ಆ್ಯಪ್ನಗರ

'ಜಲಬಂಧಿ' ಯಾದ ಛಾಯಾ ಭಗವತಿ ದೇಗುಲ

ಕೊಡೇಕಲ್‌ ಸಮೀಪದ ಛಾಯಾ ಭಗವತಿ ದೇಗುಲ ಕೃಷ್ಣೆಯ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿರುವುದು...

Vijaya Karnataka 17 Aug 2019, 4:26 pm
ಕೊಡೇಕಲ್‌:ಜಲಾಶಯದಿಂದ ಶುಕ್ರವಾರ ಸಂಜೆ 4.8 ಲಕ್ಷ ಕ್ಯೂಸೆಕ್‌ ಭಾರಿ ಪ್ರಮಾಣದ ನೀರನ್ನು ನದಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಛಾಯಾ ಭಗವತಿ ದೇವಸ್ಥಾನ ಅಕ್ಷ ರಶ ಜಲಬಂಧಿಯಾಗಿದೆ.
Vijaya Karnataka Web chaya bhagavathi temple of jalabandhi
'ಜಲಬಂಧಿ' ಯಾದ ಛಾಯಾ ಭಗವತಿ ದೇಗುಲ


ಎರಡು ದಿನದಿಂದ ಕಡಿಮೆ ಆಗಿದ್ದ ಒಳ ಹರಿವು ಮತ್ತೇ ಶುಕ್ರವಾರ ಹೆಚ್ಚಾಗಿದೆ. ಪ್ರಯುಕ್ತ 2009 ಪ್ರವಾಹ ಪುನರಾವರ್ತನೆ ಆಗುವ ಸಾಧ್ಯತೆ ದಟ್ಟವಾಗಿದೆ. ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ನೀರಿನ ಸಂಗ್ರಹಮಟ್ಟವನ್ನು ಕಾಯ್ದಿಟ್ಟುಕೊಂಡು ಜಲಾಶಯದಿಂದ ಹೆಚ್ಚುವರಿಯಾದ 4 ಲಕ್ಷ 80 ಸಾವಿರ ಕ್ಯೂಸೆಕ್‌ ನೀರನ್ನು ಕೃಷ್ಣೆಗೆ ಹರಿಸುತ್ತಿರುವ ಪರಿಣಾಮ ಗುಡ್ಡ ಗಾಡಿನಲ್ಲಿ ಪ್ರವಾಹ ಉಂಟಾಗಿದೆ.

ಜಲಬಂಧಿಯಾದ ಛಾಯಾ ದೇಗುಲ : ಕಳೆದ ನಾಲ್ಕೈದು ದಿನಗಳಿಂದ ಸುಪ್ರಸಿದ್ಧ ಶ್ರೀ ಛಾಯಾ ದೇಗುಲ ಗರ್ಭ ಗೃಹಕ್ಕೆ ಆವರಿಸಿದ್ದ ನೀರು ಶುಕ್ರವಾರ ಸಂಜೆ ಮತ್ತೇ ದೇಗುಲದ ಮುಖ ಮಂಟಪದ ಚಾವಣಿವರೆಗೂ ಆವರಿಸಿದೆ. ವಾರದಿಂದ ನಿತ್ಯ ಸಹಸ್ರಾರು ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಿದ್ದು, ದೇವಿಯ ಮೂರ್ತಿಯನ್ನು ಮೆಟ್ಟಲಲ್ಲೇ ಇಟ್ಟು ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತರು ಕೂಡ ಅಲ್ಲಿಂದಲೇ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಕೋಟ್‌: ಭಾರಿ ಪ್ರಮಾಣದಲ್ಲಿ ಒಳ ಹರಿವು ಹರಿದು ಬರುತ್ತಿರುವ ನಿಟ್ಟಿನಲ್ಲಿ ಶುಕ್ರವಾರ ಬಸವಸಾಗರ ಜಲಾಶಯದಿಂದ 4.8 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಬಿಡಲಾಗಿದೆ. ಛಾಯಾ ದೇಗುಲ ಸೇರಿ ನೀಲಕಂಠರಾಯನಗಡ್ಡಿ ಸಂಚಾರಿ ಸೇತುವೆ ಮುಳುಗುವ ಭೀತಿ ಇದೆ. ಜನ ಜಾನುವಾರು ನೀರಿಗೆ ಇಳಿಯಕೂಡದು.

-ಆರ್‌.ಎಲ್‌.ಹಳ್ಳೂರು, ಎಇ, ನಾರಾಯಣಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ