ಆ್ಯಪ್ನಗರ

ಅಮೆರಿಕದಲ್ಲಿ ಭುಗಿಲೆದ್ದ ಹಿಂಸಾಚಾರ: ಟ್ರಂಪ್-ಬಿಡೆನ್ ಬೆಂಬಲಿಗರ ಮಧ್ಯೆ ಜಟಾಪಟಿ!

ಅಮೆರಿಕದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ, ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಟ್ರಂಪ್ ಹಾಗೂ ಬಿಡೆನ್ ಬೆಂಬಲಿಗರ ಮಧ್ಯೆ ಜಟಾಪಟಿ ನಡೆದಿದೆ.

Vijaya Karnataka Web 15 Nov 2020, 9:44 am
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ, ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
Vijaya Karnataka Web US Violence
ಅಮೆರಿಕದಲ್ಲಿ ಟ್ರಂಪ್-ಬಿಡೆನ್ ಬೆಂಬಲಿಗರ ನಡುವೆ ಜಟಾಪಟಿ


ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಈ ವೇಳೆ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಬೆಂಬಲಿಗರು ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಬೆಂಬಲುಗರ ನಡುವೆ ಮುಷ್ಠಿ ಕಾಳಗ ನಡೆದಿದೆ.

ಫೋರ್ ಮೋರ್ ಇಯರ್ಸ್: ಶ್ವೇತಭವನದ ಮುಂದೆ ಟ್ರಂಪ್ ಬೆಂಬಲಿಗರ ಭಾರೀ ಮೆರವಣಿಗೆ!

ಬ್ಲ್ಯಾಕ್ ಲೈವ್ಸ್ ಮ್ಯಾಟರ್(ಬಿಎಲ್‌ಎಂ) ಹಾಗೂ ಟ್ರಂಪ್ ಅವರನ್ನು ಬೆಂಬಲಿಸುವ ಪ್ರೌಡ್ ಬಾಯ್ಸ್ ಗ್ರೂಪ್ ನಡುವೆ ಜಟಾಪಟಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಷ್ಠಿ ಕಾಳಗದಲ್ಲಿ ಟ್ರಂಪ್-ಬಿಡೆನ್ ಬೆಂಬಲಿಗರು ಗಾಯಗೊಂಡಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದ್ದುವರೆಗೂ 10 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


ಇದೇ ವೇಳೆ 20 ವರ್ಷದ ಯುಕನೋರ್ವನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಬಿಡೆನ್ ಬೆಂಬಲಿಗರು ಹಾಗೂ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಸಂಘಟನೆಯ ಸದಸ್ಯರು ಜಮಾಯಿಸಿದರು. ಈ ವೇಳೆ 'ರೆಫ್ಯೂಸ್ ಫ್ಯಾಸಿಸಂ(ನಾಜಿವಾದಕ್ಕೆ ತಿರಸ್ಕಾರ) ಘೋಷಣೆಗಳನ್ನು ಕೂಗಿದರು.

ಸೋಲೊಪ್ಪದ ಡೊನಾಲ್ಡ್‌ ಟ್ರಂಪ್‌, ಅಮೆರಿಕದಲ್ಲಿ ಮುಂದುವರಿದ ಪ್ರತಿಭಟನೆ

ಇದರಿಂದ ಕೆರಳಿದ ಟ್ರಂಪ್ ಬೆಂಬಲಿಗರು, ಬಿಎಲ್‌ಎಂ ಸದಸ್ಯರ ಮೇಲೆರಗಿ ಹಲ್ಲೆ ನಡೆಸಿದರು. ಏಕಾಏಕಿ ಭುಗಿಲೆದ್ದ ಹಿಂಸಾಚಾರದಿಂದ ಸ್ಥಳಧಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಉಭಯ ಬಣಗಳನ್ನು ಸಮಾಧಾನಪಡಿಸಲು ಹರಸಾಹಸಪಡುತ್ತಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ