ಆ್ಯಪ್ನಗರ

ಇರಾನ್ ತೈಲ ಹೊತ್ತ ಹಡಗುಗಳನ್ನು ವಶಕ್ಕೆ ಪಡೆದ ಅಮೆರಿಕ: ಮತ್ತೊಂದು ಸುತ್ತಿನ ಜಿದ್ದಾಜಿದ್ದಿ!

ಇರಾನ್‌ನಿಂದ ವೆನಿಜುವೆಲಾಗೆ ರಫ್ತಾಗುತ್ತಿದ್ದ ನಾಲ್ಕು ತೈಲ ಟ್ಯಾಂಕರ್‌ಗಳನ್ನು ಅಮೆರಿಕ ವಶಕ್ಕೆ ಪಡೆದಿದ್ದು, ಇದೇ ಮೊದಲ ಬಾರಿಗೆ ಇರಾನ್ ತೈಲ ಹಡಗುಗಳನ್ನು ಅಮೆರಿಕ ವಶಕ್ಕೆ ಪಡೆದಿದೆ. ನಿರ್ಬಂಧನೆ ನಿಯಮಾವಳಿಗಳನ್ನು ಮೀರಿ ಇರಾನ್‌ನ ಈ ಹಡುಗಗಳು ಸಂಚರಿಸುತ್ತಿದ್ದವು ಎಂದು ಅಮೆರಿಕ ಆರೋಪಿಸಿದೆ.

Vijaya Karnataka Web 14 Aug 2020, 9:48 am
ವಾಷಿಂಗ್ಟನ್: ಇರಾನ್‌ನಿಂದ ವೆನಿಜುವೆಲಾಗೆ ರಫ್ತಾಗುತ್ತಿದ್ದ ನಾಲ್ಕು ತೈಲ ಟ್ಯಾಂಕರ್‌ಗಳನ್ನು ಅಮೆರಿಕ ವಶಕ್ಕೆ ಪಡೆದಿದ್ದು, ಇದೇ ಮೊದಲ ಬಾರಿಗೆ ಇರಾನ್ ತೈಲ ಹಡಗುಗಳನ್ನು ಅಮೆರಿಕ ವಶಕ್ಕೆ ಪಡೆದಿದೆ.
Vijaya Karnataka Web US- IRAN
ಸಂಗ್ರಹ ಚಿತ್ರ


ಇರಾನ್ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೇರಿರುವ ನಿರ್ಬಂಧನೆಗಳನ್ನು ಉಲ್ಲಂಘಿಸಿ ಈ ತೈಲ ಟ್ಯಾಂಕರ್‌ಗಳು ವೆನಜಿವೆಲಾಗೆ ಪ್ರಯಾಣ ಬೆಳೆಸಿದ್ದವು ಎಂದು ಆರೋಪಿಸಲಾಗಿದೆ.

ಯುಎಸ್ ಮೂಲದ ಉಗ್ರ ಸಂಘಟನೆ ಮುಖ್ಯಸ್ಥನ ಬಂಧನ: ಜಗತ್ತನ್ನು ಅಚ್ಚರಿಗೆ ದೂಡಿದ ಇರಾನ್!

ಗ್ಯಾಸೋಲಿನ್ ಹೊತ್ತ ನಾಲ್ಕು ತೈಲ ಟ್ಯಾಂಕರ್‌ಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇವುಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

ಅದರಂತೆ ಇದೀಗ ಈ ಹಡಗುಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಮೆರಿಕ-ಇರಾನ್ ನಡುವೆ ಮತ್ತೊಂದು ಹಂತದ ಜಿದ್ದಾಜಿದ್ದಿಗೆ ಮುನ್ನುಡಿ ಬರೆಯಲಾಗಿದೆ.

ಇರಾನ್‌ಗೆ ಥ್ಯಾಂಕ್ಸ್ ಹೇಳಿದ ಟ್ರಂಪ್: 'ಡೀಲ್ ಈಸ್ ಪಾಸಿಬಲ್' ಎಂದ ಅಮೆರಿಕದ ಅಧ್ಯಕ್ಷ!

ಲೂನಾ, ಪಾಂಡಿ, ಬೆರಿಂಗ್ ಮತ್ತು ಬೆಲ್ಲಾ ಎಂದು ಕರೆಯಲ್ಪಡುವ ನಾಲ್ಕು ಹಡಗುಗಳನ್ನು, ಅಮೆರಿಕದ ಹೂಸ್ಟನ್‌ಗೆ ಸಾಗುವ ಮಾರ್ಗದಲ್ಲಿ ಸಮುದ್ರದಲ್ಲೇ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಈ ಹಡಗುಗಳ ಪರಿಶೀಲನೆಗೆ ಶೀಘ್ರದಲ್ಲೇ ಹಿರಿಯ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದೂ ಹೇಳಲಾಗಿದೆ.

ಇರಾನ್‌ ಮೇಲೆ ಆರ್ಥಿಕ ಒತ್ತಡ ಹೇರುವ ತನ್ನ ಕಾರ್ಯಸೂಚಿಗೆ ವೇಗ ನೀಡಿರುವ ಟ್ರಂಪ್ ಸರ್ಕಾರ, ಇದೇ ಮೊದಲ ಬಾರಿಗೆ ಇರಾನ್ ತೈಲ ಹಡಗುಗಳನ್ನು ವಶಕ್ಕೆ ಪಡೆದು ಇಡೀ ವಿಶ್ವದ ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ