ಆ್ಯಪ್ನಗರ

ಕೊರೊನಾ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದು ನಾವು, ಚೀನಾ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದು ನಾವು ಹೊರತು ಚೀನಾ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊರೊನಾ ವೈರಸ್ ಹರಡುವ ಆರಂಭಿಕ ಹಂತದಲ್ಲಿ ಇದರ ಸತ್ಯಾಸತ್ಯತೆಯನ್ನು ಜಗತ್ತಿಗೆ ತಿಳಿಸದೇ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಕೆಲಸ ಮಾಡಿದೆ ಎನ್ನುವ ಆರೋಪಗಳು ಕೇಳಿಬಂದಿತ್ತು.

Agencies 4 Jul 2020, 2:03 pm
ವಾಷಿಂಗ್ಟನ್ : ಕೊರೊನಾ ವೈರಸ್ ಹರಡುವ ಆರಂಭಿಕ ಹಂತದಲ್ಲಿ ಇದರ ಸತ್ಯಾಸತ್ಯತೆಯನ್ನು ಜಗತ್ತಿಗೆ ತಿಳಿಸದೇ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಕೆಲಸ ಮಾಡಿದೆ ಎನ್ನುವ ಆರೋಪಗಳು ಕೇಳಿಬಂದಿತ್ತು. ಇದೀಗ ಆರೋಪವನ್ನು ವಿಶ್ವ ಆರೋಗ್ಯ ಸಂಸ್ಥೆ ಅಲ್ಲಗಳೆದಿದ್ದು, ಕೊರೊನಾ ವೈರಸ್ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದು ನಾವು ಹೊರತು ಚೀನಾ ಅಲ್ಲ ಎಂದಿದೆ.
Vijaya Karnataka Web WHO


ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.1 ರಷ್ಟು

ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಆರಂಭದಿಂದಲೂ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಆರೋಪಗಳು ಕೇಳಿಬರುತ್ತಿತ್ತು. ಹೀಗಾಗಿ ಏಪ್ರಿಲ್‌ನಲ್ಲಿ ಕೊರೊನಾ ಕುರಿತು ಮಾಹಿತಿ ಬಹಿರಂಗಪಡಿಸಿತ್ತು. ಆ ಮಾಹಿತಿ ಪ್ರಕಾರ ವುಹಾನ್‌ನ ಹೆಲ್ತ್ ಕಮಿಷನ್ ಕಳೆದ ಡಿಸೆಂಬರ್ 31ಕ್ಕೆ ನ್ಯುಮೋನಿಯಾ ಕೇಸ್‌ಗಳನ್ನು ವರದಿ ಮಾಡಿತ್ತು. ಆದರೆ ಅದರನ್ನು ಬಹಿರಂಗಪಡಿಸಿದವರ ಮಾಹಿತಿಯನ್ನು ವಿಶ್ವಸಂಸ್ಥೆ ಗೌಪ್ಯವಾಗಿಟ್ಟಿತ್ತು.

ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವಂತೆ ಅಮೆರಿಕಾದಲ್ಲಿ ಪ್ರತಿಭಟನೆ

ಇದೀಗ ವಿಶ್ವಸಂಸ್ಥೆ ಈ ವಾರ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ ವುಹಾನ್‌ನಲ್ಲಿ ಮೊದಲ ಕೊರೊನಾ ಕೇಸ್‌ ಪತ್ತೆಯಾದಾಗ ಮೊದಲು ಎಚ್ಚರಿಸಿದ್ದೇ ನಾವು. ಆ ದಿನ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಮಾಹಿತಿ ಸೇವೆಗೆ ಅಮೆರಿಕಾದ ಇಪಿಡೊಮಿಯೋಲಾಜಿಕಲ್ ಸರ್ವಿಜಲೆನ್ಸ್ ನೆಟ್ವರ್ಕ್ ಪ್ರೊಮೈಡ್‌ನಿಂದ ಕೋವಿಡ್ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವುಹಾನ್‌ನಲ್ಲಿ ವರದಿಯಾಗಿದ್ದ ವೈರಲ್ ನ್ಯುಮೋನಿಯಾಗೂ ಇದಕ್ಕೂ ಹೋಲಿಕೆಯಾಗುತ್ತಿತ್ತು.ಈ ಬಗ್ಗೆ ಮಾಹಿತಿ ನೀಡುವಂತೆ ಚೀನಾದ ಅಧಿಕಾರಿಗಳ ಜೊತೆ ಜನವರಿ 1 ಮತ್ತು 2ರಂದು ಕೇಳಲಾಗಿತ್ತು. ಅವರು ಜನವರಿ ಮೂರರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಭೀಕರ ದುರಂತ: ಬಸ್‌ಗೆ ರೈಲು ಡಿಕ್ಕಿ, 19 ಸಿಖ್‌ ಯಾತ್ರಿಕರ ಸಾವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ