ಆ್ಯಪ್ನಗರ

ಹಣಕ್ಕಾಗಿ ಮಾಜಿ ಸಚಿವ ನರಸಿಂಹನಾಯಕ ಪಕ್ಷಾಂತರ, ಸಿಎಂ ಆರೋಪ

ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ನರಸಿಂಹನಾಯಕ ನನ್ನನ್ನು ಸೋಲಿಸಲು ಬಾದಾಮಿ ಕ್ಷೇತ್ರಕ್ಕೆ ಹೋಗಿದ್ದಾರೆ. ಇಂತಹ ನೂರಾರು ಜನ ಬಂದರೂ ನನ್ನ ಸೋಲಿಸಲು ಸಾಧ್ಯವಿಲ್ಲ. ಹಣಕ್ಕಾಗಿ ಪದೇಪದೆ ಪಕ್ಷಾಂತರ ಮಾಡುವ ಇಂತಹವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Vijaya Karnataka 1 May 2018, 5:44 pm
ಯಾದಗಿರಿ : ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ನರಸಿಂಹನಾಯಕ ನನ್ನನ್ನು ಸೋಲಿಸಲು ಬಾದಾಮಿ ಕ್ಷೇತ್ರಕ್ಕೆ ಹೋಗಿದ್ದಾರೆ. ಇಂತಹ ನೂರಾರು ಜನ ಬಂದರೂ ನನ್ನ ಸೋಲಿಸಲು ಸಾಧ್ಯವಿಲ್ಲ. ಹಣಕ್ಕಾಗಿ ಪದೇಪದೆ ಪಕ್ಷಾಂತರ ಮಾಡುವ ಇಂತಹವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web cm siddaramaiah to launch congress convention meeting
ಹಣಕ್ಕಾಗಿ ಮಾಜಿ ಸಚಿವ ನರಸಿಂಹನಾಯಕ ಪಕ್ಷಾಂತರ, ಸಿಎಂ ಆರೋಪ


ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಒಂದು ಸುಳ್ಳಿನ ಪಕ್ಷವಾಗಿದೆ. ಅದರಲ್ಲಿಯೂ ನರಸಿಂಹನಾಯಕ ಮಹಾನ್‌ ಸುಳ್ಳುಗಾರ. ಇಂತಹವರು ನನ್ನ ವಿರುದ್ಧ ಪ್ರಚಾರಕ್ಕೆ ಹೋಗಿದ್ದಾರೆ. ಅವರಿಗೆ ಸುರಪುರದಲ್ಲಿಯೇ ಗೆಲ್ಲಲು ಆಗುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಅಮಿತ್‌ ಶಾ ದೊಡ್ಡ ನಾಟಕಕಾರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಒಬ್ಬ ಮಹಾನ್‌ ಸುಳ್ಳುಗಾರ ಮತ್ತು ದೊಡ್ಡ ನಾಟಕಕಾರ. ಸಂವಿಧಾನವನ್ನು ಬದಲಾವಣೆ ಮಾಡಲು ಬಿಜೆಪಿ ಹುನ್ನಾರು ನಡೆಸಿದೆ. ಇವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದರ ಬಗ್ಗೆ ಯಾವುದೇ ಗೌರವ ಇಲ್ಲ. ಬಿಜೆಪಿ ಸರಕಾರ ಇದ್ದಾಗ 22 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ನಮ್ಮ ಸರಕಾರ 80 ಸಾವಿರ ಕೋಟಿ ರೂ. ಐದು ವರ್ಷದಲ್ಲಿ ಖರ್ಚು ಮಾಡಿದೆ ಎಂದು ತಿಳಿಸಿದರು.

ಬಿ.ಎಸ್‌. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗುವುದಿಲ್ಲ. ಇಂತಹವರಿಗೆ ಮತದಾರರು ತಿರಸ್ಕಾರ ಮಾಡಲಿದ್ದಾರೆ. ಕಾಂಗ್ರೆಸ್‌ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಕ್ರಾಂತಿ ಹರಿಯುತ್ತದೆ. ಮೀಸಲಾತಿ ಕಸಿಯುವಂತಹ ಹುನ್ನಾರು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಅವರಿಗೆ ಬಹುಮತ ಬಂದರೆ ಸಂವಿಧಾನ ತಿದ್ದುಪಡಿ ಮಾಡಲಿದ್ದಾರೆ.ಇದಕ್ಕೆ ಎಂದಿಗೂ ಅವಕಾಶ ಮಾಡಿಕೊಡವುದಿಲ್ಲ ಎಂದು ಗುಡುಗಿದರು.

ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಬೆಟ್ಟ ಅಗೆದು ಹಾಳು ಮಾಡಿದ್ದಾರೆ. ಸುಗ್ಗಲಮ್ಮ ದೇವಸ್ಥಾನ ಒಡೆದು ಹಾಕಿದ್ದಾರೆ. ಇನ್ನೂ ಇದೀಗ ಬಾದಾಮಿ ಗುಡ್ಡಗಳ ಮೇಲೆ ಕಣ್ಣು ಬಿದ್ದಿದೆ. ಮತದಾರರು ಇವರಿಗೆ ಸೋಲಿನ ರುಚಿ ತೋರಿಸುವುದು ಖಚಿತವಾಗಿದೆ ಎಂದು ಹೇಳಿದರು.

ಬಿಎಸ್‌ವೈ ಅವರಿಗೆ 1,000 ಮತ್ತು 500 ರೂ. ನೋಟಿನ ಸ್ಥಿತಿ ಆಗಿದೆ. ಮಗನಿಗೆ ಟಿಕೆಟ್‌ ಸಿಗಿಲಿಲ್ಲ. ಇತ್ತ ಶೋಭಾ ಕರಂದ್ಲಾಜೆ ಅವರಿಗೆ ನೀಡಿಲ್ಲ.ಬಿಎಸ್‌ವೈ ಅವರ ಪರಿಸ್ಥಿತಿ ಎಲ್‌.ಕೆ.ಆಡ್ವಾಣಿ ಅವರಿಗೆ ಬಂದಂತೆ ಬಂದಿದೆ ಎಂದರು.

ಶಾಸಕ ರಾಜಾ ವೆಂಕಟಪ್ಪನಾಯಕ, ಮಾಜಿ ಸಚಿವ ರಾಜಾಮದನಗೋಪಾಲ ನಾಯಕ,ಮಾಜಿ ಸಂಸದ ರಾಜಾರಂಗಪ್ಪ ನಾಯಕ, ಜಿಪಂ ಸದಸ್ಯ ರಾಜಶೇಖರ ಪಾಟೀಲ್‌ ವಜ್ಜಲ್‌, ಸೂಲಪ್ಪ ಕಮತಗಿ ಸೇರಿದಂತೆ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ