ಆ್ಯಪ್ನಗರ

ಇನ್ನು ಪಾಕಿಸ್ತಾನದಲ್ಲಿ ಚೀನಾ ಭಾಷೆ ಅಧಿಕೃತ

ಚೀನಾದ ಮಾಂಡರಿನ್ ಭಾಷೆ ಪಾಕಿಸ್ತಾನದ ಅಧಿಕೃತ ಭಾಷೆಗಳಲ್ಲಿ ಒಂದು ಎಂದು ಪಾಕಿಸ್ತಾನ ಶಾಸನಮಂಡಳಿ ಸೋಮವಾರ ಘೋಷಿಸಿದೆ. ಚೀನಾ ಮತ್ತು ಪಾಕಿಸ್ತಾನದ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳುವ ಸೂಚನೆಯಾಗಿ ಇದನ್ನು ಜಾರಿಗೆ ತರಲಾಗಿದೆ ಎಂದು ಎಎನ್‍ಐ ವರದಿ ಮಾಡಿದೆ.

Vijaya Karnataka Web 20 Feb 2018, 2:46 pm
ಇಸ್ಲಾಮಾಬಾದ್: ಚೀನಾದ ಮಾಂಡರಿನ್ ಭಾಷೆ ಪಾಕಿಸ್ತಾನದ ಅಧಿಕೃತ ಭಾಷೆಗಳಲ್ಲಿ ಒಂದು ಎಂದು ಪಾಕಿಸ್ತಾನ ಶಾಸನಮಂಡಳಿ ಸೋಮವಾರ ಘೋಷಿಸಿದೆ. ಚೀನಾ ಮತ್ತು ಪಾಕಿಸ್ತಾನದ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳುವ ಸೂಚನೆಯಾಗಿ ಇದನ್ನು ಜಾರಿಗೆ ತರಲಾಗಿದೆ ಎಂದು ಎಎನ್‍ಐ ವರದಿ ಮಾಡಿದೆ.
Vijaya Karnataka Web the pakistani senate declare mandarin as one of the official languages of pakistan
ಇನ್ನು ಪಾಕಿಸ್ತಾನದಲ್ಲಿ ಚೀನಾ ಭಾಷೆ ಅಧಿಕೃತ


ಚೀನಾದ ರೋಡ್ ಮತ್ತು ಬೆಲ್ಟ್ ಗ್ಲೋಬಲ್ ಯೋಜನೆಯ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ವಲಯದ ಕೆಲಸಗಳು ನಡೆಯುತ್ತಿರುವುದು ಗೊತ್ತೇ ಇದೆ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಭಾಷೆಗಳ ವಿಚಾರವಾಗಿ ಸಮಸ್ಯೆ ಬರದಂತೆ ಮಾಂಡರಿನ್ ಭಾಷೆಯನ್ನು ತಮ್ಮ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಗುರುತಿಸಿರುವುದಾಗಿ ಪಾಕ್ ಹೇಳಿದೆ.

ಪಾಕಿಸ್ತಾನದಲ್ಲಿ ಇಂಗ್ಲಿಷ್, ಉರ್ದು, ಅರೇಬಿಕ್‌ನಂತಹ ಭಾಷೆಗಳನ್ನೂ ಮಾತನಾಡುತ್ತಾರೆ. ಇದೀಗ ಮಾಂಡರಿನ್ ಈ ಪಟ್ಟಿಗೆ ಸೇರಿಸಿರುವ ಹಿಂದೆ ರಾಜಕೀಯ ಕಾರಣಗಳು ಇವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚೀನಾ ತಮ್ಮ ಬೆನ್ನಿಗೆ ಇದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಲು ಪಾಕ್ ಈ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ.

In a short span of 70 years, #Pakistan has flirted with promoting four languages that were not the mother tongue of many people in the country — English, Urdu, Arabic, & now Chinese —ignoring native languages. https://t.co/6y0zKvK20m — Husain Haqqani (@husainhaqqani) February 19, 2018 ಆದರೆ ಈ ನಿರ್ಧಾರದ ಬಗ್ಗೆ ಪಾಕಿಸ್ತಾನದಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಪಾಕ್ ಸರಕಾರ ಪಂಜಾಬಿ, ಪಸ್ತೂನ್ ನಂತಹ ಸ್ಥಳೀಯ ಭಾಷೆಗಳನ್ನುಇನ್ನೂ ಅಧಿಕೃತವಗಿ ಗುರುತಿಸಿಲ್ಲ. ಚೀನಾ ಭಾಷೆಯನ್ನು ಮಾತ್ರ ತನ್ನ ಅನುಕೂಲಕ್ಕಾಗಿ ಅಧಿಕೃತ ಭಾಷೆ ಎಂದು ಘೋಷಿಸಿದೆ ಎಂದು ರಾಯಭಾರಿ ಹುಸೇನ್ ಹಕ್ಕಾನಿ ಟ್ವೀಟ್ ಮಾಡಿದ್ದಾರೆ. ಚೀನಾದಿಂದಾಗಿ ಹಲವು ರೀತಿಯ ಸಹಾಯ ಸಿಗಲಿದ್ದು ಆ ಭಾಷೆ ಕಲಿತರೆ ಪಾಕ್ ಮತ್ತು ಚೀನಾದಲ್ಲಿ ಉದ್ಯೋಗ ಅವಕಾಶಗಳು ಸಿಗಲಿವೆ ಎಂದು ಅಲ್ಲಿನ ಸರಕಾರ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ