ಆ್ಯಪ್ನಗರ

ಭಾರತವನ್ನು ಎಂದಿಗೂ ಮರೆಯಲ್ಲ: ಕೊರೊನಾ ಲಸಿಕೆ ಹಂಚಿಕೆಯ ಪರೋಕ್ಷ ಸುಳಿವು ಕೊಟ್ಟ ಟ್ರಂಪ್?

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳುಹಿಸಿದ ಭಾರತದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಸಾಧಾರಣ ಸಮಯದಲ್ಲಿ ನೈಜ ಗೆಳೆಯರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Vijaya Karnataka Web 9 Apr 2020, 4:55 pm
ವಾಷಿಂಗ್ಟನ್: ಎರಡು ದಿನಗಳ ಹಿಂದಷ್ಟೇ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳುಹಿಸದಿದ್ದರೆ ಭಾರತದ ವಿರುದ್ಧ ವಾಣಿಜ್ಯ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಈ ಮಾತ್ರೆಗಳನ್ನು ಕಳುಹಿಸಿದ ಭಾರತದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
Vijaya Karnataka Web trump Modi
ಸಂಗ್ರಹ ಚಿತ್ರ


ಈ ಕುರಿತು ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ತುರ್ತು ಸಂದಭರ್ದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳುಹಿಸಿದ ಭಾರತದ ಸಹಾಯವನ್ನು ತಾವು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಅಸಾಧಾರಣ ಸಮಯದಲ್ಲಿ ನೈಜ ಗೆಳೆಯರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿರುತ್ತದೆ ಎಂದು ಹೇಳಿರುವ ಟ್ರಂಪ್, ಈ ಸಹಾಯ ಮಾಡುವ ಮೂಲಕ ಪ್ರಧಾನಿ ಮೋದಿ ಗೆಳೆತನದ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ಮೋದಿ ಈಸ್ ಗ್ರೇಟ್': ಮಾತ್ರೆ ಬರುತ್ತೆ ಅಂತ ಗೊತ್ತಾದ ಮೇಲೆ ಟ್ರಂಪ್ ಅವರಿಂದ ಹೊಗಳಿಕೆಯ ಮಾತು!

ನಿನ್ನೆ(ಏ.8)ಯೂ ಭಾರತ ಮತ್ತು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ಟ್ರಂಪ್, ಮೋದಿ ಓರ್ವ ಶ್ರೇಷ್ಠ ನಾಯಕ ಹಾಗೂ ಭರವಸೆಯ ಗೆಳೆಯ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.


ಇನ್ನು ಟ್ರಂಪ್ ಅವರ ಈ ಟ್ವೀಟ್‌ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಭವಿಷ್ಯದಲ್ಲಿ ಅಮೆರಿಕ ಮಾರಕ ಕೊರೊನಾ ವೈರಸ್‌ಗೆ ಲಸಿಕೆ ಕಂಡುಹಿಡಿದರೆ ಅದನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಮಾತ್ರೆ ಕಳುಹಿಸಿದ್ದಾಯ್ತು, ಈಗ ನನ್ನ ಪ್ರಶ್ನೆಗೆ ಉತ್ತರಿಸಿ: ಟ್ರಂಪ್‌ಗೆ ತರೂರ್ ಸವಾಲು!

ಭಾರತದ ಈ ಸಹಾಯಕ್ಕೆ ಪ್ರತಿಯಾಗಿ ಭವಿಷ್ಯದಲ್ಲಿ ಕಂಡುಹಿಡಿಯಬಹುದಾದ ಕೊರೊನಾ ವಿರುದ್ಧದ ಲಸಿಕೆಯನ್ನು ಅಮೆರಿಕ ತನ್ನ ಮಿತ್ರ ರಾಷ್ಟ್ರ ಭಾರತದೊಂದಿಗೆ ಹಂಚಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ