ಆ್ಯಪ್ನಗರ

ಭತ್ತ ಬೆಳೆಗಾರರ ರಾಜ್ಯ ಮಟ್ಟದ ಸಮಾವೇಶ

ಅತಿವೃಷ್ಟಿ ಅನಾವೃಷ್ಟಿಯಿಂದ ಫಸಲಿನಲ್ಲಿ ಇಳುವರಿಯಾದಾಗ ಸರಕಾರಗಳು ರೈತರ ನೆರವಿಗೆ ಬರಬೇಕು. ಅಂದಾಗಲೇ ದೇಶದಲ್ಲಿ ಅನ್ನದಾತ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ರೈತರ ಪ್ರತಿ ಬೆಳೆಗೂ ಬೆಂಬಲ ಬೆಲೆ ನಿಗದಿಪಡಿಸಲು ಶಾಸನ ಬದ್ಧ ಕಾಯ್ದೆ ಜಾರಿಗೆ ತರುವುದು ಅತ್ಯಂತ ಅಗತ್ಯವಾಗಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ ಕಮ್ಮರಡಿ ಹೇಳಿದರು.

Vijaya Karnataka 11 Dec 2018, 5:00 am
ಸುರಪುರ :ಅತಿವೃಷ್ಟಿ ಅನಾವೃಷ್ಟಿಯಿಂದ ಫಸಲಿನಲ್ಲಿ ಇಳುವರಿಯಾದಾಗ ಸರಕಾರಗಳು ರೈತರ ನೆರವಿಗೆ ಬರಬೇಕು. ಅಂದಾಗಲೇ ದೇಶದಲ್ಲಿ ಅನ್ನದಾತ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ರೈತರ ಪ್ರತಿ ಬೆಳೆಗೂ ಬೆಂಬಲ ಬೆಲೆ ನಿಗದಿಪಡಿಸಲು ಶಾಸನ ಬದ್ಧ ಕಾಯ್ದೆ ಜಾರಿಗೆ ತರುವುದು ಅತ್ಯಂತ ಅಗತ್ಯವಾಗಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ ಕಮ್ಮರಡಿ ಹೇಳಿದರು.
Vijaya Karnataka Web state level convention of rice growers
ಭತ್ತ ಬೆಳೆಗಾರರ ರಾಜ್ಯ ಮಟ್ಟದ ಸಮಾವೇಶ


ಕನಾಟಕ ಪ್ರಾಂತ ರೈತ ಸಂಘ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಭತ್ತ ಬೆಳೆಗಾರರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿ, ರೈತರ ಬೆಳೆಗಳ ಉತ್ಪಾದನ ಖರ್ಚು ವೆಚ್ಚ ಒಟ್ಟೂಗೂಡಿಸಿ ಬೆಂಬಲ ಬೆಲೆಗಾಗಿ ಶಿಫಾರಸ್ಸು ಮಾಡುತ್ತೇವೆ. ಬೆಂಬಲ ಬೆಲೆ ಘೋಷಣೆ ಮಾಡುವುದು ಕೇಂದ್ರದ ಕೆಲಸ. ಬೆಲೆ ನಿಗದಿ ಮತ್ತು ಆಮದು ನೀತಿ ಕೇಂದ್ರ ಸರಕಾರದ ಕೈಯಲ್ಲಿದೆ. ಹೀಗಾಗಿ ರೈತರಿಗೆ ಕೇಂದ್ರ ಸರಕಾರ ಯೋಗ್ಯ ಬೆಲೆ ನೀಡದೆ ರೈತರನ್ನು ಒಕ್ಕೆಲ್ಲೆಬಿಸುತ್ತಿದೆ. ಈ ಬಗ್ಗೆ ರೈತರು ಜಾಗೃತರಾಗಬೇಕು ಎಂದರು.

ಹಣ ದುಬ್ಬರದಿಂದ ಷೇರುಪೇಟೆಯಲ್ಲಿ ಏರು ಪೇರು ಉಂಟಾಗಿ ದೇಶದ ಅರ್ಥ ವ್ಯವಸ್ಥೆ ಹದಗೆಡುತ್ತದೆ ಎಂಬ ನೆಪ ಒಡ್ಡಿ ಕೇಂದ್ರ ಬೆಂಬಲ ಬೆಲೆ ಹೆಚ್ಚಿಸುತ್ತಿಲ್ಲ. ಬೆಲೆ ಆಯೋಗ ಹಲ್ಲು ಕಿತ್ತಿದ ಹಾವಿನಂತ್ತಾಗಿದೆ ಎಂದು ಕೇಂದ್ರದ ವಿರುದ್ದ ಆರೋಪಿಸಿದರು. ದೇಶದ ರೈತರನ್ನು ಉಳಿಸಬೇಕಾದಲ್ಲಿ ಕೇಂದ್ರ ಸರಕರ ದಿಟ್ಟ ಹೆಜ್ಜೆ ಇಡಬೇಕು. ಪ್ರತಿ ಬೆಳೆಗಳಿಗೆ ಆಯೋಗ ಕಳುಹಿಸುವ ಶಿಫಾರಸ್ಸಿನಂತೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ರಾಯಚೂರ ಕೃಷಿ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಜಿ.ಬಿ. ಲೋಕೇಶ. ಕೃಷಿ ಇಲಾಖೆ ಜಿಲ್ಲಾ ಸಾಹಯಕ ನಿರ್ದೇಶಕ ಬೀಮರಾಯ ದೊಡ್ಮನಿ,ಸಂಘದ ಜಿಲ್ಲಾ ಮುಖಂಡ ಚನ್ನಪ್ಪ ಆನೆಗುಂದಿ ಪ್ರಾಸ್ತವಿಕ ಮಾತನಾಡಿದರು. ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತಿ ಮಾನ್ಪಡೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು. ರಾಜ್ಯ ಸಮಿತಿ ಮುಖಂಡ ಶಾಂತರಾಮ ನಾಯಕ, ಸಿಐಟಿಯುವ ಜಿಲ್ಲಾ ಪ್ರಮುಖ ಸುರೇಖಾ ಕುಲಕರ್ಣಿ. ತಾಲೂಕು ಗೌರವ ಅಧ್ಯಕ್ಷ ನಂದಣ್ಣ ವಾರಿ, ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ, ವೇದಿಕೆಯ ಲ್ಲಿದ್ದರು. ಬಳ್ಳಾರಿ, ಗಂಗಾವತಿ, ಕೊಪ್ಪಳ, ಸಿಂಧನೂರ, ರಾಯಚೂರ, ಮಾನ್ವಿ, ಲಿಂಗಸೂರ, ದೇವದುರ್ಗ, ಯಾದಗಿರಿ, ಸೇರಿದಂತ ವಿವಿಧ ಜಿಲ್ಲೆ ತಾಲೂಕುಗಳಿಂದ ಆಗಮಿಸಿದ್ದ ರೈತ ಮುಖಂಡರು, ರೈತರು ಪಾಲ್ಗೊಂಡಿದ್ದರು.

ಜ. 8 ಮತ್ತು 9 ರಂದು ದೇಶವ್ಯಾಪಿ ಚಳವಳಿ

ಡಾ. ಸ್ವಾಮಿನಾಥನ್‌ ವರದಿಯಂತೆ ಒಟ್ಟು ಉತ್ಪಾದನಾ ವೆಚ್ಚ ಮತ್ತು ಶೇ. 50 ರಷ್ಟು ಲಾಭಾಂಶ ಸೇರಿಸಿ ರಾಜ್ಯ ಸರಕಾರದ ನೆರವಿನೊಂದಿಗೆ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 3,387 ರೂ. ಬೆಂಬಲ ಬೆಲೆ ನೀಡಬೇಕು ಎಂದು ಅಖಿಲ ಭಾರತ ಸಂಘದ ರಾಷ್ಟ್ರಿಯ ಉಪಾಧ್ಯಕ್ಷ ಎಸ್‌. ಮಲ್ಲಾರೆಡ್ಡಿ ಆಗ್ರಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಭತ್ತಕ್ಕೆ ಸದ್ಯಕ್ಕೆ ನೀಡುತ್ತಿರುವ 1750 ಬೆಂಬಲ ಬೆಲೆ ಯಾತಕ್ಕೂ ಸಾಲುವುದಿಲ್ಲ. ಬೆಂಬಲ ಬೆಲೆ ನೀಡದಿದ್ದರೆ ಜನೆವರಿ 8 ಮತ್ತು 9 ರಂದು ರೈತಪರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದೇಶವ್ಯಾಪಿ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೃಷ್ಣಾ ಕಾವೇರಿ, ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಇತರೆಡೆ ಸೇರಿ ಒಟ್ಟು 33,15,000 ಎಕರೆಗಳಲ್ಲಿ ರೈತರು ಭತ್ತ ಬೆಳೆಯುತ್ತಿದ್ದಾರೆ. 61.18 ಲಕ್ಷ ಟನ್‌ ನಷ್ಟು ಅಕ್ಕಿ ಉತ್ಪಾದನೆ ಮಾಡುತ್ತಿದ್ದಾರೆ. ಬೀಜ, ರಸಗೊಬ್ಬರ, ಕ್ರಿಮಿನಾಶಕಗಳಿಗೆ ಲಕ್ಷಾಂತ ರೂ. ಖರ್ಚು ಮಾಡಿ ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ. ಇತ್ತ ಸರಕಾರದಿಂದ ವೈಜ್ಞಾನಿಕ ಬೆಂಬಲ ಬೆಲೆ ದೊರಕುತ್ತಿಲ್ಲ. ಹೀಗಾಗಿ ರೈತರು ಅನಿವಾರ್ಯವಾಗಿ ನೇಣಿಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕೇಂದ್ರದ ರೈತ ವಿರೋಧಿ ನೀತಿಯೇ ಕಾರಣವಾಗಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ