ಆ್ಯಪ್ನಗರ

ಸ್ಟಾಪ್ ಕೌಂಟ್ಸ್: ಈ ಕೂಡಲೇ ಮತ ಎಣಿಕೆ ನಿಲ್ಲಿಸುವಂತೆ ಡೊನಾಲ್ಡ್ ಟ್ರಂಪ್ ಒತ್ತಾಯ!

ಅಮೆರಿಕದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ ಚುನಾವಣೆಗೆ ಇನ್ನೂ ಮತ ಎಣಿಕೆ ನಡೆಯುತ್ತಿರುವುದಕ್ಕೆ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಡೊನಾಲ್ಡ್ ಟ್ರಂಪ್, ಈ ಕೂಡಲೇ ಮತದಾನವನ್ನು ನಿಲ್ಲಿಸಿ ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ.

Vijaya Karnataka Web 5 Nov 2020, 11:26 pm
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ ಚುನಾವಣೆಗೆ ಇನ್ನೂ ಮತ ಎಣಿಕೆ ನಡೆಯುತ್ತಿರುವುದಕ್ಕೆ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
Vijaya Karnataka Web Donald Trump
ಸಂಗ್ರಹ ಚಿತ್ರ


ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಡೊನಾಲ್ಡ್ ಟ್ರಂಪ್, ಈ ಕೂಡಲೇ ಮತದಾನವನ್ನು ನಿಲ್ಲಿಸಿ ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ.

ಅಂಚೆ ಮತಗಳ ನೆಪ ಹೇಳಿಕೊಂಡು ಡೆಮಾಕ್ರೆಟಿಕ್ ಪಕ್ಷ ಚುನಾವಣಾ ಅಕ್ರಮಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕೂಡಲೇ ಮತ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸಿ ಫಲಿತಾಂಶ ಘೋಷಣೆ ಮಾಡಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ.

ಬಿಡೆನ್‌ಗೆ ಗೆಲುವಿನ ವಿಶ್ವಾಸ, ಟ್ರಂಪ್‌ಗೆ ಅಕ್ರಮದ ವಾಸನೆ: ಅಮೆರಿಕ ಚುನಾವಣೆ ಫಲಿತಾಂಶ ಯಾವಾಗ?

ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಹಕ್ಕು ಮಂಡಿಸಿರುವ ಎಲ್ಲಾ ರಾಜ್ಯಗಳಲ್ಲಿ ನಾವು ಕಾನೂನು ಸಮರ ನಡೆಸುತ್ತಿದ್ದೇವೆ. ಈ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷಿಗಳಿವೆ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.


ನ್ಯಾಯಯುತವಾಗಿ ನಾವು ಅಮೆರಿಕದ ಚುನಾವಣೆಯಲ್ಲಿ ಈಗಾಗಲೇ ಜಯ ದಾಖಲಿಸಿದ್ದೇವೆ. ಆದರೆ ಅಧಿಕಾರಕ್ಕಾಗಿ ಹಾತೋರೆಯುತ್ತಿರುವ ಬಿಡೆನ್ ಬಳಗ ಅಕ್ರಮ ಮಾರ್ಗಗಳನ್ನು ಅನುಸರಿಸಿ ದೇಶವನ್ನು ಗೊಂದಲದ ಗೂಡನ್ನಾಗಿ ಪರಿವರ್ತಿಸಿದೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.

ಯಾವ ರಾಜ್ಯಗಳಲ್ಲಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಟ್ರಂಪ್?: ಆವೇಶಕ್ಕೆ ಕಾರಣವೇನು?

ಒಟ್ಟಿನಲ್ಲಿ ಮತ ಎಣಿಕೆ ನಿಲ್ಲಿಸುವಂತೆ ಒತ್ತಾಯಿಸುತ್ತಿರುವ ಟ್ರಂಪ್ ಒಂದು ಕಡೆಯಾದರೆ, ಕೊನೆಯ ಮತವನ್ನೂ ಎಣಿಸುವಂತೆ ಒತ್ತಾಯಿಸುತ್ತಿರುವ ಜೋ ಬಿಡೆನ್ ಮತ್ತೊಂದು ಕಡೆ. ಹೀಗಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಯಾವಾಗ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ