ಆ್ಯಪ್ನಗರ

ಲಾಹೋರ್: ಸಿಎಂ ಮನೆ ಬಳಿ ಆತ್ಮಹತ್ಯಾ ದಾಳಿಗೆ 22 ಸಾವು

ಪಾಕಿಸ್ತಾನದ ಪಂಜಾಬ್‌ ಮುಖ್ಯಮಂತ್ರಿ ನಿವಾಸದ ಸಮೀಪವೇ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದ್ದು, ಘಟನೆಯಲ್ಲಿ 22 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 24 Jul 2017, 6:54 pm
ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ನಿವಾಸದ ಬಳಿ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದ್ದು, ಘಟನೆಯಲ್ಲಿ 22 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
Vijaya Karnataka Web suicide blast near cm residence in pakistans lahore
ಲಾಹೋರ್: ಸಿಎಂ ಮನೆ ಬಳಿ ಆತ್ಮಹತ್ಯಾ ದಾಳಿಗೆ 22 ಸಾವು


ಪಂಜಾಬ್‌ ಮುಖ್ಯಮಂತ್ರಿ ನಿವಾಸ ಶಹ್ಬಾಸ್‌ ಶರೀಫ್‌ ಅವರ ಲಾಹೋರ್‌ ನಿವಾಸದ ಬಳಿಯೇ ಘಟನೆ ನಡೆದಿದ್ದು, ಪೊಲೀಸ್‌ ಅಧಿಕಾರಿ ಸೇರಿದಂತೆ 22 ಮಂದಿ ಮೃತಪಟ್ಟರೆ, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಪೊಲೀಸರನ್ನೇ ಗುರಿಯಾಗಿಟ್ಟುಕೊಂಡು ಆತ್ಮಹತ್ಯಾ ದಾಳಿ ನಡೆಸಲಾಗಿದೆ ಎಂದು ಲಾಹೋರ್ ಪೊಲೀಸರು ಹೇಳಿದ್ದಾರೆ. ಮುಖ್ಯಮಂತ್ರಿ ಮನೆ ಸಮೀಪವಿರುವ ಆರ್ಫಾ ಕರೀಮ್ ಟವರ್ ಸುತ್ತಮುತ್ತ ಪೊಲೀಸರು ಹಾಗೂ ಲಾಹೋರ್ ಪ್ರಾಧಿಕಾರದ ಅಧಿಕಾರಿಗಳು ಅತಿಕ್ರಮ ತೆರವುಗೊಳಿಸುತ್ತಿದ್ದ ವೇಳೆ ಆತ್ಮಹತ್ಯಾ ದಾಳಿ ನಡೆದಿದೆ.

ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದೇ ಬಿಂಬಿಸಲ್ಪಟ್ಟಿರುವ ಲಾಹೋರ್‌ ಕಳೆದ ಕೆಲ ವರ್ಷಗಳಿಂದ ಉಗ್ರರ ದಾಳಿಗೆ ತುತ್ತಾಗುತ್ತಲೇ ಬಂದಿದೆ. ಕಳೆದ ಎಪ್ರಿಲ್‌ನಲ್ಲಿ ಇಲ್ಲಿನ ಬೇಡಿಯಾನ್‌ ರಸ್ತೆಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಮೃತಪಟ್ಟರೆ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ