ಆ್ಯಪ್ನಗರ

ಚೀನಾ ಬೆದರಿಕೆ: ಜಲಾಂತರ್ಗಾಮಿ ನಿರ್ಮಾಣ ಕಾರ್ಯ ಚುರುಕುಗೊಳಿಸಿದ ತೈವಾನ್!

ಚೀನಾದಿಂದ ನಿರಂತರ ಬೆದರಿಕೆ ಹಿನ್ನೆಲೆಯಲ್ಲಿ, ದ್ವೀಪ ರಾಷ್ಟ್ರ ತೈವಾನ್ ತನ್ನ ಜಲಾಂತರ್ಗಾಮಿ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ. ದಕ್ಷಿಣ ಕಾಹೋಸಿಯಂಗ್ ನಗರದ ಹಡಗುಕಟ್ಟೆ ನಿರ್ಮಾಣ ಕಾರ್ಯವನ್ನು ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್ ಉದ್ಘಾಟಿಸಿದ್ದಾರೆ.

Vijaya Karnataka Web 24 Nov 2020, 11:32 pm
ತೆಪೈ: ಚೀನಾದಿಂದ ನಿರಂತರ ಬೆದರಿಕೆ ಹಿನ್ನೆಲೆಯಲ್ಲಿ, ದ್ವೀಪ ರಾಷ್ಟ್ರ ತೈವಾನ್ ತನ್ನ ಜಲಾಂತರ್ಗಾಮಿ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ.
Vijaya Karnataka Web Taiwan
ಸಂಗ್ರಹ ಚಿತ್ರ


ಈ ಕುರಿತು ಮಾಹಿತಿ ನೀಡಿರುವ ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್, ಚೀನಾದ ಬೆದರಿಕೆ ಅಪಾಯವನ್ನು ಎದುರಿಸಲು ನಮ್ಮ ಸಮರ ಸಿದ್ಧತೆಯನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ದಕ್ಷಿಣ ಕಾಹೋಸಿಯಂಗ್ ನಗರದ ಹಡಗುಕಟ್ಟೆ ನಿರ್ಮಾಣ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ತ್ಸೈ ಇಂಗ್-ವೆನ್, ತೈವಾನ್ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಶಕ್ತವಾಗಿದೆ ಎಂಬುದು ಜಗತ್ತಿಗೆ ತಿಳಿಯಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಚೀನಾದ ಯುದ್ಧ ತಯಾರಿ, ಮೊದಲ ಗುರಿ ತೈವಾನ್!

ಈ ದೀರ್ಘಾವಧಿಯ ಯೋಜನೆಯು ಎಂಟು ಹೊಸ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವವ ಗುರಿ ಹೊಂದಿದ್ದು, ಮೊದಲ ಜಲಾಂತರ್ಗಾಮಿ 2025ರ ವೇಳೆಗೆ ನಿರ್ಮಾಣವಾಗುವ ಸಾಧ್ಯತೆ ಇದೆ.

ತೈವಾನ್‌ನ ನೌಕಾಪಡೆಯು ಪ್ರಸ್ತುತ ನಾಲ್ಕು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದ್ದು, ಈ ಪೈಕಿ ಎರಡು ಜಲಾಂತರ್ಗಾಮಿಗಳನ್ನು 1940 ರ ದಶಕದಲ್ಲಿ ಅಮೆರಿಕ ನಿರ್ಮಿಸಿದವುಗಳಾಗಿವೆ.

ಚೀನಾಗೆ ಗೆಟ್‌ಲಾಸ್ಟ್‌ ಎಂದ ತೈವಾನ್‌ ವಿದೇಶಾಂಗ ಸಚಿವ, ಭಾರತವನ್ನು ಹೊಗಳಿದ ಜೋಸೆಫ್‌!

ತೈವಾನ್-ಚೀನಾ ನಡುವಿನ ಬಬಿಗುವಿನ ವಾತಾವರಣದ ನಡುವೆಯೇ, ತೈವಾನ್ ತನ್ನ ಸಾಮರಿಕ ಬಲ ಹೆಚ್ಚಿಸಲು ಮುಂದಡಿ ಇಟ್ಟಿರುವುದು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ