ಆ್ಯಪ್ನಗರ

ಮಂಗಳ ಗ್ರಹಕ್ಕೆ ಯುಎಇ ನೌಕೆ: ಜಪಾನ್ ಸಹಯೋಗದಲ್ಲಿ ಅರಬ್ ಜಗತ್ತಿನ ಮೊದಲ ಬಾಹ್ಯಾಕಾಶ ಯೋಜನೆ ಯಶಸ್ವಿ!

ಮಂಗಳ ಗ್ರಹದ ವಾತಾವರಣದ ಅಧ್ಯಯನಕ್ಕೆ ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ನಿರ್ಮಿಸಿರುವ ನೌಕೆಯನ್ನು, ಜಪಾನ್‌ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಮೂಲಕ ಅರಬ್ ಜಗತ್ತು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಇತಿಹಾಸವೊಂದನ್ನು ಬರೆದಿದೆ.

Vijaya Karnataka Web 20 Jul 2020, 3:57 pm
ಟೋಕಿಯೋ: ಬಾಹ್ಯಾಕಾಶ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿರುವ ಅರಬ್ ಜಗತ್ತು, ಈ ಮೂಲಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಇತಿಹಾಸವೊಂದನ್ನು ಬರೆದಿದೆ.
Vijaya Karnataka Web Al Amal
ಯುಎಇ ನಿರ್ಮಿತ ಅಲ್ ಅಮಲ್ ಬಾಹ್ಯಾಕಾಶ ನೌಕೆ


ಮಂಗಳ ಗ್ರಹದ ವಾತಾವರಣದ ಅಧ್ಯಯನಕ್ಕೆ ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ನಿರ್ಮಿಸಿರುವ ನೌಕೆಯನ್ನು, ಜಪಾನ್‌ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ದಕ್ಷಿಣ ಜಪಾನ್‌ನ ತನೆಗಶಿಮಾ ಬಾಹ್ಯಾಕಾಶ ಕೇಂದ್ರದಿಂದ ಯುಎಇ ನಿರ್ಮಿತ ಅಲ್-ಅಮಲ್(HOPE ) ನೌಕೆಯನ್ನು ಜಪಾನ್‌ನ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ನಾಸಾದ ಮಾರ್ಸ್ ಹೆಲಿಕಾಪ್ಟರ್‌ಗೆ 'ಇಂಜೆನ್ಯುಯಿಟಿ' ಎಂದು ಹೆಸರಿಟ್ಟ ಹೈಸ್ಕೂಲ್ ವಿದ್ಯಾರ್ಥಿನಿ!

ಈ ಕುರಿತು ಮಾಹಿತಿ ನೀಡಿರುವ ಯುಎಇಯ ಮೊಹಮ್ಮದ್ ಬಿನ್ ರಶೀದ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಯೂಸುಫ್ ಹಮದ್ ಅಲ್ಶೈಬಾನಿ, ಮಂಗಳ ಗ್ರಹಕ್ಕೆ ಅಲ್-ಅಮಲ್ ನೌಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದು ಯುಎಇ ಸೇರಿದಂತೆ ಇಡೀ ಅರಬ್ ಜಗತ್ತಿಗೆ ಐತಿಹಾಸಿಕ ದಿನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

HOPE ಅಥವಾ ಅಲ್-ಅಮಲ್ ನೌಕೆಯನ್ನು ಉಡಾವಣೆ ಮಾಡುವ ಮೂಲಕ ಯುಎಇ ಅರಬ್ ಜಗತ್ತನ್ನು ಬಾಹ್ಯಾಕಾಶ ಕ್ಷೇತ್ರಕ್ಕೆ ಅಧಿಕೃತವಾಗಿ ಪರಿಚಯಿಸಿದ ಹೆಗ್ಗಳಿಕೆ ಮಾತ್ರವಾಗಿದೆ.


ಮಂಗಳ ಗ್ರಹದಲ್ಲೂ ಭೂಕಂಪ: ನೆಲ ನಡುಗಿಸಲು ತೋರದು ಅನುಕಂಪ!

ಇನ್ನು ಯುಎಇಯ ಅಲ್-ಅಮಲ್ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್, ಮಹಿಳಾ ವಿಜ್ಞಾನಿಗಳ ತಂಡ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ