ಆ್ಯಪ್ನಗರ

'ಈಡಿಯಟ್' ಎಂದು ಗೂಗಲ್‌ ಸರ್ಚ್ ಮಾಡಿದರೆ ಟ್ರಂಪ್‌ ಫೋಟೋ ಬರುವುದೇಕೆ? ಇದಕ್ಕೆ ಗೂಗಲ್ ಸಿಇಒ ಕೊಟ್ಟ ಉತ್ತರವೇನು ಗೊತ್ತಾ?

ಗೂಗಲ್‌ ಸಿಇಒ ಸುಂದರ್ ಪಿಚಾಯಿ ಜತೆ ಅಮೆರಿಕದ ಸಂಸದರು ಇತ್ತೀಚೆಗೆ ಮಾತುಕತೆ ನಡೆಸಿದ್ದರು. ಈ ಪೈಕಿ, ಗೂಗಲ್ ಸರ್ಚ್ ಇಂಜಿನ್ ಕೆಲಸ ಮಾಡುತ್ತಿರುವ ರೀತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಅಮೆರಿಕ ಕಾಂಗ್ರೆಸ್‌ನ ಸದಸ್ಯರು ಕೇಳಿದ್ದಾರೆ. ಜತೆಗೆ, ಚೀನಾದಲ್ಲಿನ ವಿಸ್ತರಣೆ ಯೋಜನೆಗಳ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಹಲವು ಸಣ್ಣಪುಟ್ಟ ಪ್ರಶ್ನೆಗಳ ಬಗ್ಗೆಯೂ ಗೂಗಲ್‌ ಸಿಇಒ ಜತೆ ಕಾವೇರಿದ ಚರ್ಚೆ ನಡೆದಿದೆ.

Indiatimes 14 Dec 2018, 1:01 pm
ವಾಷಿಂಗ್ಟನ್‌: ಗೂಗಲ್‌ ಸಿಇಒ ಜತೆ ಇತ್ತೀಚೆಗೆ ಸಭೆ ನಡೆಸಿದ್ದ ಅಮೆರಿಕ ಕಾಂಗ್ರೆಸ್‌ನ ಸದಸ್ಯರು ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಪೈಕಿ, ಪ್ರಮುಖವಾದ ಪ್ರಶ್ನೆ ಎಂದರೆ ಈಡಿಯಟ್ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ ಕೂಡಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಫೋಟೋ ಬರುವುದೇಕೆ ಎಂದು ಒಬ್ಬರು ಕೇಳಿದ್ದಾರೆ.
Vijaya Karnataka Web sundar pichai


ಅಮೆರಿಕ ಕಾಂಗ್ರೆಸ್‌ನ ಸದಸ್ಯೆ ಝೋ ಲಾಫ್‌ಗ್ರೆನ್ ಭಾರತೀಯ ಮೂಲದ ಸುಂದರ್‌ ಪಿಚಾಯಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿದ್ದಾರೆ. ನಂತರ, ಗೂಗಲ್ ಸರ್ಚ್ ವೆಬ್‌ ಪುಟ ಕೆಲಸ ಮಾಡುವುದು ಹೇಗೆಂದು ತಾಂತ್ರಿಕವಾಗಿ ಗೂಗಲ್‌ ಸಿಇಒ ತಿಳಿಸಿಕೊಟ್ಟಿದ್ದಾರೆ. ಅಲ್ಲದೆ, ಅಲ್ಗಾರಿಥಮ್‌ನ ಲೆಕ್ಕಾಚಾರದ ಮೇಲೆ ಜನಪ್ರಿಯ ಕೀವರ್ಡ್‌ಗಳು, ಫೋಟೋಗಳು ಬರುತ್ತವೆ. ಇದರಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲ ಎಂಬುದನ್ನು ವಿವರಿಸಿದ್ದಾರೆ.

ಇಷ್ಟೆಲ್ಲ ಹೇಳಿದ ಬಳಿಕವೂ ಮತ್ತೆ ಅಮೆರಿಕದ ಕಾಂಗ್ರೆಸ್‌ನ ಮಹಿಳೆ ಲಾಫ್‌ಗ್ರೆನ್‌, ಇದರ ಹಿಂದೆ ಯಾವ ಸಣ್ಣ ವ್ಯಕ್ತಿಯೂ ಇಲ್ಲವೇ ಎಂದು ಮತ್ತೆ ಕೇಳಿದ್ದು, ಇದಕ್ಕೆ ಗೂಗಲ್‌ ಸಿಇಒ ಹಾಗೂ ಇತರರು ನಗುವನ್ನು ತಡೆದುಕೊಂಡಿದ್ದು, ನಂತರ ಇಲ್ಲ. ಗೂಗಲ್‌ ಆ ರೀತಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಪಿಚಾಯಿ ಉತ್ತರ ನೀಡಿದ್ದಾರೆ.

ಗೂಗಲ್‌ ಸರ್ಚ್


ಇದಕ್ಕಿಂತ ನಗು ಬರುವಂತಹ ಪ್ರಶ್ನೆ ಎಂದರೆ, ''ನನ್ನ 7 ವರ್ಷದ ಮೊಮ್ಮಗಳ ಐ ಫೋನ್‌ನಲ್ಲಿ ನನ್ನ ಸಾಧಾರಣವಾದ ಚಿತ್ರ ಹೇಗೆ ಬಂದಿದೆ'' ಎಂದು ಅಮೆರಿಕ ಕಾಂಗ್ರೆಸ್‌ನ ಸ್ಟೀವ್‌ ಕಿಂಗ್ ಪ್ರಶ್ನಿಸಿದ್ದಾರೆ. ಇದಕ್ಕೆ, ಉತ್ತರಿಸಿದ ಗೂಗಲ್ ಸಿಇಒ, ಐ ಫೋನ್‌ ಅನ್ನು ಬೇರೆ ಕಂಪನಿಯಲ್ಲಿ ತಯಾರಿಸುತ್ತಾರೆ ಎಂದು ಕೇಳಿದ್ದಾರೆ. ಇದಕ್ಕೆ ಸುಂದರ್ ಪಿಚಾಯಿ ಒಳಗಿನಿಂದಲೇ ಎಷ್ಟು ನಕ್ಕಿರಬಹುದು ಅಲ್ವಾ?

ಬಳಿಕ, ಮತ್ತೊಬ್ಬ ಕಾಂಗ್ರೆಸ್ ಸದಸ್ಯ ಸ್ಟೀವ್‌ ಕೊಹೆನ್, ''ನಾನು ಮಾಧ್ಯಮವೊಂದಕ್ಕೆ ಇತ್ತೀಚೆಗೆ ನಾಲ್ಕು ಸಂದರ್ಶನಗಳನ್ನು ನೀಡಿದ್ದೆ. ಆದರೆ, ನನ್ನ ಹೆಸರು ಸರ್ಚ್ ಮಾಡಿದರೆ ಆ ಸಂದರ್ಶನಗಳು ಗೂಗಲ್‌ ಸರ್ಚ್‌ನ ಟಾಪ್‌ನಲ್ಲಿ ಏಕೆ ಬರುವುದಿಲ್ಲ'' ಎಂದು ಕೇಳಿದ್ದಾರೆ. ಇದಕ್ಕೆ ನಕ್ಕ ಸುಂದರ್ ಪಿಚಾಯಿ, ತಟಸ್ಥ ನೀತಿಯಡಿ ಸುದ್ದಿ ರ‍್ಯಾಂಕ್ ಹಾಗೂ ಹೈಲೈಟ್‌ ಆಗುತ್ತದೆ ಎಂದು ಉತ್ತರಿಸಿದ್ದಾರೆ.

ಗೂಗಲ್‌ ಸಿಇಒಗೆ ಈ ರೀತಿ ಸಿಲ್ಲಿ ಸಿಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಅಮೆರಿಕ ಕಾಂಗ್ರೆಸ್‌ ಸದಸ್ಯರು ಹಾಗೂ ಹಲವು ಸಂಸದರಿಗೆ ಹೆಚ್ಚು ವಯಸ್ಸಾಗಿದೆ. ಅವರಿಗೆ ಇಂಟರ್ನೆಟ್ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದು ಗೊತ್ತಿಲ್ಲ. ಅಂತರ್ಜಾಲ ಕಂಪನಿಗಳು ಕೆಲಸ ಮಾಡುವ ಎಲ್ಲದನ್ನೂ ತಿಳಿದುಕೊಳ್ಳುವ ಅಗತ್ಯವಿಲ್ಲದಿದ್ದರೂ, ಅಂತರ್ಜಾಲ ದೈತ್ಯ ಕಂಪನಿಗಳಾದ ಗೂಗಲ್‌ಹಾಗೂ ಫೇಸ್‌ಬುಕ್‌ ಬಗ್ಗೆ ಅಲ್ಪ ಜ್ಞಾನವೂ ಇಲ್ಲದಿರುವುದು ಸರಿಯಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಅಲ್ಲದೆ, ಅಮೆರಿಕದ ಎಲ್ಲ ಕಾನೂನುಗಳಿಗೆ ಗೂಗಲ್‌ ಬದ್ಧವಿದೆ. ಚೀನಾಗೆ ಮಾತ್ರ ಪ್ರತ್ಯೇಕ ಸರ್ಚ್‌ ಇಂಜಿನ್ ತೆರೆಯುತ್ತಿಲ್ಲ ಎಂದು ಸಹ ಗೂಗಲ್‌ ಅಮೆರಿಕದ ಸಂಸದರಿಗೆ ಸ್ಪಷ್ಟನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ