ಆ್ಯಪ್ನಗರ

ಜನ ನನ್ನನ್ನು 'ಅತ್ಯಂತ ಕಾರ್ಯಶೀಲ ಅಧ್ಯಕ್ಷ' ಎನ್ನುತ್ತಾರೆ: ಟ್ರಂಪ್ ಸ್ವಯಂ ಹೊಗಳಿಕೆ!

ಮಾಧ್ಯಮಗಳ ಅಪಪ್ರಚಾರದ ಹೊರತಾಗಿಯೂ ಜನ ನನ್ನನ್ನು ಅಮೆರಿಕದ ಇತಿಹಾಸದಲ್ಲೇ 'ಅತ್ಯಂತ ಕಾರ್ಯಶೀಲ ಅಧ್ಯಕ್ಷ' ಎಂದು ಗುರುತಿಸುತ್ತಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜನ ನನ್ನ ಕಾರ್ಯವನ್ನು ಗುರುತಿಸಿದ್ದು, ನನಗೆ ಸದಾ ಅವರ ಬೆಂಬಲ ದೊರೆಯಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Vijaya Karnataka Web 27 Apr 2020, 3:57 pm
ವಾಷಿಂಗ್ಟನ್: ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದವರ ಪಟ್ಟಿಯಲ್ಲಿ ಕೊನೆಯ ಸ್ಥಾನ ಹಾಗೂ ನಕಾರಾತ್ಮಕ ಅಂಕ ಪಡೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸ್ವಯಂ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
Vijaya Karnataka Web Donald Trump
ಸಂಗ್ರಹ ಚಿತ್ರ


ವಿರೋಧಿಗಳ ಹಾಗೂ ಮಾಧ್ಯಮಗಳ ಸುಳ್ಳು ಪ್ರಚಾರದ ಹೊರತಾಗಿಯೂ ಜನ ನನ್ನನ್ನು ಅಮೆರಿಕದ ಇತಿಹಾದಲ್ಲೇ 'ಅತ್ಯಂತ ಕಾರ್ಯಶೀಲ ಅಧ್ಯಕ್ಷ' ಎಂದು ಗುರುತಿಸುತ್ತಾರೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲಿ ನಾನು ಮಾಡಿದಷ್ಟು ಕೆಲಸವನ್ನು ಅಮರಿಕದ ಮತ್ಯಾವ ಅಧ್ಯಕ್ಷರೂ ಮಾಡಿಲ್ಲ ಎಂದು ಟ್ರಂಪ್ ಘೋಷಿಸಿದ್ದಾರೆ. ಇದೇ ಕಾರಣಕ್ಕೆ ಈ ದೇಶದ ಇತಿಹಾಸ ಹಾಗೂ ನನ್ನನ್ನು ಚೆನ್ನಾಗಿ ಬಲ್ಲ ಜನತೆ ನನ್ನನ್ನು 'ಅತ್ಯಂತ ಕಾರ್ಯಶೀಲ ಅಧ್ಯಕ್ಷ' ಎಂದು ಕರೆಯುತ್ತಾರೆ ಎಂದು ಟ್ರಂಪ್ ನುಡಿದಿದ್ದಾರೆ.

ಕೊರೊನಾ ನಾಶಕ್ಕೆ ಅಲ್ಟ್ರಾ ವಯೋ­ಲೆಟ್ ಪದ್ಧತಿ, ಟ್ರಂಪ್ ಇಂಗಿತಕ್ಕೆ ತಜ್ಞರ ವಿರೋಧ


ನಾನು ಬೆಳಗ್ಗೆ ಬೇಗ ಕೆಲಸ ಆರಂಭಿಸಿ ರಾತ್ರಿ ತಡವಾಗಿ ಕೆಲಸ ಮುಗಿಸುತ್ತೇನೆ. ತಿಂಗಳಾನುಗಟ್ಟಲೇ ನಾನು ಶ್ವೇತಭವನದಿಂದ ಕದಲುವುದೇ ಇಲ್ಲ. ದೇಶಕ್ಕೆ ಪ್ರಯೋಜನಕಾರಿಯಾಗುವ ವ್ಯಾಪಾರ ಒಪ್ಪಂದ, ಮಿಲಿಟರಿ ಸಬಲೀಕರಣ ಹೀಗೆ ಒಂದಲ್ಲ ಒಂದು ಕಾರ್ಯದಲ್ಲಿ ಮಗ್ನನಾಗಿರುತ್ತೇನೆ. ಇಷ್ಟಾದರೂ ಕೆಲವು ಮಾಧ್ಯಮಗಳು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಟ್ರಂಪ್ ಆರೋಪಿಸಿದ್ದಾರೆ.

ಕೊರೊನಾ ದೇಶದ ಮೇಲೆ ನಡೆದ ದಾಳಿ: ಟ್ರಂಪ್‌ ಕಿಡಿ

ಮಾಧ್ಯಮಗಳ ಸತತ ದಾಳಿಯ ಹೊರತಾಗಿಯೂ ಜನ ನನ್ನ ಕಾರ್ಯವನ್ನು ಗುರತಿಸಿದ್ದು, ಮುಂದಿನ ಚುನಾವಣೆಯಲ್ಲೂ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ