ಆ್ಯಪ್ನಗರ

ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್‌ ವಿಮಾನ ಹಾರಾಟ ಯಶಸ್ವಿ!

ಸೆಸ್ನಾ ಗ್ರಾಂಡ್‌ ಕ್ಯಾರವಾನ್‌ 208ಬಿ ಹೆಸರಿನ ಈ ಆಲ್‌ ಎಲೆಕ್ಟ್ರಿಕ್‌ ವಿಮಾನವನ್ನು ಎಲೆಕ್ಟ್ರಿಕ್‌ ಏವಿಯೇಷನ್‌ ಕಂಪನಿ 'ಮ್ಯಾಗ್ನಿಎಕ್ಸ್‌' ಹಾಗೂ ಏರೋಸ್ಪೇಸ್‌ ಟೆಸ್ಟಿಂಗ್‌ ಸಂಸ್ಥೆ 'ಏರೋಟೆಕ್‌' ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದ್ದು, ಯಶಸ್ವಿ ಹಾರಾಟ ನಡೆಸಿದೆ.

Vijaya Karnataka Web 29 May 2020, 10:31 pm
ವಾಷಿಂಗ್ಟನ್‌: ವಿಶ್ವದ ಅತ್ಯಂತ ದೊಡ್ಡ ಬ್ಯಾಟರಿಚಾಲಿತ ಎಲೆಕ್ಟ್ರಿಕ್‌ ವಾಣಿಜ್ಯ ವಿಮಾನ ಗುರುವಾರ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿತು. ಇದು ವಿದ್ಯುತ್‌ ಚಾಲಿತ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ ಎಂದು ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ಸೆಸ್ನಾ ಗ್ರಾಂಡ್‌ ಕ್ಯಾರವಾನ್‌ 208ಬಿ ಹೆಸರಿನ ಈ ಆಲ್‌ ಎಲೆಕ್ಟ್ರಿಕ್‌ ವಿಮಾನವನ್ನು ಎಲೆಕ್ಟ್ರಿಕ್‌ ಏವಿಯೇಷನ್‌ ಕಂಪನಿ 'ಮ್ಯಾಗ್ನಿಎಕ್ಸ್‌' ಹಾಗೂ ಏರೋಸ್ಪೇಸ್‌ ಟೆಸ್ಟಿಂಗ್‌ ಸಂಸ್ಥೆ 'ಏರೋಟೆಕ್‌' ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ.
Vijaya Karnataka Web Electric Aircraft


ವಾಷಿಂಗ್ಟನ್‌ನ ಮೊಸೆಸ್‌ ಲೇಕ್‌ ಬಳಿಯ ಗ್ರಾಂಟ್‌ ಕಂಟ್ರಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. 750 ಹಾರ್ಸ್‌ ಪವರ್‌ (560 ಕಿಲೋ ವ್ಯಾಟ್‌) ಹಾಗೂ ಮ್ಯಾಗ್ನಿ500 ಪ್ರೊಪ್ಯುಲೇಷನ್‌ ತಳ್ಳುವಿಕೆ ಶಕ್ತಿ ಹೊಂದಿರುವ ವಿಮಾನದಲ್ಲಿ9 ಮಂದಿ ಹಾರಾಟ ನಡೆಸಿದರು.

ಮ್ಯಾಗ್ನಿಎಕ್ಸ್‌ನ ಸಿಇಒ ರೋಯಿ ಗಂರ್ಜಾಸ್ಕಿ ಮಾತನಾಡಿ ''ಇ ಕ್ಯಾರವಾನ್‌ ಹಾರಾಟ ಕಡಿಮೆ ವೆಚ್ಚದ ವಿಮಾನ ಯಾನ ಸೇವೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಿದೆ. ಹೊಗೆರಹಿತ ವಿಮಾನವನ್ನು ಸಣ್ಣಪುಟ್ಟ ವಿಮಾನ ನಿಲ್ದಾಣದ ಮೂಲಕವೂ ಕಾರ್ಯಾಚರಣೆ ಮಾಡಲು ಸಾಧ್ಯ,'' ಎಂದು ಹೇಳಿದರು.

ವರ್ಷದಲ್ಲಿ100 ದಿನ ಮಾತ್ರ ಶಾಲೆ? ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಮಾದರಿ!

2019ರ ಡಿಸೆಂಬರ್‌ 23ರಂದು ಕೆನಡಾದಲ್ಲಿವಿಶ್ವದ ಮೊಟ್ಟಮೊದಲ ಎಲೆಕ್ಟ್ರಾನಿಕ್‌ ವಿಮಾನ ಯಶಸ್ವಿ ಹಾರಾಟ ನಡೆಸಿತ್ತು. ಅದರಲ್ಲಿಆರು ಮಂದಿ ಪ್ರಯಾಣ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ