ಆ್ಯಪ್ನಗರ

ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಮುತಾಲಿಕ್ ಆಗ್ರಹ

'ದಲಿತರು ಸೇರಿದಂತೆ ಮೇಲ್ವರ್ಗದವರು ಕೂಡ ಮತಾಂತರ ಆಗುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗು ಆಗಿದೆ. ಮತ ಬ್ಯಾಂಕ್‌ಗಳಿಗಾಗಿ ಪಕ್ಷಗಳೂ ಇದನ್ನು ಬೆಂಬಲಿಸುತ್ತಿವೆ' - ಪ್ರಮೋದ್ ಮುತಾಲಿಕ್

Vijaya Karnataka 21 Nov 2021, 6:44 pm

ಹೈಲೈಟ್ಸ್‌:

  • ಮತ ಬ್ಯಾಂಕ್‌ಗಳಿಗಾಗಿ ಪಕ್ಷಗಳೂ ಇದನ್ನು ಬೆಂಬಲಿಸುತ್ತಿವೆ
  • ಗಾಂಧೀಜಿ ಅವರ ಕೂಡಾ ಮತಾಂತರವನ್ನು ವ್ಯಾಪಾರೀಕರಣ ಅಂದಿದ್ದರು
  • ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸುವಂತೆ ಆಗ್ರಹಿಸಿ ಜನವರಿ 1 ರಿಂದ ರಾಜ್ಯದಲ್ಲಿ ಪ್ರತಿಭಟನೆ: ಮುತಾಲಿಕ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web pramod muthalik
ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಮುತಾಲಿಕ್ ಆಗ್ರಹ
ಯಾದಗಿರಿ: ರಾಜ್ಯದಲ್ಲಿ ಬಲವಂತವಾಗಿ ಮತಾಂತರ ನಡೆಯುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ರಾಜ್ಯ ಸರಕಾರ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದರು.
ಯಾದಗಿರಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು ಸೇರಿದಂತೆ ಮೇಲ್ವರ್ಗದವರು ಕೂಡ ಮತಾಂತರ ಆಗುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗು ಆಗಿದೆ. ಅನಾದಿ ಕಾಲದಿಂದಲೂ ಮತಾಂತರ ನಡೆಯುತ್ತಿದೆ. ಮತ ಬ್ಯಾಂಕ್‌ಗಳಿಗಾಗಿ ಪಕ್ಷಗಳೂ ಇದನ್ನು ಬೆಂಬಲಿಸುತ್ತಿವೆ. ಇದಲ್ಲದೇ ಗಾಂಧೀಜಿ ಅವರ ಕೂಡಾ ಮತಾಂತರವನ್ನು ವ್ಯಾಪಾರೀಕರಣ ಅಂದಿದ್ದರು ಎಂದು ಮುತಾಲಿಕ್ ನೆನಪಿಸಿದರು.

ಕೇಂದ್ರ ಸರ್ಕಾರ 'ಹಲಾಲ್‌ ಮುಕ್ತ ಭಾರತ' ನಿರ್ಮಿಸಬೇಕು: ಪ್ರಮೋದ್ ಮುತಾಲಿಕ್ ಆಗ್ರಹ
ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ದಾವಣಗೆರೆ ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತರೂ ಮತಾಂತರವಾಗುತ್ತಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡಿರುವ ಮಹಾ ಸಭಾದ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಅವರು ಎಲ್ಲ ಜಿಲ್ಲೆಗಳಿಗೆ ಪತ್ರ ಕೂಡ ಬರೆದಿದ್ದಾರೆ. ಇದು ನಿಜಕ್ಕೂ ದೇಶಕ್ಕೇ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಣ ಮಾಡುವುದು ಅಗತ್ಯವಿದೆ. ಕೆಲವೊಂದು ಕಡೆಗೆ ಬ್ರಾಹ್ಮಣ ಸಮಾಜದವರು ಸಹ ಮತಾಂತರವಾಗುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.

ಇನ್ನು, ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆಗಿದ್ದವರು ತಮ್ಮ ಹಳೆಯ ಧರ್ಮದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಕ್ರಿಶ್ಚಿಯನ್‌ ರಾಷ್ಟ್ರವನ್ನಾಗಿ ಮಾಡಲು ಹುನ್ನಾರು ನಡೆದಿದೆ ಎಂದು ಗಂಭೀರವಾಗಿ ಆರೋಪ ಮಾಡಿದ ಪ್ರಮೋದ್ ಮುತಾಲಿಕ್ ಅವರು, ಇದಕ್ಕೆ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಜಾರಿಯಾಗುತ್ತಾ ಮತಾಂತರ ನಿಷೇಧ ಕಾಯ್ದೆ: ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ?
ಇದೇ ವೇಳೆ, ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸುವಂತೆ ಆಗ್ರಹಿಸಿ ಜನವರಿ 1 ರಿಂದ ರಾಜ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು. ಸರಕಾರ ಧ್ವನಿ ವರ್ಧಕ ನಿಷೇಧ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಸ್ವರೂಪವನ್ನು ಎದರಿಸಬೇಕಾಗುತ್ತದೆ. ದೊಡ್ಡ ದೊಡ್ಡ ಪ್ರಮಾಣದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಸುಪ್ರಿಂಕೋರ್ಟ್‌ ಆದೇಶ ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆ ಎಂದರು.

ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರ ಯಾವ ಕಾರಣಕ್ಕಾಗಿ ವಾಪಸ್‌ ಪಡೆದುಕೊಂಡಿದೆ ಎಂಬುದು ಗೊತ್ತಿಲ್ಲ. ಈ ನಿರ್ಧಾರ ಹಿನ್ನೆಡೆಗೆ ಕಾರಣ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮುತಾಲಿಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪಾಟೀಲ, ಸಂದೀಪ್‌, ರಾಜು, ಶಶಾಂಕ ನಾಯಕ, ಅಂಬ್ರೇಶ್‌ ಸೇರಿದಂತೆ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ