ಆ್ಯಪ್ನಗರ

22 ರಂದು ಟ್ರಂಪ್‌ - ಮೂನ್‌ ಭೇಟಿ

ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರ ಅಮೆರಿಕ ಭೇಟಿಗೂ ಮೊದಲು ಮೇ 22ರಂದು ಶ್ವೇತಭವನದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ-ಇನ್‌ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ.

Vijaya Karnataka 6 May 2018, 10:02 am
ವಾಷಿಂಗ್ಟನ್‌ : ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರ ಅಮೆರಿಕ ಭೇಟಿಗೂ ಮೊದಲು ಮೇ 22ರಂದು ಶ್ವೇತಭವನದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ-ಇನ್‌ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ.
Vijaya Karnataka Web trump kim jong un


ಈ ವೇಳೆ ಇತ್ತೀಚಿನ ಭೇಟಿ ಸಮಯದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜತೆ ನಡೆದ ಮಾತುಕತೆಯ ಕುರಿತು ಅಮೆರಿಕ ಅಧ್ಯಕ್ಷ ರಿಗೆ ಮೂನ್‌ ಮಾಹಿತಿ ನೀಡಲಿದ್ದಾರೆ.

''ಮೇ 22ರ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷರ ನಡುವಿನ ಭೇಟಿ ಉದ್ದೇಶ ಎರಡು ರಾಷ್ಟ್ರಗಳ ಸ್ನೇಹವನ್ನು ಮತ್ತಷ್ಟು ಬಲಪಡಿಸುವುದು. ಈ ಸಮಯದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರೊಂದಿಗೆ ನಡೆಯುವ ಮುಂದಿನ ಸಭೆ ಕುರಿತೂ ಪ್ರಸ್ತಾಪವಾಗಲಿದೆ,'' ಎಂದು ಶ್ವೇತಭವನ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ತಿಳಿಸಿದ್ದಾರೆ.

ಕಳೆದ ವಾರ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ಮೊದಲ ಬಾರಿಗೆ ತಮ್ಮ ದೇಶದ ಗಡಿ ದಾಟಿ ದಕ್ಷಿಣ ಕೊರಿಯಾಗೆ ಐತಿಹಾಸಿಕ ಭೇಟಿ ನೀಡಿ, ಮೂನ್‌ ಜೇ-ಇನ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಭೇಟಿ ಸಮಯದಲ್ಲಿ ಕೊರಿಯಾ ದೇಶಗಳನ್ನು ಅಣ್ವಸ್ತ್ರ ಮುಕ್ತವಾಗಿಸುವ ಭರವಸೆ ನೀಡಿದ್ದರು. ಜತೆಗೆ ತನ್ನಲ್ಲಿರುವ ಅಣ್ವಸ್ತ್ರ ಘಟಕವನ್ನು ಮೇ ಅಂತ್ಯದೊಳಗೆ ನಾಶಪಡಿಸುವುದಾಗಿಯೂ ಘೋಷಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ