ಆ್ಯಪ್ನಗರ

ಕೊರೊನಾ: ಎಲ್ಲೆಡೆ ಹರಡಿದ ವೈರಸ್‌, ಅಪಾಯದ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಭಾರತ ಸರಕಾರ ಯುದ್ಧವಿಮಾನ ಕಳುಹಿಸಿ ಹಡಗಿನಲ್ಲಿಸಿಲುಕಿದ್ದ 119 ಭಾರತೀಯರು, 5 ವಿದೇಶಿಗರನ್ನು ದಿಲ್ಲಿಗೆ ಕರೆತಂದಿತ್ತು. ಹಡಗಿನಲ್ಲಿಒಟ್ಟು 3700 ಮಂದಿಯಿದ್ದು, ಆ ಪೈಕಿ 700 ಮಂದಿಗೆ ಕೊರೊನಾ ಸೋಂಕು ತಗುಲಿದೆ.

Vijaya Karnataka Web 28 Feb 2020, 11:27 pm
ಬೀಜಿಂಗ್‌: ಕೊರೊನಾ ವೈರಾಣು ಸೋಂಕು ಕ್ಷಿಪ್ರ ಗತಿಯಲ್ಲಿ ಹರಡುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಭಾರಿ ಅಪಾಯದ ಮುನ್ಸೂಚನೆ ನೀಡಿದೆ.
Vijaya Karnataka Web ಕೊರೊನಾ
ಕೊರೊನಾ


ಕೊರೊನಾ ವೈರಾಣು ಸೋಂಕು ಈಗ ಇನ್ನೂ ಆರು ದೇಶಗಳಿಗೆ ಹಬ್ಬಿದೆ. ಅಲ್ಲಿ ಮೊದಲ ಪ್ರಕರಣಗಳು ದಾಖಲಾದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ.

ಅತ್ಯಂತ ಕ್ಷಿಪ್ರಗತಿಯಲ್ಲಿ ಕೊರೊನಾ ವೈರಾಣು ಸೋಂಕು ಎಲ್ಲೆಡೆ ಹರಡುತ್ತಿರುವುದು ಆತಂಕದ ವಿಷಯವಾಗಿದೆ. ಈಗಾಗಲೇ ಬಹುತೇಕ ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ. ಆದರೂ ಇದು ಅಪಾಯದ ಮುನ್ಸೂಚನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಡಾ. ಟೆಡ್ರೊಸ್ ಆಡ್ಹನಾಮ್ ಗೆಬ್ರಿಯೆಸಸ್ ತಿಳಿಸಿದ್ದಾರೆ.

ನಾಯಿ, ಬೆಕ್ಕು, ಇತರ ಮಾಂಸ ಸೇವನೆ ನಿಷೇಧ

ಈ ನಡುವೆ ಚೀನಾದಲ್ಲಿ ಇದೇ ಮೊದಲ ಬಾರಿಗೆ ನಾಯಿ, ಬೆಕ್ಕುಗಳ ಸೇವನೆಯನ್ನು ನಿಷೇಧಿಸಲು ಅಲ್ಲಿನ ಸ್ಥಳೀಯ ಆಡಳಿತ ಮುಂದಾಗಿದೆ. ದಕ್ಷಿಣ ಚೀನಾದ ‘ಟೆಕ್‌ ಹಬ್‌ ’ ಎಂದು ಜನಪ್ರಿಯವಾಗಿರುವ ಶೆನ್‌ಜೆನ್‌ನಲ್ಲಿ ಹಂದಿ, ಕೋಳಿ, ದನ, ಮೊಲ ಹಾಗೂ ಕಡಲ ಜೀವಿಗಳ ಮಾಂಸದ ಹೊರತಾಗಿ ಇತರ ಮಾಂಸಾಹಾರಗಳ ಸೇವನೆ ಬೇಡ ಎಂದು ಆಡಳಿತ ಪ್ರಕಟಣೆ ಹೊರಡಿಸಿದೆ.

ಕೊರೊನಾ ಕೇಂದ್ರಬಿಂದು ಹುಬೀ ಪ್ರಾಂತ್ಯದ ವುಹಾನ್‌ ನಗರದಲ್ಲಿ ಬಾವುಲಿ, ಹಾವುಗಳು ಮತ್ತು ಇತರ ಪ್ರಾಣಿಗಳ ಮಾಂಸ ಮಾರಾಟ ಮಾಡುವ ಮಾರುಕಟ್ಟೆಯಿಂದ ವೈರಾಣು ಹರಡುವಿಕೆ ಆರಂಭವಾಗಿದೆ ಎಂದು ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಿ, ಬೆಕ್ಕುಗಳ ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

ಇ-ವೀಸಾ ರದ್ದು: ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆ ರಾಷ್ಟ್ರಗಳ ನಾಗರಿಕರಿಗೆ ನೀಡಲಾಗುತ್ತಿದೆ ಇ-ವೀಸಾ (ವೀಸಾ ಆನ್‌ ಅರೈವಲ್‌) ವನ್ನು ತಾತ್ಕಾಲಿಕವಾಗಿ ಸರಕಾರ ರದ್ದುಗೊಳಿಸಿದೆ.

ಮತ್ತೆ 256 ಮಂದಿಗೆ ಮತ್ತೆ ಸೋಂಕು

ಚೀನಾದ ಹೊರಗೆ ಅತಿ­ ಹೆಚ್ಚು ಮಂದಿ ಕೊರೊನಾ ಸೋಂಕಿ­ತರು ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿದ್ದಾರೆ. ಒಟ್ಟು 2022 ಮಂದಿಗೆ ಸೋಂಕು ತಗುಲಿದ್ದು, ಶುಕ್ರವಾರ ಹೊಸದಾಗಿ 256 ಮಂದಿಗೆ ಕೊರೊನಾ ತಗುಲಿದೆ ಎಂದು ಸ್ಥಳೀಯ ಮಾಧ್ಯಮ­ಗಳು ವರದಿ ಮಾಡಿವೆ.

ಬ್ರಿಟನ್‌ ಪ್ರಜೆ ಸಾವು


ಕೊರೊನಾ ಸೋಂಕಿನಿಂದಾಗಿ ಜಪಾನ್‌ನ ಯೊಕೊ­ಹಾಮ ಬಂದರಿನಲ್ಲಿ ನಿಗಾದಲ್ಲಿ ಇರಿಸ­ಲಾಗಿರುವ ಐಷಾರಾಮಿ ಹಡಗು ಡೈಮಂಡ್‌ ಪ್ರಿನ್ಸಸ್‌ನಲ್ಲಿ ಬ್ರಿಟನ್‌ ಪ್ರಜೆಯೊಬ್ಬರು ಸೋಂಕಿಗೆ ಮೃತಪಟ್ಟಿದ್ದಾರೆ. ವಿದೇಶಿಗ­ರೊಬ್ಬರು ಹಡಗಿನಲ್ಲಿಮೃತಪಟ್ಟ ಘಟನೆ ಇದೇ ಮೊದಲನೆಯದಾಗಿದೆ. ಇದಕ್ಕೂ ಮುನ್ನ ಹಡಗಿನಲ್ಲಿ ಐದು ಮಂದಿ ಜಪಾನಿ ಪ್ರಜೆಗಳು ಸೋಂಕಿನಿಂದ ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ