ್ನು ಹೊಡೆದುರುಳಿಸುವ ಭಾರತದ ಮಹತ್ವಾಕಾಂಕ್ಷಿ ಎಸ್ಯಾಟ್‌ ಯೋಜನೆ ಮೇಲೆ ಅಮೆರಿಕ ಗೂಢಚಾರಿಕೆ ನಡೆಸಿತ್ತು ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ.
Vijaya Karnataka Web isro


''ಭಾರತದ ಎಸ್ಯಾಟ್‌ ಕ್ಷಿಪಣಿ ಯೋಜನೆಯ ಮೇಲೆ ಬೇಹುಗಾರಿಕೆ ನಡೆಸಲೆಂದೇ ಅಮೆರಿಕ ತನ್ನ ಅತ್ಯಾಧುನಿಕ ಸ್ಥಳಾನ್ವೇಷಣಾ ವಿಮಾನವನ್ನು ಡಿಯಾಗೋ ಗಾರ್ಷಿಯಾ ಮೂಲಕ ಬಂಗಾಳ ಕೊಲ್ಲಿಗೆ ರವಾನಿಸಿತ್ತು. ಭಾರತದ ಎಸ್ಯಾಟ್‌ ಯೋಜನೆ ಕುರಿತು ಅಮೆರಿಕಕ್ಕೆ ಮೊದಲೇ ತಿಳಿದಿತ್ತು,'' ಎಂದು ಅಮೆರಿಕದ ಹಾರ್ವರ್ಡ್‌-ಸ್ಮಿತ್‌ಸೊನಿಯನ್‌ ಸೆಂಟರ್‌ ಫಾರ್‌ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನಿ ಜೋನಾಥನ್‌ ಮೆಕ್‌ಡವೆಲ್‌ ಹೇಳಿದ್ದಾರೆ.

ಗೂಢಚಾರಿಕೆ ನಡೆಸಿಲ್ಲ:
ಆದರೆ ಮತ್ತೊಂದೆಡೆ, ಭಾರತದ 'ಮಿಷನ್‌ ಶಕ್ತಿ' ಯೋಜನೆ ಮೇಲೆ ತಾನು ಗೂಢಚಾರಿಕೆ ನಡೆಸಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.

''ಅಮೆರಿಕ, ಭಾರತದ ಮೇಲೆ ಯಾವುದೇ ಬೇಹುಗಾರಿಕೆ ನಡೆಸುತ್ತಿಲ್ಲ. ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರವಾಗಿದ್ದು, ಪರಸ್ಪರ ಸ್ನೇಹ ಮತ್ತು ಸೌಹಾರ್ದತೆ ವೃದ್ಧಿಸುವ ನಿಟ್ಟಿನಲ್ಲಿ ಅಮೆರಿಕ ಕೆಲಸ ಮಾಡುತ್ತಿದೆ. ಉಭಯ ದೇಶಗಳ ನಡುವೆ ಬಲಿಷ್ಠ ಆರ್ಥಿಕ ಸಂಬಂಧವನ್ನು ಅಮೆರಿಕ ಬಯಸುತ್ತದೆ,'' ಎಂದು ಅಮೆರಿಕ ರಕ್ಷ ಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್‌ ಕರ್ನಲ್‌ ಡೇವಿಡ್‌ ಡಬ್ಲ್ಯೂ ಈಸ್ಟ್‌ಬರ್ನ್‌ ಹೇಳಿದ್ದಾರೆ.

250ರಿಂದ 270 ತ್ಯಾಜ್ಯ ಪತ್ತೆ
ಭಾರತ ಎಸ್ಯಾಟ್‌ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ 250ರಿಂದ 270 ತ್ಯಾಜ್ಯಗಳು ಕಂಡುಬಂದಿದ್ದು, ಇದರ ಮೇಲೆ ಅಮೆರಿಕ ನಿಗಾ ಇಟ್ಟಿದೆ. ಆದರೆ ಭಾರತದ ಪರೀಕ್ಷೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌)ಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಅಮೆರಿಕ ತಿಳಿಸಿದೆ.

ಅಮೆರಿಕದ ಜಾಯಿಂಟ್‌ ಫೋರ್ಸ್‌ ಸ್ಪೇಸ್‌ ಕಾಂಪೊನೆಂಟ್‌ ಕಮಾಂಡ್‌(ಜೆಎಫ್‌ಎಸ್‌ಸಿಸಿ) ಭಾರತದ ಎಸ್ಯಾಟ್‌ ಕ್ಷಿಪಣಿ ಪರೀಕ್ಷೆಯಿಂದ ಹೊರಬಿದ್ದಿರುವ 250 ತುಣುಕುಗಳ ತ್ಯಾಜ್ಯದ ಸಕ್ರಿಯ ಮೇಲ್ವಿಚಾರಣೆ ನಡೆಸುತ್ತಿದೆ. ಈ ಕುರಿತು ಉಪಗ್ರಹ ನಿರ್ವಾಹಕರಿಗೆ ಕಾಲಕಾಲಕ್ಕೆ ಅಧಿಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಪೆಂಟಗನ್‌ ತಿಳಿಸಿದೆ.

ಭಾರತದ ಸ್ಪಷ್ಟನೆ:
ಎಸ್ಯಾಟ್‌ ಕ್ಷಿಪಣಿ ಪರೀಕ್ಷೆಯು ಭೂಮಿಯ ಕೆಳ ಕಕ್ಷೆಯಲ್ಲಿ ನಡೆದ ಕಾರಣ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಸಮಸ್ಯೆ ಉಂಟಾಗದು. ಎಸ್ಯಾಟ್‌ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳು ಉರಿದು ಬೂದಿಯಾಗಿ ಕೆಲವೇ ವಾರಗಳಲ್ಲಿ ಭೂಮಿಗೆ ಬೀಳಲಿವೆ ಎಂದು ಭಾರತ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ