ಆ್ಯಪ್ನಗರ

ಸಾಹಿತ್ಯ ಕೃಷಿಗೆ ಓದು ಅತ್ಯಗತ್ಯ: ಕರದಳ್ಳಿ

ಯಾವುದೇ ಪ್ರಕಾರದ ಸಾಹಿತ್ಯದ ಕೃಷಿಗೆ ವಿಸ್ತಾರವಾದ ಓದು ಅತ್ಯಗತ್ಯ. ಗಟ್ಟಿಯಾದ ಹಾಗೂ ಮೌಲಿಕ ಬರಹಗಳಿಗೆ ಅಧ್ಯಯನ ತಳಹದಿಯನ್ನು ಒದಗಿಸಿಕೊಡುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

Vijaya Karnataka 19 Jun 2019, 5:00 pm
ಶಹಾಪುರ :ಯಾವುದೇ ಪ್ರಕಾರದ ಸಾಹಿತ್ಯದ ಕೃಷಿಗೆ ವಿಸ್ತಾರವಾದ ಓದು ಅತ್ಯಗತ್ಯ. ಗಟ್ಟಿಯಾದ ಹಾಗೂ ಮೌಲಿಕ ಬರಹಗಳಿಗೆ ಅಧ್ಯಯನ ತಳಹದಿಯನ್ನು ಒದಗಿಸಿಕೊಡುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web essential to literature farming coriander
ಸಾಹಿತ್ಯ ಕೃಷಿಗೆ ಓದು ಅತ್ಯಗತ್ಯ: ಕರದಳ್ಳಿ


ನಗರದ ತಮ್ಮ ನಿವಾಸದಲ್ಲಿ ಪರಿವರ್ತನಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸೃಜನಶೀಲ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾಲೂಕಿನಲ್ಲಿ ಸಾಹಿತಿಗಳ ಕೃತಿಗಳ ಓದು, ಚರ್ಚೆ, ವಿಮರ್ಶೆ ಮುಂತಾದ ರಚನಾತ್ಮಕ ಚಟುವಟಿಕೆಗಳು ಹೆಚ್ಚಾಗಬೇಕು. ಇದರಿಂದ ಉತ್ತಮ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪರಿವರ್ತನಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಹಣಮಂತಿ ಗುತ್ತೇದಾರ ಮಾತನಾಡಿ ಖ್ಯಾತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಸಂವೇದನೆಗಳೊಂದಿಗೆ ವಿಶಿಷ್ಟವಾಗಿ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಹೈದ್ರಾಬಾದ್‌ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಶಿಕ್ಷ ಕಿ ಭಾಗ್ಯ ದೊರೆ, ಲಕ್ಷ್ಮೀ ಪಟ್ಟಣಶೆಟ್ಟಿ, ಶಿಕ್ಷ ಕ ರುದ್ರಪ್ಪ ತಳವಾರ, ಶರಣು ಕಲ್ಮನಿ, ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ