ಆ್ಯಪ್ನಗರ

ಶ್ರೀಲಂಕಾ ತಲುಪಿದ ಪಾಂಪಿಯೋ: ದ್ವೀಪ ರಾಷ್ಟ್ರದ ಅಧ್ಯಕ್ಷರೊಂದಿಗೆ ಮಾತುಕತೆ!

ಭಾರತದಿಂದ ಶ್ರೀಲಂಕಾಗೆ ಪ್ರಯಾಣ ಬೆಳೆಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಕೊಲಂಬೋಗೆ ಬಂದಿ ತಲುಪಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರನ್ನು ಭೇಟಿ ಮಾಡಿ ಪಾಂಪಿಯೋ ಮಾತುಕತೆ ನಡೆಸಿದ್ದಾರೆ.

Vijaya Karnataka Web 28 Oct 2020, 4:47 pm
ಕೊಲಂಬೋ: ಭಾರತ-ಅಮೆರಿಕ ನಡುವಿನ 2+2 ಸಚಿವರ ಮಟ್ಟದ ಮಾತುಕತೆಗೆ ಭಾರತಕ್ಕೆ ಬಂದಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಇದೀಗ ದ್ವಿಪಕ್ಷೀಯ ಸಂಬಂಧ ಸುಧಾರಣೆ ಕುರಿತು ಮಾತನಾಡಲು ಶ್ರೀಲಂಕಾಗೆ ಬಂದು ತಲುಪಿದ್ದಾರೆ.
Vijaya Karnataka Web Mike Pompeo
ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರೊಂದಿಗೆ ಮೈಕ್ ಪಾಂಪಿಯೋ ಮಾತುಕತೆ


ಭಾರತದ ನವದೆಹಲಿಯಿಂದ ಹೊರಟ ಮೈಕ್ ಪಾಂಪಿಯೋ ನೇರವಾಗಿ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ಬಂದು ತಲುಪಿದ್ದಾರೆ. ಈ ಕುರಿತು ಕೊಲಂಬೋದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಾಹಿತಿ ನೀಡಿದೆ.

ಇನ್ನು ಕೊಲಂಬೋಗೆ ಬಂದಿಳಿಯುತ್ತಿದ್ದಂತೇ, ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಭಾರತ-ಅಮೆರಿಕ 2+2 ಮಾತುಕತೆ: ಚೀನಾಗೆ ಶುರುವಾಗಲಿದೆಯಾ ಚಿಂತೆ?

ಅಮೆರಿಕ-ಶ್ರೀಲಂಕಾ ನಡುವಿನ ರಾಜತಾಂತ್ರಿಕ ಹಾಗೂ ಸಾಮರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇನ್ನು ಅಧ್ಯಕ್ಷರ ಭೇಟಿ ಬಳಿಕ ಮೈಕ್ ಪಾಂಪಿಯೋ ಶ್ರೀಲಂಕಾದ ವಿದೇಶಾಂಗ ಸಚಿವ ದಿನೇಶ್ ಗುಣವರ್ಧನ್ ಅವರೊಂದಿಗೂ ಮಾತನಾಡಿದ್ದು, ಈ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಮೆರಿಕ-ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಶ್ರೀಲಂಕಾ-ಚೀನಾ ಸಂಬಂಧವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಅಮೆರಿಕದ ಗುರಿಯಾಗಿದ್ದು, ಮೈಕ್ ಪಾಂಪಿಯೋ ಅವರ ಶ್ರೀಲಂಕಾ ಭೇಟಿ ಈ ಗುರಿಯನ್ನು ಬಹುತೇಕವಾಗಿ ಈಡೇರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಜಾಪ್ರಭುತ್ವ ವಿರೋಧಿ ಕಮ್ಯೂನಿಸ್ಟ್ ಚೀನಾ ವಿರುದ್ಧ ಭಾರತ-ಅಮೆರಿಕ ಒಂದಾಗಿವೆ: ಪಾಂಪಿಯೋ!

ಶ್ರೀಲಂಕಾ ಭೇಟಿ ಬಳಿಕ ಮೈಕ್ ಪಾಂಪಿಯೋ ಮಾಲ್ಡೀವ್ಸ್ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳಿಗೂಈ ಭೇಟಿ ನೀಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ