ಆ್ಯಪ್ನಗರ

ಇಂಗ್ಲೆಂಡ್‌ನಲ್ಲಿ ಸಾಕು ಬೆಕ್ಕಿಗೆ ಕೊರೊನಾ ಪಾಸಿಟಿವ್‌‌‌..! ಪ್ರಾಣಿಗಳಿಂದ ಸೋಂಕು ಹರಡುತ್ತಾ..?

ಇಡೀ ಮಾನವ ಕುಲವನ್ನೇ ಆತಂಕಕ್ಕೆ ದೂಡಿರುವ ಕೊರೊನಾ ವೈರಸ್‌ ಈಗ ಪ್ರಾಣಿಗಳಿಗೆ ಲಗ್ಗೆಯಿಡುತ್ತಿದೆ. ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಸಾಕು ಬೆಕ್ಕಿನಲ್ಲಿ ಕೊರೊನಾ ವೈರಸ್‌ ಇರುವುದು ಪತ್ತೆಯಾಗಿದೆ. ಆದರೆ, ಪ್ರಾಣಿಗಳಿಂದ ಸೋಂಕು ಹರಡುವುದಕ್ಕೆ ಯಾವುದೇ ಸಾಕ್ಷಿಗಳು ಲಭ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

AFP 27 Jul 2020, 8:46 pm
ಲಂಡನ್‌: ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಸಾಕು ಬೆಕ್ಕಿಗೆ ಕೊರೊನಾ ವೈರಸ್‌ ಸೋಂಕು ದೃಢವಾಗಿದೆ ಎಂದು ಸೋಮವಾರ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಬೆಕ್ಕಿನಿಂದ ಕೊರೊನಾ ಸೋಂಕು ಹರಡುವ ಬಗ್ಗೆ ಯಾವುದೇ ಸಾಕ್ಷಿಗಳು ಲಭಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.
Vijaya Karnataka Web uk pet cat tests positive no evidence it can spread coronavirus say doctors
ಇಂಗ್ಲೆಂಡ್‌ನಲ್ಲಿ ಸಾಕು ಬೆಕ್ಕಿಗೆ ಕೊರೊನಾ ಪಾಸಿಟಿವ್‌‌‌..! ಪ್ರಾಣಿಗಳಿಂದ ಸೋಂಕು ಹರಡುತ್ತಾ..?


ಲಂಡನ್‌ ಬಳಿಯ ಪ್ರದೇಶದ ಈ ತಿಂಗಳ ಆರಂಭದಲ್ಲಿ ನಡೆಸಿದ ಸರ್ವೇಯಲ್ಲಿ ಬೆಕ್ಕಿನಲ್ಲಿ ಸೋಂಕು ಪತ್ತೆಯಾಗಿದೆ ಎಂದು ಇಂಗ್ಲೆಂಡ್‌ನ ಮುಖ್ಯ ಪಶು ವೈದ್ಯಾಧಿಕಾರಿ ಹೇಳಿದ್ದಾರೆ. ಬೆಕ್ಕಿನ ಮಾಲೀಕರಿಗೆ ಸೋಂಕು ದೃಢವಾಗಿತ್ತು. ಅವರಿಂದ ಬೆಕ್ಕಿಗೆ ಸೋಂಕು ತಗುಲಿರುವ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಬೆಕ್ಕಿಗೆ ಯಾವುದೇ ಅಪಾಯ ಇಲ್ಲ ಎಂದು ಇಂಗ್ಲೆಂಡ್‌ ಪರಿಸರ ಇಲಾಖೆ ತಿಳಿಸಿದೆ. ಇಂಗ್ಲೆಂಡ್‌ನಲ್ಲಿ ಪ್ರಾಣಿಗೆ ಕೊರೊನಾ ವೈರಸ್‌ ತಗುಲಿರುವುದು ಇದೇ ಮೊದಲ ಬಾರಿ. ಆದರೆ, ಈ ರೋಗ ಪ್ರಾಣಿಗಳಿಂದ ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ಪರಿಸರ ಇಲಾಖೆ ಹೇಳಿದೆ.

ಮತ್ತೆ ಪಂಚ ಸಹಸ್ರ ದಾಟಿದ ಕೊರೊನಾ..! ರಾಜ್ಯದಲ್ಲಿ ಭರ್ತಿ ಲಕ್ಷ ದಾಟಿದ ಸೋಂಕು

ಬೆಕ್ಕಿಗೆ ಇರುವುದು ಆರಂಭದಲ್ಲಿ ಹರ್ಪಿಸ್ ವೈರಸ್ ಎಂದು ಗುರುತಿಸಲಾಗಿತ್ತು. ಆದರೆ, ಮಾದರಿಯನ್ನು ನಂತರ ಕೊರೊನಾ ವೈರಸ್‌ ಪರೀಕ್ಷೆಗಾಗಿ ಕಳುಹಿಸಲಾಯಿತು. ಪರೀಕ್ಷೆಯಲ್ಲಿ ಪಾಸಿಟಿವ್‌ ಎಂದು ವರದಿ ಬಂದಿದೆ.

ಉ.ಕೊರಿಯಾದಲ್ಲಿ ಮೊದಲ ಕೊರೊನಾ ಸೋಂಕು: ನಗರ ಲಾಕ್‌ಡೌನ್‌ಗೆ ಕಿಮ್ ಜಾಂಗ್ ಆದೇಶ!

ಇದನ್ನು, ಅತಿವಿರಳ ಘಟನೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಕ್ರಿಸ್ಚಿಯನ್‌ ಮಿಡಲ್‌ ಮಿಸ್‌ ಹೇಳಿದ್ದು, ಸಾಕು ಪ್ರಾಣಿಗಳಿಂದ ನೇರವಾಗಿ ಮನುಷ್ಯರಿಗೆ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದಿದ್ದಾರೆ. ಇಂಗ್ಲೆಂಡ್‌ನಲ್ಲಿ ಪ್ರಾಣಿಗೆ ಕೊರೊನಾ ಸೋಂಕು ತಗುಲಿರುವುದು ಮೊದಲ ಪ್ರಕರಣವಾದರೂ, ಇತರೆಡೆ ಪ್ರಾಣಿಗಳಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

ಕೋವಿಡ್‌-19ಗೆ ಲಸಿಕೆಯ ಅಂತಿಮ ಹಂತದ ಪ್ರಯೋಗ, ರಾಜಕೀಯದ ಪರ್ವ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ