ಆ್ಯಪ್ನಗರ

ಉಗ್ರರ ಪಟ್ಟಿಯಿಂದ ಹಫೀಜ್‌ ಸಯೀದ್ ಹೆಸರು ಕೈ ಬಿಡಲ್ಲ: ವಿಶ್ವಸಂಸ್ಥೆ

ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಪಾಕ್‌ ಮೂಲದ ಜೈಷೆ ಮೊಹಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ನಿಷೇಧಿಸಬೇಕೆಂಬ ಹೊಸ ಕೋರಿಕೆಯನ್ನು ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿ ಸ್ವೀಕರಿಸಿರುವ ಸಂದರ್ಭದಲ್ಲೇ ಸಯೀದ್‌ನ ಮನವಿಯನ್ನು ತಿರಸ್ಕರಿಸಿದೆ.

Vijaya Karnataka 7 Mar 2019, 9:32 pm
ಹೊಸದಿಲ್ಲಿ: ತನ್ನ ಹೆಸರನ್ನು ಉಗ್ರರ ಪಟ್ಟಿಯಿಂದ ತೆಗೆದುಹಾಕಬೇಕೆಂದು 2008ರ ಮುಂಬಯಿ ದಾಳಿಯ ಸಂಚುಕೋರ ಹಾಗೂ ಜಮಾತ್‌ ಉದ್‌ ದವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಮಾಡಿಕೊಂಡಿದ್ದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ.
Vijaya Karnataka Web Hafiz


ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಪಾಕ್‌ ಮೂಲದ ಜೈಷೆ ಮೊಹಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ನಿಷೇಧಿಸಬೇಕೆಂಬ ಹೊಸ ಕೋರಿಕೆಯನ್ನು ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿ ಸ್ವೀಕರಿಸಿರುವ ಸಂದರ್ಭದಲ್ಲೇ ಸಯೀದ್‌ನ ಮನವಿಯನ್ನು ತಿರಸ್ಕರಿಸಿದೆ.

ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕನೂ ಆಗಿರುವ ಸಯೀದ್‌ ಅನೇಕ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವುದಕ್ಕೆ ಭಾರತ ನೀಡಿರುವ ಬಲವಾದ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಆತನ ಅರ್ಜಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

166 ಮಂದಿಯನ್ನು ಬಲಿ ಪಡೆದ ಮುಂಬಯಿ ದಾಳಿಯ ನಂತರ 2008ರ ಡಿ.10ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಸಯೀದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ಕಪ್ಪುಪಟ್ಟಿಗೆ ಸೇರಿಸಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ಗೃಹ ಬಂಧನದಲ್ಲಿರುವ ಸಯೀದ್‌, ಲಾಹೋರ್‌ ಮೂಲದ ಮಿರ್ಜಾ ಆಂಡ್‌ ಮಿರ್ಜಾ ಕಾನೂನು ಸೇವಾ ಸಂಸ್ಥೆಯ ಮೂಲಕ 2017ರಲ್ಲಿ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ