ಆ್ಯಪ್ನಗರ

ಉಗ್ರರಿಗೆ ಪತ್ರ ಬರೆಯಿರಿ: ಪಠ್ಯ ಪುಸ್ತಕದಲ್ಲಿ ಹೊಸ ಬೋಧನೆ

ಇತ್ತೀಚೆಗೆ ನಡೆದ ಮ್ಯಾಂಚೆಸ್ಟರ್‌ ದಾಳಿಗೂ ವಾರ ಮೊದಲು ಬ್ರಿಟನ್‌ನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕಾಗಿ ಮುದ್ರಿಸಿರುವ ಶಾಲಾ ಪುಸ್ತಕಗಳಲ್ಲಿ ಉಗ್ರನಿಗೆ ಪತ್ರ ಬರೆಯುವಂತೆ ಮಕ್ಕಳಿಗೆ ಸೂಚಿಸಲಾಗಿರುವ ವಿಷಯ ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಟೈಮ್ಸ್ ಆಫ್ ಇಂಡಿಯಾ 28 May 2017, 4:50 pm
ಲಂಡನ್‌: ಇತ್ತೀಚೆಗೆ ನಡೆದ ಮ್ಯಾಂಚೆಸ್ಟರ್‌ ದಾಳಿಗೂ ವಾರ ಮೊದಲು ಬ್ರಿಟನ್‌ನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕಾಗಿ ಮುದ್ರಿಸಿರುವ ಶಾಲಾ ಪುಸ್ತಕಗಳಲ್ಲಿ ಉಗ್ರನಿಗೆ ಪತ್ರ ಬರೆಯುವಂತೆ ಮಕ್ಕಳಿಗೆ ಸೂಚಿಸಲಾಗಿರುವ ವಿಷಯ ಸದ್ಯ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web write a letter to terrorists children told in new book
ಉಗ್ರರಿಗೆ ಪತ್ರ ಬರೆಯಿರಿ: ಪಠ್ಯ ಪುಸ್ತಕದಲ್ಲಿ ಹೊಸ ಬೋಧನೆ


ಟಾಲ್ಕಿಂಗ್‌ ಎಬೌಟ್‌ ಟೆರರಿಸಮ್‌ ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಈ ಪುಸ್ತಕವನ್ನು ಸುಮಾರು ಏಳ ರಿಂದ 11 ವರ್ಷದ ಮಕ್ಕಳಿಗೆ ಬೋಧಿಸಲಾಗುತ್ತದೆ. ಅಲ್ಲದೇ ಸಾರ್ವಜನಿಕರನ್ನು ಉಗ್ರರ ರೀತಿಯಲ್ಲಿ ಕೊಲ್ಲುವುದು ಒಂದು ತರಹದ ಯುದ್ಧ ಎಂದೂ ಉಲ್ಲೇಖಿಸಲಾಗಿದೆ.

ಉಗ್ರರ ಈ ದಷ್ಕೃತ್ಯಕ್ಕೆ ಮೂಲ ಕಾರಣ ತಮಗೆ ನ್ಯಾಯ ಮತ್ತು ಗೌರವ ಸಿಗುತ್ತಿಲ್ಲ ಎಂಬ ಅರ್ಥದ ಸಂದೇಶ ಕೂಡ ಪುಸ್ತಕದಲ್ಲಿದೆ ಎಂದು ಡೈಲಿ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಮತ್ತೊಂದು ವಿಶೇಷವೆಂದರೆ ಪುಸ್ತಕದ ಕೊನೆಯಲ್ಲಿ ಭಯೋತ್ಪಾದಕರಿಗೆ ಆರು ಪ್ರಶ್ನೆಗಳನ್ನು ಕೇಳುವಂತೆಯೂ ಮಕ್ಕಳಿಗೆ ಸೂಚಿಸಲಾಗಿದೆ. ಬ್ರಿಲಿಯಂಟ್ ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ. ಇದೀಗ ಕೆಲ ಪಠ್ಯದಲ್ಲಿ ಉಗ್ರರಿಗೆ ಪತ್ರ ಬರೆಯುವಂತೆ ಸೂಚಿಸಿರೋದು ಸರಿಯಲ್ಲ ಅಂತಾ ವಿಮರ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾದಕರ ಕುರಿತು ಮಕ್ಕಳಿಗೆ ಸರಿಯಾದ ಜ್ಞಾನವಿಲ್ಲ, ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಉಗ್ರರ ಕುರಿತು ಮಾನವೀಯತೆ ತೋರಿಸುವ ಪತ್ರಗಳು, ಉಗ್ರರ ಮೇಲೆ ಕರುಣೆ ಮೂಡುವ ಸಾಧ್ಯತೆಗಳೂ ಇರುತ್ತವೆ ಅನ್ನೋದು ಅವರ ಆತಂಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ