ಆ್ಯಪ್ನಗರ

ಅಮೆರಿಕನ್ನರಿಗೆ ಭವಿಷ್ಯದ ಕೊರೊನಾ ಲಸಿಕೆ ಉಚಿತ: ಅಮೆರಿಕ ಅಧಿಕಾರಿಗಳ ಘೋಷಣೆ!

ಅಮೆರಿಕದಲ್ಲಿ ಸಂಶೋಧನೆಗೆ ಒಳಪಡಿಸಿರುವ ಕೊರೊನಾ ವೈರಸ್ ಲಸಿಕೆಗಳು ಯಶಸ್ವಿಯಾದರೆ ಅವುಗಳನ್ನು ಅಮೆರಿಕನ್ನರಿಗೆ ಉಚಿತವಾಗಿ ನೀಡಲಾಗುವುದು ಎಂದು ಟ್ರಂಪ್ ಆಡಳಿತ ಘೋಷಿಸಿದೆ. ಸದ್ಯ ಅಮೆರಿಕದಲ್ಲಿ ಆರು ವಿವಿಧ ಕೊರೊನಾ ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿವೆ.

Vijaya Karnataka Web 14 Aug 2020, 10:11 am
ವಾಷಿಂಗ್ಟನ್: ಅಮೆರಿಕದಲ್ಲಿ ಸಂಶೋಧನೆಗೆ ಒಳಪಡಿಸಿರುವ ಕೊರೊನಾ ವೈರಸ್ ಲಸಿಕೆಗಳು ಯಶಸ್ವಿಯಾದರೆ ಅವುಗಳನ್ನು ಅಮೆರಿಕನ್ನರಿಗೆ ಉಚಿತವಾಗಿ ನೀಡಲಾಗುವುದು ಎಂದು ಟ್ರಂಪ್ ಆಡಳಿತ ಘೋಷಿಸಿದೆ.
Vijaya Karnataka Web Vaccine
ಸಂಗ್ರಹ ಚಿತ್ರ


ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವಾಲಯದ ಆಧಿಕಾರಿಗಳು, ಭವಿಷ್ಯದಲ್ಲಿ ತಯಾರಾಗುವ ಕೊರೊನಾ ಲಸಿಕೆಯನ್ನು ಎಲ್ಲಾ ಅಮೆರಿಕನ್ನರಿಗೆ ಉಚಿತವಾಗಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಪುಟ್ನಿಕ್ V ಲಸಿಕೆ ವಿರುದ್ಧದ ಆರೋಪ ನಿರಾಧಾರ: ರಷ್ಯಾ ಖಡಕ್ ಪ್ರತಿಕ್ರಿಯೆ!

ಸದ್ಯ ಅಮೆರಿಕದಲ್ಲಿ ಆರು ವಿವಿಧ ಕೊರೊನಾ ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿದ್ದು, ಇವುಗಳ ಪೈಕಿ ಒಂದಾದರೂ ಲಸಿಕೆ ಯಶಸ್ವಿಯಾಗುವ ಭರವಸೆಯಿದೆ. ಲಸಿಕೆ ಅಭಿವೃದ್ಧಿಗಾಗಿಯೇ ಟ್ರಂಪ್ ಆಡಳಿತ ಸುಮಾರು 10 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ಗನು ತೆಗೆದಿರಿಸಿದೆ.

ಅಲ್ಲದೇ ಪ್ರಯೋಗದಲ್ಲಿ ಯಶಸ್ವಿಯಾದರೆ ಸುಮಾರು 100 ಮಿಲಿಯನ್ ಕೊರೊನಾ ಲಸಿಕೆಯನ್ನು ಉತ್ಪಾದಿಸುವ ಒಪ್ಪಂದದ ಮೇಲೆಯೇ ಲಸಿಕೆ ಅಭಿವೃದ್ಧಿಗೆ ಅನುಮತಿ ನೀಡಲಾಗಿದೆ.

ರಷ್ಯಾದ ಕೊರೊನಾ ಲಸಿಕೆಗೆ ವ್ಯಾಪಕ ಬೇಡಿಕೆ..! ಮೊದಲ ದಿನವೇ 20 ದೇಶಗಳಿಂದ ಔಷಧಿ ಖರೀದಿಗೆ ಆಸಕ್ತಿ

ಪ್ರಯೋಗದಲ್ಲಿ ಯಶಸ್ವಿಯಾಗುವ ಕೊರೊನಾ ಲಸಿಕೆಯನ್ನು ಅಮೆರಿಕನ್ ನಾಗರಿಕರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಪಾಲ್ ಮ್ಯಾಂಗೋ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ