ಆ್ಯಪ್ನಗರ

ವುಹಾನ್‌ನ ಕೊನೆಯ ಕೊರೊನಾ ರೋಗಿ ಆಸ್ಪತ್ರೆಯಿಂದ ಬಿಡುಗಡೆ

ವುಹಾನ್‌ ನಗರದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಟ್ಟಕಡೆಯ ಕೊರೊನಾ ರೋಗಿ ಗುಣಮುಖನಾಗಿದ್ದು ಮನೆಗೆ ಕಳುಹಿಸಲಾಗಿದೆ. ಆದರೆ ಚೀನಾದ ಇತರ ಭಾಗಗಳ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 723 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Agencies 27 Apr 2020, 8:53 pm

ಬೀಜಿಂಗ್‌: ವಿಶ್ವಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್‌ನ ಮೂಲ ಚೀನಾದ ವುಹಾನ್‌ ನಗರದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಟ್ಟಕಡೆಯ ಕೊರೊನಾ ರೋಗಿ ಗುಣಮುಖನಾಗಿದ್ದು ಮನೆಗೆ ಕಳುಹಿಸಲಾಗಿದೆ. ಇದರೊಂದಿಗೆ ಮೂರು ತಿಂಗಳ ಹೋರಾಟದ ನಂತರ ವುಹಾನ್‌ ಕೊರೊನಾ ಮುಕ್ತವಾಗಿದೆ ಎಂದು ಚೀನಾ ಸರಕಾರ ಹೇಳಿದೆ.
Vijaya Karnataka Web Virus Outbreak Leaving Wuhan


ವುಹಾನ್‌ನಲ್ಲಿ ಕೊರೊನಾ ಪೀಡಿತರಿಗೆಂದೇ 10 ದಿನಗಳಲ್ಲಿ ಮೇಕ್ ‌ಶಿಫ್ಟ್‌ ಆಸ್ಪತ್ರೆ ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಂಕಿತರ ಸಂಖ್ಯೆ ಬಹುತೇಕ ಕಡಿಮೆಯಾಗುತ್ತಿದ್ದಂತೆಯೇ ಅದನ್ನು ಚೀನಾ ಸರಕಾರ ಕೆಡವಿಹಾಕಿತ್ತು. ಆದರೆ ಬೇರೆ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿತ್ತು. ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊನೆಯ ರೋಗಿ ಗುಣಮುಖನಾಗಿದ್ದು ಆತನನ್ನು ಮನೆಗೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಶಾಲೆಗೆ ಹೊರಟ ಚೀನಿ ಪುಟಾಣಿಗಳು: ವಿಶೇಷ ಶಿರಸ್ತ್ರಾಣ ಕಂಡು ಬೆರಗಾದ ನೆಟ್ಟಿಗರು!

ಆದರೆ ಭಾನುವಾರ ಚೀನಾದಲ್ಲಿ ಮತ್ತೆ ಮೂರು ಹೊಸ ಕೊರೊನಾ ಕೇಸ್‌ಗಳು ವರದಿಯಾಗಿವೆ. ಇದರಲ್ಲಿ ಇಬ್ಬರು ವಿದೇಶದಿಂದ ಬಂದವರಾಗಿದ್ದರೆ, ಒಬ್ಬ ಸ್ಥಳೀಯ ವ್ಯಕ್ತಿ ಎಂದು ಆಯೋಗ ತಿಳಿಸಿದೆ. ಚೀನಾದಲ್ಲಿ ಇದುವರೆಗೂ 4,633 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು 82,830 ಮಂದಿಗೆ ಸೋಂಕು ತಗುಲಿತ್ತು. ಅದರಲ್ಲಿ 723 ರೋಗಿಗಳು ಇನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 77,474 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಸರಕಾರ ಹೇಳಿದೆ. ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ವುಹಾನ್‌ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ