ಆ್ಯಪ್ನಗರ

ಎಸ್‌-400 ಕ್ಷಿಪಣಿ ಒಪ್ಪಂದ ಕೈಬಿಡಲು ಅಮೆರಿಕ ಒತ್ತಾಯ

ರಷ್ಯಾಮೇಲೆ ಅಮೆರಿಕ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತವೂ ಆ ದೇಶದೊಂದಿಗೆ ವ್ಯವಹರಿಸಬಾರದು. ಒಂದು ವೇಳೆ ಭಾರತ ಮುಂದುವರಿದರೆ, ದಿಗ್ಬಂಧನ ಎದುರಿಸಬೇಕಾಗುತ್ತದೆ ಎಂದು ಟ್ರಂಪ್‌ ಆಡಳಿತ ಈ ಮುನ್ನವೂ ಭಾರತಕ್ಕೆ ಕಿವಿಮಾತು ಹೇಳಿತ್ತು.

PTI 23 Jun 2019, 5:00 am
ಹೊಸದಿಲ್ಲಿ: ರಷ್ಯಾದಿಂದ ಎಸ್‌-400 ಟ್ರಯಂಫ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸುವ ಪ್ರಸ್ತಾಪ ಕೈಬಿಡುವಂತೆ ಭಾರತವನ್ನು ಅಮೆರಿಕ ಮತ್ತೊಮ್ಮೆ ಒತ್ತಾಯಿಸಿದೆ.
Vijaya Karnataka Web TH14TRIUMF

ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವ ಪೊಂಪಿಯೊ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕೆಲವೇ ದಿನಗಳ ಮುನ್ನ ಇಂತಹ ಆಗ್ರಹವನ್ನು ಅಮೆರಿಕ ಮತ್ತೆ ಮುಂದಿಟ್ಟಿದೆ. ರಷ್ಯಾಮೇಲೆ ಅಮೆರಿಕ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತವೂ ಆ ದೇಶದೊಂದಿಗೆ ವ್ಯವಹರಿಸಬಾರದು. ಒಂದು ವೇಳೆ ಭಾರತ ಮುಂದುವರಿದರೆ, ದಿಗ್ಬಂಧನ ಎದುರಿಸಬೇಕಾಗುತ್ತದೆ ಎಂದು ಟ್ರಂಪ್‌ ಆಡಳಿತ ಈ ಮುನ್ನವೂ ಭಾರತಕ್ಕೆ ಕಿವಿಮಾತು ಹೇಳಿತ್ತು.

''ರಷ್ಯಾದೊಂದಿಗೆ ರಕ್ಷಣಾ ಒಪ್ಪಂದದ ಬದಲಿಗೆ ಇತರೆ ಪರ್ಯಾಯಗಳ ಬಗ್ಗೆ ಆಲೋಚಿಸಲು ಭಾರತಕ್ಕೆ ಇದು ಸಕಾಲ. ಭಾರತದ ಜತೆ ಮಿಲಿಟರಿ ಸಹಕಾರ ಹೆಚ್ಚಿಸಲು ಈಗಾಗಲೇ ಟ್ರಂಪ್‌ ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಮಾನವರಹಿತ 'ಸೀ ಗಾರ್ಡಿಯನ್‌' ಡ್ರೋನ್‌ಗಳನ್ನು ಅಮೆರಿಕ ಪೂರೈಸಿದೆ. ರಕ್ಷಣಾ ಮಿತ್ರಪಕ್ಷಗಳ ಕೂಟದಲ್ಲಿ ಇಲ್ಲದಿದ್ದರೂ ಇದೇ ಮೊದಲ ಬಾರಿಗೆ ಭಾರತಕ್ಕೆ ಅಮೆರಿಕ ಇಂತಹ ಸೌಲಭ್ಯ ವಿಸ್ತರಿಸಿದೆ,''ಎಂದು '' ಎಂದು ಅಮೆರಿಕದ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜೂನ್‌ 25ರಿಂದ 27ರವರೆಗೆ ಪೊಂಪಿಯೊ ಅವರ ಭಾರತ ಭೇಟಿ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಟ್ರಂಪ್‌ ಆಡಳಿತದ ಪ್ರತಿನಿಧಿಯ ಭಾರತ ಭೇಟಿ ಇದೇ ಮೊದಲು. ಈ ವೇಳೆ ಪೊಂಪಿಯೊ ಅವರು ಪ್ರಧಾನಿ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೂನ್‌ 28-29ರಂದು ಜಪಾನ್‌ನ ಒಸಾಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಮೋದಿ ಮತ್ತು ಟ್ರಂಪ್‌ ನಡುವೆ ಮಾತುಕತೆನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಪೊಂಪಿಯೊ ಭಾರತ ಭೇಟಿ ಮಹತ್ವ ಪಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ