ಆ್ಯಪ್ನಗರ

ಅಮೆರಿಕದಲ್ಲೂ ಟಿಕ್‌ಟಾಕ್ ಬ್ಯಾನ್‌: ಡೊನಾಲ್ಡ್‌ ಟ್ರಂಪ್‌ ಘೋಷಣೆ

ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ನಂತರ ದೇಶದಲ್ಲಿ ಚೀನಾ ಆ್ಯಪ್‌ಗಳನ್ನು ನಿಷೇಧ ಮಾಡಲಾಯಿತು. ಇದಕ್ಕೆ ಅಮೆರಿಕದ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿ, ನಮ್ಮ ದೇಶದಲ್ಲೂ ಹೀಗೆ ಮಾಡಬೇಕೆಂದು ಒತ್ತಾಯಿಸಿದ್ದರು.

Vijaya Karnataka Web 1 Aug 2020, 10:49 am
ವಾಷಿಂಗ್ಟನ್‌: ಚೀನಾ ವಿರುದ್ಧದ ಅಮೆರಿಕ ಸಮುರ ಮತ್ತೊಂದು ಹಂತಕ್ಕ ಹೋಗಿದೆ. ಈಗ ಭಾರತದಂತೆ ಅಮೆರಿಕದಲ್ಲೂ ಚೀನಾ ಆ್ಯಪ್‌ಗಳನ್ನು ನಿಷೇಧಿಸುವ ಆಂದೋಲನ ಶುರುವಾಗಿದೆ.
Vijaya Karnataka Web ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌


ಚೀನಾದ ಅತ್ಯಂತ ಜನಪ್ರಿಯ ಆ್ಯಪ್‌ಗಳಲ್ಲಿ ಒಂದಾಗಿದ್ದ ಟಿಕ್‌ಟಾಕ್‌ ಅನ್ನು ನಿಷೇಧಿಸಲು ಅಮೆರಿಕ ಮುಂದಾಗಿದೆ. ಈ ವಿಷಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಣೆ ಮಾಡಿದ್ದಾರೆ.

ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅತಿ ಶೀಘ್ರದಲ್ಲೇ ಎಂದರೆ ಶನಿವಾರದೊಳಗೆ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಘೋಷಣೆ ಮಾಡಿದರು.

ತುರ್ತು ಆರ್ಥಿಕ ಕಾನೂನು ಅಥವಾ ವಿಶೇಷ ಅಧಿಕಾರವನ್ನು ಬಳಸಿ ಆ್ಯಪ್‌ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡೊನಾಲ್ಡ್‌ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

ಚೀನಾದ ಕೆಲವು ಆ್ಯಪ್‌ಗಳು ಅಪಾಯಕಾರಿಯಾಗಿವೆ. ಚೀನಾದ ಗುಪ್ತಚರ ಇಲಾಖೆಗಳು ಇವುಗಳನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಂಡು ವಿದೇಶಗಳ ಮಾಹಿತಿ ಪಡೆಯುತ್ತಿರುವ ಸಾಧ್ಯತೆ ಇದೆ, ಹೀಗಾಗಿ ಇಂಥ ಆ್ಯಪ್‌ಗಳನ್ನ ನಿಷೇಧಿಸುವುದು ಸೂಕ್ತ ಎಂದು ಅಮೆರಿಕದ ರಕ್ಷಣಾ ಹಾಗೂ ಗುಪ್ತಚರ ಇಲಾಖೆ ಹಾಗೂ ಹಲವಾರು ಜನಪ್ರತಿನಿಧಿಗಳ ಒಕ್ಕೂಟ ಆಗ್ರಹಿಸಿದ್ದವು.

ಜಗತ್ತಿನಾದ್ಯಂತ ಚೀನಾ ವಿರುದ್ಧ ಸಮರ ಘೋಷಣೆ ಆಗಿದೆ. ಭಾರತದಲ್ಲಿ ಈಗಾಗಲೇ ಚೀನಾದ ನೂರಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಈ ಕ್ರಮಕ್ಕೆ ವಿಶ್ವದಾದ್ಯಂತ ತೀವ್ರ ಶ್ಘಾಘನೆ ಕೂಡ ವ್ಯಕ್ತವಾಗಿತ್ತು.

ಭಾರತದಲ್ಲಿ ಚೀನಾ ಆ್ಯಪ್‌ಗಳನ್ನು ನಿಷೇಧ ಮಾಡುತ್ತಿದ್ದಂತೆ ಅಮೆರಿಕದ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿ, ನಮ್ಮ ದೇಶದಲ್ಲೂ ಹೀಗೆ ಮಾಡಬೇಕೆಂದು ಒತ್ತಾಯಿಸಿದ್ದರು.

ಈ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ಟಿಕ್‌ಟಾಕ್ ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ. ಚೀನಾ ಮೂಲದ ಆ್ಯಪ್ ಟಿಕ್‌ಟಾಕ್ ನಿಷೇಧಿಸುವ ಹಾಗೂ ಅದರ ಜತೆಗೇ ನಮಗೆ ಇನ್ನೂ ಕೆಲವು ಆಯ್ಕೆಗಳಿವೆ ಎಂದಿದ್ದಾರೆ. ಚೀನಾ ದೇಶದ ವಿರುದ್ಧ ಈಗಾಗಲೇ ವಾಣಿಜ್ಯ ಸಮರ ಸಾರಿರುವ ಅಮೆರಿಕ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡ್ರ್ಯಾಗನ್‌ ರಾಷ್ಟ್ರಕ್ಕೆ ಪಂಚ್‌ ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.

ಚೀನಾ ಮೂಲದ ಹುವೈ ಕಂಪನಿಯನ್ನು ಅಮೆರಿಕ ಹಂತಹಂತವಾಗಿ ನಿಷೇಧಿಸುತ್ತಾ ಬಂದಿದೆ. 5G ನೆಟ್‌ವರ್ಕ್‌ ಅಳವಡಿಕೆಯಲ್ಲಿ ಹುವೈ ಕಂಪನಿಯನ್ನು ದೂರವಿರಿಸುವುದು ಉತ್ತಮ ಎಂದು ಡೊನಾಲ್ಡ್ ಟ್ರಂಪ್ ಯುರೋಪ್‌ನ ಎಲ್ಲ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ