ಆ್ಯಪ್ನಗರ

ಯಾದಗಿರಿ ಜಿಲ್ಲೆ ಸುರಪುರದಲ್ಲಿ ಮೊಸಳೆ ಬಾಯಿಗೆ ಸಿಲುಕಿ ಪಾರಾದ ಮೀನುಗಾರ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮೀನುಗಾರರೊಬ್ಬರಿಗೆ ಮೊಸಳೆ ಕಚ್ಚಿದೆ. ಆದರೂ, ಮೊಸಳೆ ಬಾಯಿಯಿಂದ ಪಾರಾಗಿ ಬಂದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Vijaya Karnataka Web 3 Feb 2020, 10:01 am
ಸುರಪುರ: ಇಲ್ಲಿಯ ಮೀನುಗಾರನೊಬ್ಬ ಮೊಸಳೆ ಬಾಯಿಗೆ ಸಿಲುಕಿ ಪಾರಾದ ಘಟನೆ ತಾಲೂಕಿನ ಹೇಮನೂರು ಸಮೀಪದ ಕೃಷ್ಣಾ ನದಿಯ ದಂಡೆಯಲ್ಲಿ ಭಾನುವಾರ ನಡೆದಿದೆ. ನಗರದ ಬೋವಿಗಲ್ಲಿಯ ಜಟ್ಟೆಪ್ಪ ನಾಗಪ್ಪ(40) ಮೊಸಳೆಯಿಂದ ತಪ್ಪಿಸಿಕೊಂಡು ಬಂದಿರುವ ಸಾಹಸಿ.
Vijaya Karnataka Web fishermen yadgiri


ಬೆಳಗ್ಗೆ ಕೃಷ್ಣಾ ನದಿಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ದಡದ ಸಮೀಪವಿದ್ದ ಮೊಸಳೆಯೊಂದು ನಾಗಪ್ಪನ ಎಡಗಾಲನ್ನು ಕಚ್ಚಿ ಹಿಡಿಯಿತು. ಕೂಡಲೇ ಅವರು ಕಾಲು ಕೊಡವಿ, ಭಾರಿ ಸಾಹಸದಿಂದ ಅದರ ಹಿಡಿತದಿಂದ ತಪ್ಪಿಸಿಕೊಂಡರು. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕಾಲಿಗೆ 16 ಹೊಲಿಗೆ ಹಾಕಲಾಗಿದೆ.

ಅಸಮಾಧಾನ: ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ನದಿಗೆ ಇಳಿಯುವ ಮೀನುಗಾರರು, ನದಿ ದಾಟುವವರ ಮೇಲೆ ಮೊಸಳೆಗಳು ದಾಳಿ ನಡೆಸುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಹಣಮಂತ ಉಳ್ಳಗಡ್ಡೆ, ಉಪಾಧ್ಯಕ್ಷ ಮಾನಪ್ಪ ಚಳ್ಳಿಗಿಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿ: ಮೊಸಳೆಯ ಕೊರಳಿನಲ್ಲಿ ಸಿಕ್ಕಿಬಿದ್ದ ಟೈರ್ ತೆಗೆದವರಿಗೆ ಇದೆ ಬಹುಮಾನ...!
ಸಿಗದ ಪರಿಹಾರ, ಕೋರ್ಟ್‌ಗೆ ಅಲೆದಾಟ: ಇದು ಕೃಷ್ಣಾ ತೀರದ ರೈತರ ಸಂಕಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ