ಆ್ಯಪ್ನಗರ

21 ಗೇಟ್‌ಗಳಿಂದ 3 ಲಕ್ಷ ಕ್ಯೂಸೆಕ್‌ ನೀರು ಕೃಷ್ಣೆಗೆ

ಮತ್ತೆ ಹೆಚ್ಚುತ್ತಿರುವ ಒಳ ಹರಿವಿನಿಂದ ನಾರಾಯಣಪುರ ಬಸವಸಾಗರ ಜಲಾಶಯ ಪೂರ್ಣ ಭರ್ತಿಯಾಗಿದ್ದು ಮಂಗಳವಾರ 21 ಕ್ರಸ್ಟ್‌ಗೇಟ್‌ಗಳಿಂದ ಕೃಷ್ಣೆಗೆ 3 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುತ್ತಿದ್ದು, ಕೃಷ್ಣೆಯ ಒಡಲು ಮತ್ತೆ ಪ್ರವಾಹಕ್ಕೆ ತುತ್ತಾಗಿದೆ.

Vijaya Karnataka 23 Oct 2019, 10:14 pm
ಕೊಡೇಕಲ್‌ :ಮತ್ತೆ ಹೆಚ್ಚುತ್ತಿರುವ ಒಳ ಹರಿವಿನಿಂದ ನಾರಾಯಣಪುರ ಬಸವಸಾಗರ ಜಲಾಶಯ ಪೂರ್ಣ ಭರ್ತಿಯಾಗಿದ್ದು ಮಂಗಳವಾರ 21 ಕ್ರಸ್ಟ್‌ಗೇಟ್‌ಗಳಿಂದ ಕೃಷ್ಣೆಗೆ 3 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುತ್ತಿದ್ದು, ಕೃಷ್ಣೆಯ ಒಡಲು ಮತ್ತೆ ಪ್ರವಾಹಕ್ಕೆ ತುತ್ತಾಗಿದೆ.
Vijaya Karnataka Web from 21 gates to 3 lakh cusecs of water to krishna
21 ಗೇಟ್‌ಗಳಿಂದ 3 ಲಕ್ಷ ಕ್ಯೂಸೆಕ್‌ ನೀರು ಕೃಷ್ಣೆಗೆ


ಎರಡು ದಿನದಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿ 3 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಬಸವಸಾಗರ ಜಲಾಶಯ ಭರ್ತಿಯಾಗಿ ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿದ್ದು, 21 ಮುಖ್ಯ ಕ್ರಸ್ಟ್‌ಗೇಟುಗಳನ್ನು ತೆರೆದು ನೀರು ಹರಿಸಲಾಗುತ್ತಿದೆ.

492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದ ನೀರಿನ ಸಂಗ್ರಹ 491. 70ಮೀ ತಲುಪಿದೆ. ಜಲಾಶಯಕ್ಕೆ ಇನ್ನೂ ಹೆಚ್ಚಿನ ಒಳಹರಿವು ಇದ್ದು ಬುಧವಾರ 4 ಲಕ್ಷ ಕ್ಯೂಸೆಕ್‌ ನೀರು ಬಿಡುವ ಸಾಧ್ಯತೆಗಳು ಹೆಚ್ಚಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿನದಿಗೆ ನೀರು ಹರಿಸುವ ಸಂಭವನೀಯ ಹೆಚ್ಚಿದೆ. ನದಿ ತೀರದ ಗ್ರಾಮಗಳ ಜನರು ತಮ್ಮ ಸರಕು ಸಾಮಗ್ರಿ ಮತ್ತು ಸಾಕು ಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನಿಗಮದ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಛಾಯಾ ದೇಗುಲಕ್ಕೆ ನುಗ್ಗಿದ ನೀರು

ಕೃಷ್ಣಾ ನದಿಗೆ ಹೊಂದಿಕೊಂಡಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಸುಕ್ಷೇತ್ರ ಛಾಯಾ ಭಗವತಿ ದೇವಿ ದೇಗುಲದ ಗರ್ಭ ಗೃಹದೊಳಗೆ ನೀರು ನುಗ್ಗಿದ ಪ್ರಯುಕ್ತ ದೇವಿ ಮೂರ್ತಿ ಹೊರತೆಗೆದು ಮತ್ತೆ ಮೆಟ್ಟಿಲಲ್ಲೇ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ಆಗಮಿಸುವ ಭಕ್ತರು ದರ್ಶನ ಪಡೆದು ತೆರಳುತ್ತಿದ್ದಾರೆ. ಈಗಾಗಲೇ ಛಾಯಾ ಭಗವತಿ ದೇಗುಲದ ಮುಖ ಮಂಟಪದವರೆಗೂ ನೀರು ಆವರಿಸಿದೆ. 18 ಪವಿತ್ರ ತೀರ್ಥಗಳು ಮುಳುಗಿವೆ.

ಆಲಮಟ್ಟಿ ಜಲಾಶಯ ಮತ್ತೆ ಭರ್ತಿಯಾಗಿದೆ. ಈ ನಿಟ್ಟಿನಲ್ಲಿ21 ಗೇಟ್‌ ಓಪನ್‌ ಮಾಡಿ 3 ಲಕ್ಷ ಕ್ಯೂಸೆಕ್‌ ನೀರನ್ನು ಕೃಷ್ಣೆಗೆ ಹರಿಸಲಾಗುತ್ತಿದೆ. ರಾತ್ರಿ 4 ಲಕ್ಷ ಕ್ಯೂಸೆಕ್‌ ನೀರು ಬರುವ ಸಾಧ್ಯತೆಯಿದೆ. ಯಾವೂದೇ ಕಾರಣಕ್ಕೂ ನದಿ ತೀರದ ಜನ ಜಾನುವಾರು ಎಚ್ಚರಿಕೆ ವಹಿಸಬೇಕು.

- ಶಂಕರ ನಾಯ್ಕೋಡಿ

ಕಾರ್ಯನಿರ್ವಾಹಕ ಎಂಜಿನಿಯರ್‌ ನಾರಾಯಣಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ