ಆ್ಯಪ್ನಗರ

ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವಂತೆ ಅಮೆರಿಕಾದಲ್ಲಿ ಪ್ರತಿಭಟನೆ

ಭಾರತದಲ್ಲಿ ಕೇಳಿ ಬರುತ್ತಿದ್ದ ಚೀನಾ ವಿರೋಧಿ ಕೂಗು ಅಮೆರಿಕಾದಲ್ಲೂ ಪ್ರತಿಧ್ವನಿಸಿದೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತ, ಟಿಬೆಟ್ ಮತ್ತು ತೈವಾನ್ ದೇಶಗಳ ನಾಗರಿಕರು ಚೀನಾದ ವಸ್ತುಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

Agencies 4 Jul 2020, 10:35 am
ನ್ಯೂಯಾರ್ಕ್: ಭಾರತ- ಚೀನಾ ಮಧ್ಯೆ ಉಂಟಾಗಿರೋ ಗಡಿ ಸಂಘರ್ಷದ ಬೆನ್ನಲ್ಲಿ ಚೀನಾ ವಿರುದ್ಧ ಸಿಡಿದೆದ್ದಿರೋ ಭಾರತೀಯರು ಚೀನಾಗೆ ತಕ್ಕ ಪಾಠ ಕಲಿಸಬೇಕೆಂದು ಸ್ವಯಂ ಪ್ರೇರಿತವಾಗಿ ಚೀನೀ ವಸ್ತುಗಳ ಬಹಿಷ್ಕಾರಕ್ಕೆ ಮುಂದಾಗಿದ್ದರು. ಈ ಕುರಿತು ದೇಶಾದ್ಯಂತ ಚೀನಾ ವಿರುದ್ಧ ವ್ಯಾಪಕ ವಿರೋಧಗಳು ಕೇಳಿ ಬಂದಿದ್ದವು.
Vijaya Karnataka Web PROTEST IN AMERICA


ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಭೀಕರ ದುರಂತ: ಬಸ್‌ಗೆ ರೈಲು ಡಿಕ್ಕಿ, 19 ಸಿಖ್‌ ಯಾತ್ರಿಕರ ಸಾವು

ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಚೀನಾದ 59 ಆಪ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿತ್ತು. ಚೀನಾ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿತ್ತು. ಇದೀಗ ಭಾರತದಲ್ಲಿ ಕೇಳಿ ಬರುತ್ತಿದ್ದ ಚೀನಾ ವಿರೋಧಿ ಕೂಗು ಅಮೆರಿಕಾದಲ್ಲೂ ಪ್ರತಿಧ್ವನಿಸಿದೆ. ಅಮೆರಿಕಾದಲ್ಲಿ ನೆಲೆಸಿರುವ ವಿವಿಧ ದೇಶಗಳ ನಾಗರಿಕರು ಚೀನಾದ ವಸ್ತುಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಗಡಿ ಉದ್ವಿಗ್ನತೆ ಪ್ರಯತ್ನ ಬೇಡ: ಪ್ರಧಾನಿ ಮೋದಿ ಲಡಾಖ್ ಭೇಟಿಗೆ ಚೀನಾ ಪ್ರತಿಕ್ರಿಯೆ!

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಒಂದಾಗಿರುವ ಭಾರತ, ಟಿಬೆಟ್ ಮತ್ತು ತೈವಾನ್ ನಾಗರಿಕರು ಪ್ರತಿಭಟನೆ ನಡೆಸಿದ್ದು, ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ಅಮೆರಿಕನ್ನರಲ್ಲಿ ಆಗ್ರಹಿಸಿದ್ದಾರೆ. ಪ್ರತಿಭಟನೆ ವೇಳೆ ಭಿತ್ರಿಪತ್ರಗಳನ್ನು ಹಿಡಿದು ಚೀನಾ ವಿರುದ್ಧ ಘೋಷಣೆ ಕೂಗಿದ್ದಾರೆ.

ಒಪ್ಪಂದದ ಶಾಯಿ ಆರುವ ಮುನ್ನವೇ ವೈರಸ್ ಕಳುಹಿಸಿದ ಚೀನಾ: ಮತ್ತೆ ಗುಡುಗಿದ ಟ್ರಂಪ್!

ಚೀನಾದ ವಸ್ತುಗಳನ್ನು ನಿಷೇಧಿಸುವ ಮೂಲಕ ವ್ಯಾಪಾರ ಸಂಬಂಧವನ್ನು ಕೊನೆಗೊಳಿಸಬೇಕು ಎಂದಿರುವ ಪ್ರತಿಭಟನಾಕಾರರು, ತೈವಾನ್‌ಗೆ ಬೆಂಬಲ ನೀಡುವುದು ಮಾತ್ರವಲ್ಲದೇ ಟಿಬೆಟ್‌ನ ಸ್ವಾತಂತ್ರ್ಯ ಹೋರಾಟದ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ