ಆ್ಯಪ್ನಗರ

ಅನದಿಕೃತ ಹತ್ತಿ ವ್ಯಾಪಾರ ರದ್ದು ಪಡಿಸಲು ಆಗ್ರಹ

ತಾಲೂಕಿನ ಹತ್ತಿಗೂಡುರು, ವಡಗೇರಾ, ಭೀಮರಾಯನಗುಡಿ, ಗೋಗಿ, ಸಗರ, ರಸ್ತಾಪುರ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿಅನಧೀಕೃತ ಹತ್ತಿ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದ್ದರು ಎಪಿಎಂಸಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಅನದೀಕೃತ ಹತ್ತಿ ವ್ಯಾಪಾರ ನಿಲ್ಲಿಸಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ವಹಿವಾಟು ನಡೆಯುವಂತಾಗಬೇಕು ಎಂದು ತಾಲೂಕಿನ ಕರ್ನಾಟಕ ರಕ್ಷಣಾ ಸೇನೆಯಿಂದ ಬೆಂಗಳೂರು ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

Vijaya Karnataka 13 Oct 2019, 4:14 pm
ಶಹಾಪುರ:ತಾಲೂಕಿನ ಹತ್ತಿಗೂಡುರು, ವಡಗೇರಾ, ಭೀಮರಾಯನಗುಡಿ, ಗೋಗಿ, ಸಗರ, ರಸ್ತಾಪುರ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿಅನಧೀಕೃತ ಹತ್ತಿ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದ್ದರು ಎಪಿಎಂಸಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಅನದೀಕೃತ ಹತ್ತಿ ವ್ಯಾಪಾರ ನಿಲ್ಲಿಸಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ವಹಿವಾಟು ನಡೆಯುವಂತಾಗಬೇಕು ಎಂದು ತಾಲೂಕಿನ ಕರ್ನಾಟಕ ರಕ್ಷಣಾ ಸೇನೆಯಿಂದ ಬೆಂಗಳೂರು ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
Vijaya Karnataka Web demand for the abolition of the unauthorized cotton trade
ಅನದಿಕೃತ ಹತ್ತಿ ವ್ಯಾಪಾರ ರದ್ದು ಪಡಿಸಲು ಆಗ್ರಹ


ಈ ಕುರಿತು ಸಂಘಟನೆಯ ಜಿಲ್ಲಾಧ್ಯಕ್ಷ ಮೌನೇಶ ಸುರಪುರಕರ್‌ ಅನಧೀಕೃತ ಹತ್ತಿ ವ್ಯಾಪಾರ ಮಾಡುತ್ತಿರುವುದರಲ್ಲಿತೂಕದಲ್ಲಿಮತ್ತು ದರದಲ್ಲಿಯೂ ದಲ್ಲಾಳಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯು ದಲ್ಲಾಳಿಗಳ ಪಾಲಾಗುತ್ತಿರುವುದರಿಂದ ಅನ್ನದಾತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಅಲ್ಲದೇ ಎಪಿಎಂಸಿಗೆ ಇದರಿಂದ ಬರುವ ಲಾಭವು ನಷ್ಟವಾಗುತ್ತಿದೆ. ಕೂಡಲೇ ಸ್ಥಳೀಯ ಎಪಿಎಂಸಿ ಕಾರ್ಯದರ್ಶಿಯವರಿಗೆ ಸೂಕ್ತ ಕಠಿಣ ನಿರ್ಧಾರ ತೆಗೆದುಕೊಳ್ಳಲು ಆದೇಶಿಸಬೇಕು. ಇಲ್ಲದಿದ್ದಲ್ಲಿಬೆಂಗಳೂರು ಮುಖ್ಯ ಕಚೇರಿ ಎದುರುಗಡೆ ರಾಜ್ಯಾಧ್ಯಕ್ಷ ನಿರಂಜನ ನೇತೃತ್ವದಲ್ಲಿಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿಸಂಘಟನೆಯ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ