ಆ್ಯಪ್ನಗರ

ಮರಕ್ಕೆ ಕಟ್ಟಿ ಹಾಕಿ ಕೊಲೆ: ಪಿಎಸ್‌ಐ ಇಬ್ಬರು ಪೇದೆಗಳ ಸಸ್ಪೆಂಡ್‌

ವ್ಯಕ್ತಿಗೆ ಮರಕ್ಕೆ ಕಟ್ಟಿ ಹೊಡೆದು ಕೊಲೆ ಮಾಡಿದ ಪ್ರಕರಣ: ಕ್ರಮ ಕೈಗೊಳ್ಳದೆ ರಾಜಿ ಸಂಧಾನ ಮಾಡಿ ಮರಳಿದ ಪೊಲೀಸರ ತಲೆದಂಡ ಪಿಎಸ್‌ಐ -ಇಬ್ಬರು ಪೇದೆಗಳ ಅಮಾನತು ಮಲ್ಲಪ್ಪ ...

Vijaya Karnataka 27 Nov 2017, 8:14 am

ವ್ಯಕ್ತಿಗೆ ಮರಕ್ಕೆ ಕಟ್ಟಿ ಹೊಡೆದು ಕೊಲೆ ಮಾಡಿದ ಪ್ರಕರಣ: ಕ್ರಮ ಕೈಗೊಳ್ಳದೆ ರಾಜಿ ಸಂಧಾನ ಮಾಡಿ ಮರಳಿದ ಪೊಲೀಸರ ತಲೆದಂಡ

ಮಲ್ಲಪ್ಪ ಸಂಕೀನ್‌

Vijaya Karnataka Web psi two constables suspend
ಮರಕ್ಕೆ ಕಟ್ಟಿ ಹಾಕಿ ಕೊಲೆ: ಪಿಎಸ್‌ಐ ಇಬ್ಬರು ಪೇದೆಗಳ ಸಸ್ಪೆಂಡ್‌


ಯಾದಗಿರಿ:
ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ ವ್ಯಕ್ತಿಯನ್ನು ಬೆತ್ತಲುಗೊಳಿಸಿ ಮರಕ್ಕೆ ಕಟ್ಟಿಹಾಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪÜ ಎಸಗಿದ ಗುರುಮಠಕಲ್‌ ಪೊಲೀಸ್‌ ಠಾಣೆ ಪಿಎಸ್‌ಐ ಎನ್‌.ವೈ. ಗುಂಡೂರಾವ ಸೇರಿ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಭಾನುವಾರ ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ನಿವಾಸಿ ಇಸಾಕ್‌ ಅದೇ ಗ್ರಾಮದ ಯೇಸುಮಿತ್ರ ಎಂಬಾತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಯೇಸುಮಿತ್ರನು ಇಸಾಕಗೆ ಬೆತ್ತಲು ಮಾಡಿ ಮರಕ್ಕೆ ಕಟ್ಟಿಹಾಕಿ ಹತ್ಯೆ ಮಾಡಿದ್ದ. ಕೊಲೆಗೆ ಮುನ್ನ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದರೂ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸದೆ ಕರ್ತವ್ಯ ಲೋಪ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿ ಹಾಗೂ ಪೇದೆಗಳನ್ನು ಅಮಾನತು ಮಾಡಲಾಗಿದೆ.

ನ.23ರಂದು ಮಹಿಳೆಯೊಂದಿಗೆ ಇಸಾಕ್‌ ಸಿಕ್ಕಿ ಬಿದ್ದಾಗ, ಆತನನ್ನು ಕೋಣೆಯಲ್ಲಿ ಕೂಡಿಹಾಕಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಈ ಸಂದರ್ಭದಲ್ಲಿ ಗುರುಮಠಕಲ್‌ ಠಾಣೆಯ ಪಿಎಸ್‌ಐ ಎನ್‌.ವೈ. ಗುಂಡೂರಾವ್‌ ಅವರು ಸುರಪುರದಲ್ಲಿ ಬಂದೋಬಸ್ತ್‌ ಕರ್ತವ್ಯದಲ್ಲಿದ್ದರು. ಆದ್ದರಿಂದ ಠಾಣೆಯ ಪೇದೆಗಳಾದ ಭೀಮಾಶಂಕರ ಮತ್ತು ದಾವಲ್‌ಸಾಬ್‌ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ದೂರುದಾರರು ರಾಜೀ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ವಿಷಯವನ್ನು ಪೇದೆಗಳು ಪಿಎಸ್‌ಐ ಎನ್‌.ವೈ. ಗುಂಡೂರಾವ್‌ ಅವರ ಮೊಬೈಲ್‌ಗೆ ಕರೆ ಮಾಡಿ ತಿಳಿಸಿದ್ದಾರೆ. ಪಿಎಸ್‌ಐ ಸೂಚನೆ ಹಿನ್ನೆಲೆಯಲ್ಲಿ ಪೇದೆಗಳು ಘಟನಾ ಸ್ಥಳದಿಂದ ಠಾಣೆಗೆ ಮರಳಿದ್ದಾರೆ.

ಘಟನಾ ಸ್ಥಳದಿಂದ ಹಿಂದಿರುಗುವ ಮುನ್ನ ಪೊಲೀಸರು ಇಸಾಕ್‌ಗೆ ಕೋಣೆಯಿಂದ ಹೊರಗೆ ಕರೆತಂದಿಲ್ಲ. ಪೊಲೀಸರು ಮರಳಿದ ನಂತರ ಯೇಸುಮಿತ್ರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿ ಕೊಲೆಗೈದಿದ್ದ. ನ. 24ರಂದು ಬೆಳಗಿನ ಜಾವ ಇಸಾಕನ ಶವ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೊಲೀಸರು ಮುಂಜಾಗ್ರತೆವಹಿಸಿ ಇಸಾಕ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂಬ ಮಾತು ಗ್ರಾಮಸ್ಥರಿಂದ ಕೇಳಿ ಬಂತು.

ಕೊಲೆಗೀಡಾದ ಇಸಾಕನು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಕುಟುಂಬಸ್ಥರ ಎದುರೇ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾನೆ. ಇಸಾಕನನ್ನು ಕೋಣೆಯಲ್ಲಿ ಕೂಡಿ ಹಾಕಿದ ಕುಟುಂಬಸ್ಥರು ಗುರುಮಠಕಲ್‌ ಪೊಲೀಸರಿಗೆ ವಿಷಯ ತಿಳಿಸಿದ್ದರು. ಇಬ್ಬರು ಪೇದೆಗಳು ಸ್ಥಳಕ್ಕೆ ಭೇಟಿ ನೀಡದ ವೇಳೆ ಕುಟುಂಬಸ್ಥರು ರಾಜಿ ಆಗುತ್ತೇವೆ ಎಂದು ತಿಳಿಸಿದ್ದರಿಂದ ಪೇದೆಗಳು ವಾಪಸ್‌ಬಂದಿದ್ದಾರೆ. ಇವರ ಬಂದ ಮೇಲೆ ಇಸಾಕನನ್ನು ಕೊಲೆ ಮಾಡಲಾಗಿದೆ. ಕರ್ತವ್ಯ ಲೋಪ ಕಂಡು ಬಂದ ಪರಿಣಾಮ ಪಿಎಸ್‌ಐ ಮತ್ತು ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.

-ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಎಸ್ಪಿ, ಯಾದಗಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ