ಆ್ಯಪ್ನಗರ

51 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ

ನಗರದ ನಗರಸಭೆ ಚುನಾವಣೆಗಾಗಿ ಒಟು 31 ವಾರ್ಡ್‌ಗಳ ಚುನಾವಣೆಗಾಗಿ 51 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಶಾಂತಿಯುತ ಮತದಾನ ಜರುಗಿತು ಎಂದು ತಿಳಿದು ಬಂದಿದೆ.

Vijaya Karnataka 30 May 2019, 10:10 pm
ಶಹಾಪುರ :ನಗರದ ನಗರಸಭೆ ಚುನಾವಣೆಗಾಗಿ ಒಟು 31 ವಾರ್ಡ್‌ಗಳ ಚುನಾವಣೆಗಾಗಿ 51 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಶಾಂತಿಯುತ ಮತದಾನ ಜರುಗಿತು ಎಂದು ತಿಳಿದು ಬಂದಿದೆ.
Vijaya Karnataka Web peaceful polling in 51 polling stations
51 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ


31 ವಾರ್ಡ್‌ಳಿಗೆ 91 ಅಭ್ಯರ್ಥಿಗಳು ಕಣದಲ್ಲಿಳಿದಿದ್ದು ಕಾಂಗ್ರೆಸ್‌ ಪಕ್ಷ ದಿಂದ 29 ವಾರ್ಡ್‌ಗಳಿಗೆ, ಬಿಜೆಪಿಯಿಂದ 31 ವಾರ್ಡ್‌ಗಳಿಗೆ, ಜೆಡಿಎಸ್‌ ಪಕ್ಷ ದಿಂದ 26 ಹಾಗೂ ಎಸ್‌ಡಿಪಿಐ ಪಕ್ಷ ದಿಂದ 2ವಾರ್ಡ್‌ಗಳಿಗೆ ತಮ್ಮ ಸ್ಪರ್ಧಾಳುಗಳನ್ನು ನಿಯೋಜನೆಗೊಳಿಸಿದ್ದರು. ಅಲ್ಲದೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು.

ನಗರದಲ್ಲಿ ಒಟ್ಟು 23,436 ಪುರುಷರು, 23,321 ಸೇರಿದಂತೆ ಒಟ್ಟು 46735 ಮತದಾರರು ಇದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ವಾರ್ಡ್‌ 3,12,19,28 ಅತ್ಯಂತ ಗಮನ ಸೆಳೆದ ವಾರ್ಡ್‌ಗಳಾಗಿವೆ. ವಾರ್ಡ್‌ 28ರಲ್ಲಿ ಅತ್ತೆ ಸೊಸೆಯ ನಡುವೆ ಸ್ಪರ್ಧೆ ನಡೆದಿದೆ. ಅತ್ತೆ ಹಣಮವ್ವ ಹಣಮಂತ ಗುತ್ತೇದಾರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೆ, ಸೊಸೆ ರಾಧಿಕಾ ಶಾಂತಪ್ಪ ಗುತ್ತೇದಾರ ಬಿಜೆಪಿಯಿಂದ ಕಣದಲ್ಲಿದ್ದರು.

ಬುಧವಾರ ನಡೆದ ಮತದಾನದಲ್ಲಿ ಬಹುತೇಕ ಅಭ್ಯರ್ಥಿಗಳು ಮತದಾರರಿಗಾಗಿ ತ್ರಿಚಕ್ರ ವಾಹನ ಸೇರಿದಂತೆ ಮತಗಟ್ಟೆಯಲ್ಲಿ ವಿಶೇಷ ಚೇತರನರಿಗೆ ವೀಲ್‌ ಚೇರ ವ್ಯವಸ್ಥೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ