ಆ್ಯಪ್ನಗರ

ಕ್ಯೂನಲ್ಲಿ ನಿಂತು ಬಾಂಬ್‌ ಸ್ಫೋಟಿಸಿದ....

ವ್ಯಕ್ತಿಯೊಬ್ಬ ಔತಣಕೂಟದಲ್ಲಿ ಪಾಲ್ಗೊಳ್ಳಲು ಪ್ಲೇಟ್‌ ಹಿಡಿದುಕೊಂಡು ಸಮಾಧಾನದಿಂದ ಕ್ಯೂನಲ್ಲಿ ಬರುತ್ತಿದ್ದ. ನೋಡನೋಡುತ್ತಿದ್ದಂತೆಯೇ ಈತ ತನ್ನ ಬೆನ್ನಿಗೆ ಕಟ್ಟಿಕೊಂಡಿದ್ದ ಸ್ಫೋಟಕವನ್ನು ಸ್ಫೋಟಿಸಿಬಿಟ್ಟ.

Vijaya Karnataka 22 Apr 2019, 5:00 am
ಕೊಲಂಬೊ: ವಿದೇಶಿಯರೇ ಹೆಚ್ಚು ತಂಗುವ ಕೊಲೊಂಬೊದ ಪಂಚತಾರಾ 'ಸಿನ್ನಾಮಾನ್‌ ಗ್ರ್ಯಾಂಡ್‌ ಹೋಟೆಲ್‌' ಭಾನುವಾರ 'ಈಸ್ಟರ್‌ ಬ್ರೇಕ್‌ಫಾಸ್ಟ್‌' ಔತಣಕೂಟವನ್ನು ತನ್ನ ಗ್ರಾಹಕರಿಗೆ ಆಯೋಜಿಸಿತ್ತು. ಶನಿವಾರ ರಾತ್ರಿಯೇ ಮೊಹಮ್ಮದ್‌ ಅಜಮ್‌ ಮೊಹಮ್ಮದ್‌ ಹೆಸರಿನಲ್ಲಿ ರೂಮ್‌ ಬುಕ್‌ ಮಾಡಿದ್ದ ವ್ಯಕ್ತಿಯೊಬ್ಬ ಔತಣಕೂಟದಲ್ಲಿ ಪಾಲ್ಗೊಳ್ಳಲು ಪ್ಲೇಟ್‌ ಹಿಡಿದುಕೊಂಡು ಸಮಾಧಾನದಿಂದ ಕ್ಯೂನಲ್ಲಿ ಬರುತ್ತಿದ್ದ. ನೋಡನೋಡುತ್ತಿದ್ದಂತೆಯೇ ಈತ ತನ್ನ ಬೆನ್ನಿಗೆ ಕಟ್ಟಿಕೊಂಡಿದ್ದ ಸ್ಫೋಟಕವನ್ನು ಸ್ಫೋಟಿಸಿಬಿಟ್ಟ. ಸಂಭ್ರಮ ಮನೆ ಮಾಡಿದ್ದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿತು. ಜನ ದಿಕ್ಕಾಪಾಲಾಗಿ ಓಡತೊಡಗಿದರು. ರಕ್ತ ಸಿಕ್ತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎನ್ನುತ್ತಾರೆ ಹೋಟೆಲ್‌ ವ್ಯವಸ್ಥಾಪಕರೊಬ್ಬರು. ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದ ಶಾಂಘ್ರಿ ಲಾ ಮತ್ತು ಕಿಂಗ್ಸ್‌ಬರಿ ಹೊಟೇಲ್‌ಗಳೂ ಇದೇ ರೀತಿ ದಾಳಿಗಳಿಗೆ ತುತ್ತಾಗಿವೆ.
Vijaya Karnataka Web lanka3

ಚರ್ಚ್‌ ಪುಡಿ ಪುಡಿ
ಕೊಲಂಬೊದ ಮೂರು ಚರ್ಚ್‌ಗಳು ದಾಳಿಕೋರರ ಟಾರ್ಗೆಟ್‌ ಆಗಿದ್ದವು. ಕೊಲಂಬೊದ ಸೇಂಟ್‌ ಆಂತೋನಿಸ್‌ ಚರ್ಚ್‌, ನೆಗೊಂಬೊದ ಸೇಂಟ್‌ ಸೆಬಾಸ್ಟಿಯನ್‌ ಚರ್ಚ್‌, ಬಟ್ಟಿಕಲೋವಾದ ಚರ್ಚ್‌ಗಳು ದಾಳಿಗೆ ತುತ್ತಾಗಿ ತೀವ್ರ ತರದಲ್ಲಿ ಹಾನಿಗೀಡಾಗಿವೆ. ಈಸ್ಟರ್‌ ಹಬ್ಬದ ನಿಮಿತ್ತ ಭಾನುವಾರ ಪ್ರಾರ್ಥನೆ ಸಲ್ಲಿಸಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದ ಸಮಯವನ್ನೇ ದಾಳಿಕೋರರು ತಮ್ಮ ಕೃತ್ಯಕ್ಕೆ ಮೀಸಲಾಗಿಸಿದ್ದರು. ಶಕ್ತಿಶಾಲಿ ಬಾಂಬ್‌ ಸ್ಫೋಟಕ್ಕೆ ನೆಗೊಂಬೊದ ಚರ್ಚ್‌ ಕಟ್ಟಡವಂತೂ ಅದುರಿಹೋಗಿದೆ. ರಕ್ತ ಸಿಕ್ತ ದೇಹಗಳು ಎಲ್ಲೆಂದರಲ್ಲಿ ಬಿದ್ದಿದ್ದು ಭೀಕರತೆಯನ್ನು ಸಾರುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ