ಆ್ಯಪ್ನಗರ

ಕಾಲೇಜು ಮೆಟ್ಟಿಲೇರದ ಸ್ಟೀವ್ ಜಾಬ್ಸ್ ಪುತ್ರಿಗೂ ಸಹ ಹೋಗಬೇಡ ಎಂದಿದ್ದರಂತೆ

ಜಾಬ್ಸ್ ಹಿರಿಯ ಪುತ್ರಿ ಲಿಸಾ ಬೆನ್ ಜಾಬ್ಸ್ ತನ್ನ ತಂದೆಯನ್ನು ನೆನಪಿಸಿಕೊಂಡು small fry (ಸ್ಮಾಲ್ ಫ್ರೈ) ಎಂಬ ಪುಸ್ತಕವನ್ನು ಬರೆದಿದ್ದು, ಅದರಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು, ತಮ್ಮ ತಂದೆಯ ಜತೆಗಿನ ಒಡನಾಟವನ್ನು ಬಿಚ್ಚಿಟ್ಟಿದ್ದಾರೆ.

Navbharat Times 28 Oct 2018, 2:48 pm
ವಾಷಿಂಗ್ಟನ್: ಆ್ಯಪಲ್ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಕಾಲೇಜು ಮೆಟ್ಟಿಲೇರಿರಲಿಲ್ಲ ಎಂಬುದು ನಿಮಗೆ ಗೊತ್ತಿರಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಈ ದಿಗ್ಗಜ ತಾನು ಉನ್ನತ ಶಿಕ್ಷಣವನ್ನು ಕಲಿತಿರಲಿಲ್ಲವಷ್ಟೇ ಅಲ್ಲ, ತಮ್ಮ ಹಿರಿಯ ಪುತ್ರಿಯನ್ನು ಸಹ ಕಾಲೇಜಿಗೆ ಹೋಗಬೇಡ ಎಂದಿದ್ದರಂತೆ!
Vijaya Karnataka Web Job


ಜಾಬ್ಸ್ ಹಿರಿಯ ಪುತ್ರಿ ಲಿಸಾ ಬೆನ್ ಜಾಬ್ಸ್ ತನ್ನ ತಂದೆಯನ್ನು ನೆನಪಿಸಿಕೊಂಡು small fry (ಸ್ಮಾಲ್ ಫ್ರೈ) ಎಂಬ ಪುಸ್ತಕವನ್ನು ಬರೆದಿದ್ದು, ಅದರಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು, ತಮ್ಮ ತಂದೆಯ ಜತೆಗಿನ ಒಡನಾಟವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ ಒಬ್ಬ ಮನುಷ್ಯನಾಗಿ ತನ್ನ ತಂದೆಯಲ್ಲಿದ್ದ ವ್ಯಕ್ತಿತ್ವದ ಬಗ್ಗೆ ಚರ್ಚೆ ಮಾಡಿದ್ದಾರೆ.

ಸ್ಮಾಲ್ ಫ್ರೈ

ನನಗೆ 9 ವರ್ಷಗಳಾದ ತಾನೇ ಸ್ಥಾಪಿಸಿದ್ದ ಆ್ಯಪಲ್ ಕಂಪನಿಯಿಂದ ತಂದೆಯನ್ನು ಹೊರಹಾಕಲಾಗಿತ್ತು. ಹೀಗಾಗಿ ಕಂಪ್ಯೂಟರ್ ಹಾರ್ಡವೇರ್ ಮತ್ತು ಸಾಫ್ಟವೇರ್ ತಯಾರಿಸುವ ಇನ್ನೊಂದು ಕಂಪನಿಯನ್ನು ಹುಟ್ಟುಹಾಕಲು ಅವರು ಯೋಜಿಸುತ್ತಿದ್ದರು. ಆಗ ಅವರು ಪ್ರೀತಿಯಿಂದ ನನ್ನನ್ನು ಸ್ಮಾಲ್ ಫ್ರೈ ಎಂದು ಕರೆಯುತ್ತಿದ್ದರು. ಹಾಗೆಂದರೆ ಫ್ರೆಂಚ್ ಫ್ರೈನಂತೆ ಏನೋ ಕುರುಕಲು ತಿಂಡಿ ಇರಬೇಕು ಎಂದು ನಾನಂದುಕೊಂಡಿದ್ದೆ. ಆದರೆ ಕೆಲ ಕಾಲದ ನಂತರವಷ್ಟೇ ನನಗೆ ಗೊತ್ತಾಯಿತು. ವಿಶೇಷ ಕಾರಣದಿಂದಲೇ ಅಪ್ಪ ನನ್ನನ್ನು ಹಾಗೆ ಕರೆಯುತ್ತಿದ್ದರೆಂದು. ಫ್ರೈ ಎಂಬುದು ವಿಶೇಷವಾದ ಪುಟ್ಟ ಮೀನಾಗಿದ್ದು, ಸರಿಯಾಗಿ ಬೆಳೆಯಲೆಂದು ಅದನ್ನು ಸಮುದ್ರದಲ್ಲಿ ಎಸೆಲಾಗುತ್ತದೆ. ಅದರಂತೆ ತಮ್ಮ ಮಗಳನ್ನು ಸಹ ಮುಕ್ತ ಮತ್ತು ಸ್ವತಂತ್ರ್ಯವಾಗಿ ಬೆಳೆಸಬೇಕೆಂಬುದು ತಮ್ಮ ತಂದೆಯ ಯೋಚನೆಯಾಗಿತ್ತು. ಹೀಗಾಗಿ ಅವರು ನನಗೆ ಹಾಗೆ ಕರೆಯುತ್ತಿದ್ದರು .

ಕಾಲೇಜಿಗೆ ಹೋಗಬೇಡ, ಜಗತ್ತು ಸುತ್ತಿ ಪಾಠ ಕಲಿ

ಜಗತ್ತಿನ ಅತಿದೊಡ್ಡ ಸಾಧಕರಲ್ಲಿ ಒಬ್ಬರಾಗಿರುವ ಜಾಬ್ಸ್ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿರಲಿಲ್ಲ. ಅದಕ್ಕಾಗಿ ಅವರಿಗೆ ಬೇಸರವೂ ಇರಲಿಲ್ಲ. ತಮ್ಮ ಮಗಳು ಸಹ ಕಾಲೇಜಿಗೆ ಹೋಗಿ ಕಲಿಯದಕ್ಕಿಂತ ಬದುಕೆಂಬ ಪಾಠಶಾಲೆಯಲ್ಲಿ ಹೆಚ್ಚು ಕಲಿಯಲಿ ಎಂದು ಅವರು ಬಯಸುತ್ತಿದ್ದರು. ತನ್ನ ತಂದೆಯ ಜತೆ ಸ್ಟೆನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸುತ್ತಿದ ದಿನಗಳನ್ನು ನೆನಪಿಸಿಕೊಂಡಿರುವ ಲೀಸಾ, ಅಪ್ಪ ಹೇಳುತ್ತಿದ್ದರು , ಮಗಳೇ ನಾನು ಕಾಲೇಜಿಗೆ ಹೋಗಲಿಲ್ಲ. ಬಹುಶಃ ನೀನು ಹೋಗಲಾರೆ ಎಂದೆನಿಸುತ್ತದೆ. ಜಗತ್ತನ್ನು ಸುತ್ತು ಮತ್ತು ಅಲ್ಲಿಯೇ ಪಾಠವನ್ನು ಕಲಿ. ನಿನ್ನ ಬದುಕಿನ ಮಹತ್ವದ ವಯಸ್ಸಲ್ಲಿ ಅವರು ( ಕಾಲೇಜು) ಇತರ ಜನರು ಹೇಗೆ ಆಲೋಚಿಸುತ್ತಾರೆ ಎಂದು ಬೋಧಿಸುತ್ತಾರೆ. ಇದು ಸೃಜನಶೀಲತೆಯನ್ನು ಕೊಲ್ಲುತ್ತದೆ. ನಿನ್ನನ್ನು ಮೂರ್ಖನನ್ನಾಗಿತ್ತದೆ .

ಪ್ರಿಯತಮೆಯಿಂದ ಹುಟ್ಟಿದವಳು

ಲಿಸಾ ಜಾಬ್ಸ್ ಹಿರಿಯ ಪುತ್ರಿ. ಮದುವೆಗೆ ಮೊದಲು ಪ್ರೇಯಸಿ ಕ್ರಿಸನ್ನಾ ಬ್ರೆನ್ನನ್ ಜತೆಗಿದ್ದ ದೈಹಿಕ ಸಂಬಂಧದಿಂದಾಗಿ ಲೀಸಾ ಹುಟ್ಟಿದ್ದಳು. ಪಿತೃತ್ವ ಪರೀಕ್ಷೆಯ ಬಳಿಕಷ್ಟೇ ಜಾಬ್ಸ್ ಲೀಸಾಳನ್ನು ಪುತ್ರಿ ಎಂದು ಸ್ವೀಕರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ