ಆ್ಯಪ್ನಗರ

ಉದ್ದೇಶಪೂರ್ವಕವಾಗಿ ಕೊರೊನಾ ಹರಡಿದರೆ ಅಮೆರಿಕದಲ್ಲಿ ಭಯೋತ್ಪಾದನಾ ಪ್ರಕರಣ ದಾಖಲು

ಉದ್ದೇಶಪೂರ್ವಕವಾಗಿ ಕೊರೊನಾ ವೈರಸ್‌ ಹಬ್ಬಿಸಿದರೆ ಅವರಿಗೆ ಭಯೋತ್ಪಾದನಾ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಡೆಪ್ಯೂಟಿ ಅಟಾರ್ನಿ ಜನರಲ್‌ ರೆಫ್ರಿ ಹೇಳಿದ್ದಾರೆ. ಇದು ಜೈವಿಕ ದಾಳಿ ತರ ಕಾಣುತ್ತಿದ್ದು, ಇಂತಹ ಕೃತ್ಯಗಳು ರಾಷ್ಟ್ರದ ಭದ್ರತೆಗೆ ಸಂಬಂಧಿಸಿವೆ ಎಂದಿದ್ದಾರೆ

Agencies 26 Mar 2020, 12:13 am
ನ್ಯೂಯಾರ್ಕ್: ಉದ್ದೇಶಪೂರ್ವಕವಾಗಿ ಕೊರೊನಾ ವೈರಸ್ ಹಬ್ಬಿಸುವವರು ಭಯೋತ್ಪಾದನಾ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚರಿಸಿದ್ದಾರೆ.
Vijaya Karnataka Web US


ನ್ಯಾಯಾಂಗ ಇಲಾಖೆಯ ಉನ್ನತ ಅಧಿಕಾರಿಗಳು, ಕಾನೂನು ಜಾರಿ ಸಂಸ್ಥೆಯ ಮುಖ್ಯಸ್ಥರು ಮತ್ತು ಅಮೆರಿಕದ ಎಲ್ಲ ಅಟಾರ್ನಿಗಳಿಗೆ ಡೆಪ್ಯೂಟಿ ಅಟಾರ್ನಿ ಜನರಲ್‌ ಜೆಫ್ರಿ ರೋಸೆನ್ ಪತ್ರ ಬರೆದಿದ್ದು, ಉದ್ದೇಶಪೂರ್ವಕವಾಗಿ ಕೋವಿಡ್-19 ವೈರಸ್‌ ಹರಡಿದರೆ ಅವರನ್ನು ಭಯೋತ್ಪಾದಕರೆಂದು ಪರಿಗಣಿಸಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಜೈವಿಕ ದಾಳಿಯಂತೆ ಕಂಡು ಬರುತ್ತಿದೆ. ಆದ್ದರಿಂದ ಇಂತಹ ಕೃತ್ಯಗಳು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದವು ಎಂಬುದನ್ನು ಸೂಚಿಸುತ್ತದೆ. ಕೊರೊನಾ ವೈರಸ್‌ನ್ನು ಅಮೆರಿಕನ್ನರ ವಿರುದ್ಧ ಅಸ್ತ್ರವಾಗಿ ಬಳಸುವ ಬೆದರಿಕೆಗಳು ಅಥವಾ ಪ್ರಯತ್ನಗಳನ್ನು ನಾವು ಸಹಿಸಲ್ಲ ಎಂದು ಜೆಫ್ರಿ ರೋಸೆನ್ ಬರೆದಿದ್ದಾರೆ.

ಇಟಲಿ ಬಳಿಕ ಸ್ಪೇನ್‌ನಲ್ಲೀಗ ಕೊರೊನಾ ಮರಣ ಮೃದಂಗ, ಒಂದೇ ದಿನ 738 ಜನ ಬಲಿ!

ಅಮೆರಿಕದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಇದುವರೆಗೂ 60 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 819 ಜನ ಮೃತಪಟ್ಟಿದ್ದಾರೆ. ಸದ್ಯಕ್ಕೆ ಅತಿ ಹೆಚ್ಚು ಸಕ್ರಿಯ ಕೊರೊನಾ ಸೋಂಕಿತರು ಅಮೆರಿಕದಲ್ಲಿದ್ದು, ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಅಮೆರಿಕ ಸರಕಾರ ಕೈಗೊಳ್ಳುತ್ತಿದೆ.

ಕೊರೊನಾಗೆ ಸಿಕ್ತಾ ಮದ್ದು..? ಕೇರಳದಲ್ಲಿ ಮೂರೇ ದಿನದಲ್ಲಿ ಸೋಂಕಿತ ಗುಣಮುಖ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ