ಆ್ಯಪ್ನಗರ

ಸರ್ವಿಸಸ್‌ ಸಂಸ್ಥೆ ವಿರುದ್ಧ ದೂರು

ರೈತರಿಗೆ ಕಿಸಾನ್‌ ಸುರಕ್ಷಾ ಕಾರ್ಡ್‌ ವಿತರಿಸುತ್ತೇವೆ ಎಂದು ನಂಬಿಸಿ ವಂಚನೆ ಮಾಡುತ್ತಿರುವ ನಗರದಲ್ಲಿರುವ ಬೆಂಗಳೂರಿನ ಖಾಸಗಿ ಸಂಸ್ಥೆ ವಿರುದ್ಧ ಕ್ರಮ ಜರುಗಿಸುವಂತೆ ಜಯ ಕರ್ನಾಟಕ ಸಂಘ ತಾಲೂಕು ಘಟಕದವರು ಒತ್ತಾಯಿಸಿದ್ದಾರೆ.

Vijaya Karnataka 21 Jul 2019, 4:22 pm
ಸುರಪುರ:ರೈತರಿಗೆ ಕಿಸಾನ್‌ ಸುರಕ್ಷಾ ಕಾರ್ಡ್‌ ವಿತರಿಸುತ್ತೇವೆ ಎಂದು ನಂಬಿಸಿ ವಂಚನೆ ಮಾಡುತ್ತಿರುವ ನಗರದಲ್ಲಿರುವ ಬೆಂಗಳೂರಿನ ಖಾಸಗಿ ಸಂಸ್ಥೆ ವಿರುದ್ಧ ಕ್ರಮ ಜರುಗಿಸುವಂತೆ ಜಯ ಕರ್ನಾಟಕ ಸಂಘ ತಾಲೂಕು ಘಟಕದವರು ಒತ್ತಾಯಿಸಿದ್ದಾರೆ.
Vijaya Karnataka Web allegations of fraud by a private firm complaint
ಸರ್ವಿಸಸ್‌ ಸಂಸ್ಥೆ ವಿರುದ್ಧ ದೂರು


ತಹಸೀಲ್ದಾರ್‌ಗೆ ಈ ಕುರಿತಂತೆ ದೂರು ನೀಡಿರುವ ಸಂಘದ ಮುಖಂಡರು, ಈ ಸಂಸ್ಥೆ ನೀಡುತ್ತಿರುವ ಕಾರ್ಡ್‌ನಲ್ಲಿ ಕಾರ್ಡ್‌ ಮೂಲಕ 5 ವರ್ಷಗಳ ವರೆಗೆ 1 ಲಕ್ಷ ರೂ. ಅಪಘಾತ ವಿಮೆ, ರಿಯಾಯತಿ ದರದಲ್ಲಿ ಮಣ್ಣಿನ ಗುಣಮಟ್ಟ ಪರೀಕ್ಷೆ, ಕೃಷಿ ಸಲಕರಣೆ, ಬೀಜ, ಗೊಬ್ಬರ ಪೂರೈಕೆ, ಜೀವ ವಿಮೆ, ಆರೋಗ್ಯ ವಿಮೆ, ಯುವ ಜನತೆಗೆ ಉದ್ಯೋಗದ ಮಾಹಿತಿ, ಕೃಷಿ ಸಂಬಂಧಿತ ಚಟುವಟಿಕೆಗಳ ಮಾಹಿತಿ ಸೇರಿ ಹಲವು ಅಂಶಗಳು ಸೇರಿಸಿ ರೈತರನ್ನು ವಂಚಿಸಲಾಗುತ್ತಿದೆ ಎಂದು ದೂರಿದರು.

ಒಂದು ಕಾರ್ಡ್‌ಗೆ 350 ರೂ. ನಿಗದಿಪಡಿಸಲಾಗಿದ್ದು ಈಗಾಗಲೇ ಬಹಳಷ್ಟು ರೈತರನ್ನು ವಂಚಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಎನ್‌ಜಿಒಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಮ್ಮ ಸಂಘಟನೆಗೆ ಈ ಸಂಸ್ಥೆಯ ಕಾರ್ಯ ಚುಟುವಟಿಕೆಗಳ ಬಗ್ಗೆ ಸಂದೇಹ ಬಂದಿದ್ದರ ಹಿನ್ನೆಲೆಯ ಇಲ್ಲಿಯ ನಗರಸಭೆ ಕಚೇರಿ ಬಳಿ ಇರುವ ಈ ಸಂಸ್ಥೆಯ ಕಚೇರಿಗೆ ಹೋಗಿ ವಿಚಾರಿಸಿದಾಗ ಅನುಮಾನಾಸ್ಪದ ವಿಚಾರಗಳು ವ್ಯಕ್ತವಾಗಿವೆ ಎಂದು ಆರೋಪಿಸಿದರು.

ಸರಕಾರದಿಂದ ಅನುಮತಿ ಪಡೆದ ಪರವಾನಿಗೆ ತೋರಿಸಿ ಎಂದು ಹೇಳಿದಾಗ ಹಾರಿಕೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರನ್ನು ವಿಚಾರಿಸಿದಾಗ ಈ ಸಂಸ್ಥೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಕಾರಣ ತಕ್ಷ ಣ ಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಈ ಮೂಲಕ ಮುಗ್ಧ ರೈತರು ಮೋಸ ಹೋಗುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ ಮೂಲಕ ಸಲ್ಲಿಸಲಾಯಿತು. ಸಂಘದ ತಾಲೂಕು ಘಟಕದ ಅಧ್ಯಕ್ಷ ರವಿನಾಯಕ ಬೈರಿಮರಡಿ, ಮುಖಂಡರಾದ ಶರಣಪ್ಪ ಡಿಬಾಸ್‌, ಹಣಮಂತ್ರಾಯ ಮೇಟಿಗೌಡ, ಮೌನೇಶ ದಳಪತಿ, ಸೋಮು ದೊರೆ, ಗ್ಯಾನಯ್ಯ ವಾಗಣಗೇರಿ, ಧರ್ಮಣ್ಣ ಸುರಪುರ, ಹಣಮಗೌಡ ಶಖಾಪುರ, ಬಸವರಾಜ ಸೂಗೂರು ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ