ಆ್ಯಪ್ನಗರ

ಚೀನಾದಲ್ಲಿ ಭೂಕಂಪ ನೂರಾರು ಮಂದಿ ಸಾವು?

ಚೀನಾದಲ್ಲಿನ ಸಿಚುಯಾನ್ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 6.5 ದಾಖಲಾಗಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ ತಿಳಿಸಿದೆ. ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 9.19 ಗಂಟೆಗೆ ಭೂಕಂಪ ಸಂಭವಿಸಿದೆ ಎಂದು ಸರಕಾರಿ ಅಧಿಕೃತ ಟಿವಿ ವಾಹಿನಿ ಗ್ಸಿನ್ಹುವಾ ಪ್ರಸಾರ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾ 8 Aug 2017, 10:58 pm
ಬೀಜಿಂಗ್: ಚೀನಾದಲ್ಲಿನ ಸಿಚುಯಾನ್ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 6.5 ದಾಖಲಾಗಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ ತಿಳಿಸಿದೆ. ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 9.19 ಗಂಟೆಗೆ ಭೂಕಂಪ ಸಂಭವಿಸಿದೆ ಎಂದು ಸರಕಾರಿ ಅಧಿಕೃತ ಟಿವಿ ವಾಹಿನಿ ಗ್ಸಿನ್ಹುವಾ ಪ್ರಸಾರ ಮಾಡಿದೆ.
Vijaya Karnataka Web up to 100 feared dead thousands injured in china earthquake government
ಚೀನಾದಲ್ಲಿ ಭೂಕಂಪ ನೂರಾರು ಮಂದಿ ಸಾವು?


ಭೂಕಂಪದ ಕೇಂದ್ರಬಿಂದು ಚೆಂಗ್ದು ಎಂದು ಗುರುತಿಸಲಾಗಿದ್ದು ಭೂಮಿಯ 10 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರಬಿಂದು ಇರುವುದಾಗಿ ಗುರುತಿಸಲಾಗಿದೆ. ಇದುವರೆಗೆ ಪ್ರಾಣ, ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ವಿವರಗಳು ಲಭ್ಯವಾಗಿಲ್ಲ. ಸುಮಾರು 100 ಮಂದಿ ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸರಕಾರ ಅಂದಾಜಿಸಿದೆ.

ಭೂಕಂಪದ ತೀವ್ರತೆಯ ಕಾರಣ 130,000 ಮನೆಗಳು ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. 2008ರಲ್ಲಿ ಸಂಭವಿಸಿದ 8.0 ತೀವ್ರತೆಯ ಭೂಕಂಪದಿಂದ 87,000 ಮೃತಪಟ್ಟಿದ್ದರು ಅಥವಾ ನಾಪತ್ತೆಯಾಗಿದ್ದರು. ಮಂಗಳವಾರ 38,000ಕ್ಕೂ ಅಧಿಕ ಪ್ರವಾಸಿಗರು ಈ ಭಾಗದಲ್ಲಿದ್ದರು ಎಂದು ಗ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.


Up to 100 feared dead, thousands injured in China earthquake: Government

A 6.5-magnitude earthquake rattled southwest China late Tuesday, killing at least five people, with up to 100 feared dead, according to a government estimate. Five people died and more than 60 were injured in the quake, the official Xinhua news agency said, including 30 who were in critical condition.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ