ಆ್ಯಪ್ನಗರ

ರಕ್ತದ ಹೊಳೆ ಹರಿಸುತ್ತೇವೆ: ಚೀನಾಗೆ ಐಸಿಸ್‌ ಬೆದರಿಕೆ

ಅಲ್ಪಸಂಖ್ಯಾತ ಉಯಿಗುರ್‌ ಜನಾಂಗ, ಚೀನಾದ ಮೇಲೆ ದಾಳಿ ಮಾಡಿ ರಕ್ತದ ಓಕುಳಿಯನ್ನೇ ಹರಿಸುವುದಾಗಿ ಬೆದರಿಕೆ ಹಾಕಿದೆ.

ಟೈಮ್ಸ್ ಆಫ್ ಇಂಡಿಯಾ 2 Mar 2017, 5:51 pm
ಬೀಜಿಂಗ್‌: ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಜತೆ ಕೈಜೋಡಿಸಿರುವ ಚೀನಾದ ಅಲ್ಪಸಂಖ್ಯಾತ ಉಯಿಗುರ್‌ ಜನಾಂಗ, ಚೀನಾದ ಮೇಲೆ ದಾಳಿ ಮಾಡಿ ರಕ್ತದ ಓಕುಳಿಯನ್ನೇ ಹರಿಸುವುದಾಗಿ ಬೆದರಿಕೆ ಹಾಕಿದೆ.
Vijaya Karnataka Web will shed blood like rivers isis video puts china in cross hairs
ರಕ್ತದ ಹೊಳೆ ಹರಿಸುತ್ತೇವೆ: ಚೀನಾಗೆ ಐಸಿಸ್‌ ಬೆದರಿಕೆ


ಇದೇ ಮೊದಲ ಬಾರಿಗೆ ಚೀನಾದ ವಿರುದ್ಧ ತಿರುಗಿ ಬಿದ್ದಿರುವ ಐಸಿಸ್‌, ಸೋಮವಾರದಂದು ಇರಾಕ್‌ನ ಒಂದು ಪ್ರಾಂತ್ಯದಿಂದ ಅರ್ಧಗಂಟೆ ವಿಡಿಯೋ ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ ಚೀನಾದಲ್ಲಿ ರಕ್ತದ ಓಕುಳಿ ನಡೆಸುವುದಾಗಿ ಬೆದರಿಕೆ ಹಾಕಿರುವ ಕುರಿತು ಅಮೆರಿಕ ಮೂಲದ ಎಸ್‌ಐಟಿಇ ಗುಪ್ತಚರ ಇಲಾಖೆ ಹೇಳಿದೆ.

ಕಳೆದ ಹಲವಾರು ವರ್ಷಗಳಿಂದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಜನ ಉಯಿಗುರ್‌ ಅಲ್ಪಸಂಖ್ಯಾತರ ಸಂಘಟನೆ, ತಮಗೆ ಸ್ವಾಯತ್ತ ಪ್ರಾಂತ್ಯ ನೀಡಬೇಕು ಎಂದು ಆಗ್ರಹಿಸಿದ್ದವು. ಆದರೆ ಚೀನಾ ಇದಕ್ಕೆ ಸೊಪ್ಪು ಹಾಕಿರಲಿಲ್ಲ.

ಆದರೆ ಇದೀಗ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಐಸಿಸ್‌ ಹಾಗೂ ಉಯಿಗುರ್‌ ಪ್ರತ್ಯೇಕವಾದಿಗಳ ಚಲನವಲನ ಕಂಡುಬಂದಿದ್ದು, ' ಈ ಚೀನಾ ಅಧಿಕಾರಿಗಳಿಗೆ ಜನರ ಮಾತು ಕೇಳಿಸುತ್ತಿಲ್ಲ. ನಿಮ್ಮ ತುಳಿತಕ್ಕೊಳಗಾದವರ ಪ್ರತೀಕಾರ ತೀರಿಸಲು ನಾವು ಬರುತ್ತಿದ್ದೇವೆ, ರಕ್ತದ ನದಿಯನ್ನೇ ಹರಿಸುತ್ತೇವೆ' ಎಂದು ಚೀನಾ ಸರಕಾರದ ವಿರುದ್ಧ ಪ್ರತೀಕಾರದ ಮಾತುಗಳನ್ನು ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ವಿದೇಶಾಂಗದ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌, 'ಈ ವಿಡಿಯೋ ನೋಡಿಲ್ಲ ಆದರೆ ಪೂರ್ವ ಟರ್ಕಿಸ್ತಾನ್‌ನಿಂದ ದಾಳಿಯ ಬೆದರಿಕೆಯಿರುವುದಂತೂ ನಿಜ' ಎಂದು ಹೇಳಿದ್ದಾರೆ. ಅಲ್ಲದೇ ಜಗತ್ತಿನ ಪ್ರತಿ ರಾಷ್ಟ್ರವೂ ಈ ಉಗ್ರ ಸಂಘಟನೆಯ ವಿರುದ್ಧ ಹೋರಾಡಲು ಒಟ್ಟಾಗಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ